More

    VIDEO| ಸನ್ನಿ ಲಿಯೋನ್​ ಹಾಡಿಗೆ ಸೊಂಟ ಬಳುಕಿಸುತ್ತಲೇ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟ ವಧು..!

    ಮುಂಬೈ: ಹಿಂದೆ ಒಂದು ಕಾಲವಿತ್ತು ಮದುವೆಯೆಂದರೆ ವಧು ನಾಚಿ ನೀರಾಗುತ್ತಿದ್ದಳು. ಆದರೆ, ಈಗ ಕಾಲ ಬದಲಾಗಿದೆ. ನಾಚಿಕೆಯನ್ನು ಪಕ್ಕಕ್ಕಿಟ್ಟು ಮದುವೆ ಮಂಟಪದಲ್ಲಿ ಡ್ಯಾನ್ಸ್​ ಮಾಡುವ ಮೂಲಕವೇ ವರನೇ ನಾಚಿಕೊಳ್ಳುವಂತೆ ಮಾಡುತ್ತಿದ್ದಾಳೆ.

    ಹೌದು, ಇದೇ ಪ್ರಸಂಗ ಮಹಾರಾಷ್ಟ್ರದಲ್ಲಿ ಜರುಗಿದೆ. ವಧುವೊಬ್ಬಳು ಬಾಲಿವುಡ್​ ಮಾದಕ ನಟಿ ಸನ್ನಿ ಲಿಯೋನ್​ ಹಾಡಿಗೆ ಡ್ಯಾನ್ಸ್​ ಮಾಡುತ್ತಲೇ ಮಂಟಪಕ್ಕೆ ಭರ್ಜರಿ ಎಂಟ್ರಿ ಕೊಡುವ ಮೂಲಕ ಮದುವೆಗೆ ಬಂದಿದ್ದ ಅತಿಥಿಗಳು ಹುಬ್ಬೇರುವಂತೆ ಮಾಡಿದ್ದಾಳೆ.

    ಇದನ್ನೂ ಓದಿ: VIDEO| ಸುರಕ್ಷತಾ ಕ್ರಮ ಬಳಸದೇ ಬರಿಗೈಯಲ್ಲಿ 690 ಅಡಿ ಎತ್ತರದ ಕಟ್ಟಡವೇರಿದ ಸಾಹಸಿಗನಿಗೆ ಬಹುಪರಾಕ್​!

    ಸನ್ನಿ ಲಿಯೋನ್​ ಅವರ ಮೇರೆ ಸಿಯಾನ್​ ಸೂಪರ್​ಸ್ಟಾರ್​ ಕ್ರೇಜಿ ಹಾಡಿಗೆ ವಧು ಹೆಜ್ಜೆ ಹಾಕಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ. ಮರಾಠಿ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಭರ್ಜರಿಯಾಗಿ ಸಿಂಗಾರ ಮಾಡಿಕೊಂಡು, ಕಣ್ಣಿಗೆ ಸನ್​ಗ್ಲಾಸ್​ ಧರಿಸಿ ಮಂಟಪಕ್ಕೆ ಆಗಮಿಸಿದ ವಧು, ವರ ನಿಂತಿದ್ದ ವೇದಿಕೆಯತ್ತ ಸನ್ನಿ ಲಿಯೋನ್​ ಹಾಡಿಗೆ ಸೊಂಟ ಬಳುಕಿಸುತ್ತಾ ಸಾಗಿದಳು. ಕೊನೆಗೆ ವರನ ಬಳಿ ತೆರಳಿ ಆತನ ಕೈಗೆ ಮುತ್ತು ನೀಡಿ ವೇದಿಕೆ ಏರಿದಳು.

    ವಧುವಿನ ನೃತ್ಯವನ್ನು ರಪ್ಪೆ ಬಡಿಯದೇ ಅತಿಥಿಗಳು ಕಣ್ತುಂಬಿಕೊಂಡರು. ಇನ್ನು ಕೆಲವರು ತಮ್ಮ ಮೊಬೈಲ್​ ಕ್ಯಾಮೆರಾ ಕಣ್ಣಲ್ಲಿ ವಧುವಿನ ಡ್ಯಾನ್ಸ್​ ಸೆರೆಹಿಡಿದುಕೊಂಡರು. ವೇದಿಕೆಯಲ್ಲೇ ತನ್ನ ಭಾವಿ ಪತ್ನಿಯ ಡ್ಯಾನ್ಸ್​ ನೋಡುತ್ತಾ ನಿಂತಿದ್ದ ವರನೇ ನಾಚಿ ನೀರಾದನು. ಸದ್ಯ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಧುವಿನ ನೃತ್ಯಕ್ಕೆ ಫಿದಾ ಆಗಿದ್ದಾರೆ. (ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts