More

    ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಮುಗ್ಗರಿಸಿದ ಪಿವಿ ಸಿಂಧು, ಸಮೀರ್ ವರ್ಮ, ಉಪಾಂತ್ಯಕ್ಕೇರಿದ ಅಶ್ವಿನಿ ಪೊನ್ನಪ್ಪ- ಸಾತ್ವಿಕ್ ಜೋಡಿ

    ಬ್ಯಾಂಕಾಕ್: ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಟೊಯೋಟಾ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ ಹಾಗೂ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿೈನಲ್‌ಗೇರಿದ್ದಾರೆ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್, ಕನ್ನಡತಿ ಅಶ್ವಿನಿ ಪೊನ್ನಪ್ಪ ಜೋಡಿ ಹಾಗೂ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿರಾಗ್ ಶೆಟ್ಟಿ ಜತೆಗೂಡಿ ಉಪಾಂತ್ಯಕ್ಕೇರಿದರು. ವಿಶ್ವ ಚಾಂಪಿಯನ್ ಪಿವಿ ಸಿಂಧು ಹಾಗೂ ಸಮೀರ್ ವರ್ಮ ಸಿಂಗಲ್ಸ್ ವಿಭಾಗದಲ್ಲಿ ಸೋಲನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸಿಂಗಲ್ಸ್ ವಿಭಾಗದ ಹೋರಾಟ ಅಂತ್ಯಗೊಂಡಿದೆ.

    ಇದನ್ನೂ ಓದಿ: ರಾಬಿನ್ ಉತ್ತಪ್ಪ ಮುಂದಿನ ಐಪಿಎಲ್ನಲ್ಲಿ ಆಡುತ್ತಿರುವ ತಂಡ ಯಾವುದೇ ಗೊತ್ತೇ..?

    ಶ್ರೇಯಾಂಕರಹಿತ ಅಶ್ವಿನಿ-ಸಾತ್ವಿಕ್ ಜೋಡಿ ಎಂಟರ ಘಟ್ಟದ ಪಂದ್ಯದಲ್ಲಿ 5ನೇ ಶ್ರೇಯಾಂಕಿತ ಮಲೇಷ್ಯಾದ ಪೆಂಗ್ ಸೂಚ್ ಚಾನ್ ಮತ್ತು ಲಿಯು ಯಿಂಗ್ ಗೋಹ್ ಜೋಡಿಗೆ 3 ಗೇಮ್‌ಗಳ ಕಠಿಣ ಹೋರಾಟದಲ್ಲಿ ಸೋಲುಣಿಸುವ ಮೂಲಕ ಈ ಸಾಧನೆ ಮಾಡಿತು. ಒಂದು ಗಂಟೆ ಮತ್ತು 15 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಅಶ್ವಿನಿ-ಸಾತ್ವಿಕ್ ಜೋಡಿ 18-21, 24-22, 22-20ರಿಂದ ಮಲೇಷ್ಯಾ ಜೋಡಿಯನ್ನು ಮಣಿಸಿತು. ವಿಶ್ವ ನಂ. 22 ಅಶ್ವಿನಿ-ಸಾತ್ವಿಕ್ ಜೋಡಿ ಉಪಾಂತ್ಯದಲ್ಲಿ ಅಗ್ರ ಶ್ರೇಯಾಂಕಿತ ಥಾಯ್ಲೆಂಡ್‌ನ ಡೆಚಪೊಲ್ ಪೌವರಾನುಕ್ರೋಹ್ ಮತ್ತು ಸಪ್ಸಿರೀ ಟಯಿರಟ್ಟನಚಾಯ್ ಜೋಡಿಯನ್ನು ಎದುರಿಸಲಿದೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಜೋಡಿ 21-18, 24-22 ರಿಂದ ಮಲೇಷ್ಯಾದ ಯೂವ್ ಸಿನ್ ಹಾಗೂ ಟಿಯೊ ಯೀ ಜೋಡಿ ಎದುರು ಭರ್ಜರಿ ಜಯ ದಾಖಲಿಸಿತು.

    ಇದನ್ನೂ ಓದಿ: 8 ವರ್ಷದಿಂದ ಕಪ್ ಗೆಲ್ಲದಿದ್ದರೂ ಕ್ಯಾಪ್ಟನ್ ಆಗಿದ್ದು ಹೇಗೆ..? ಆರ್ ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಾಲೆಳೆದ ಗಂಭೀರ್ 

    * ಸಿಂಧು, ಸಮೀರ್‌ಗೆ ನಿರಾಸೆ
    ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 6ನೇ ಶ್ರೇಯಾಂಕಿತ ಆಟಗಾರ್ತಿ, ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು 13-21, 9-21 ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ರಚಾನೊಕ್ ಇನ್‌ತಾನೊನ್ ಎದುರು ಕೇವಲ 38 ನಿಮಿಷಗಳ ಹೋರಾಟದಲ್ಲಿ ಸೋಲನುಭವಿಸಿದರು. ಎರಡೂ ಗೇಮ್‌ಗಳಲ್ಲೂ ನೀರಸ ನಿರ್ವಹಣೆ ತೋರಿದ ಸಿಂಧು ಸ್ಥಳೀಯ ಆಟಗಾರ್ತಿಯ ಆಕರ್ಷಕ ಚುರುಕಿನ ಪ್ರದರ್ಶನದ ಎದುರು ಮಂಕಾದರು. ಇದಕ್ಕೂ ಮೊದಲು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಸಮೀರ್ ವರ್ಮ 13-21, 19-21, 20-22 ರಿಂದ 3ನೇ ಶ್ರೇಯಾಂಕಿತ ಡೆನ್ಮಾರ್ಕ್‌ನ ಅಂಡರ್ಸ್‌ ಅಂಟೊನ್ಸೆನ್ ಎದುರು ವೀರೋಚಿತ ಸೋಲು ಕಂಡರು. 81 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಗೆಲುವಿಗಾಗಿ ಹೋರಾಡಿದ ಸಮೀರ್ ವರ್ಮ ಸೋಲಿನಲ್ಲೂ ಗಮನಾರ್ಹ ನಿರ್ವಹಣೆ ತೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts