More

    ಒಂದು ಟ್ವಿಟ್​ನಿಂದಾಗಿ ಆತ ಕಳೆದುಕೊಂಡ ಮೊತ್ತ 22 ಸಾವಿರ ಕೋಟಿ ರೂ…!

    ಕ್ಯಾಲಿಫೋರ್ನಿಯಾ: ‘ನಮ್ಮ ಕಂಪನಿ ಷೇರುಗಳು ಭಾರಿ ಲಾಭದಲ್ಲಿವೆ’ ಹೀಗೊಂದು ಟ್ವಿಟ್​ ಮಾಡಿದ ಕೆಲ ಹೊತ್ತಿನಲ್ಲಿ ಆ ಕಂಪನಿ ಷೇರು ಮಾರುಕಟ್ಟೆಯಲ್ಲಿ ಕಳೆದುಕೊಂಡಿದ್ದು ಬರೋಬ್ಬರಿ 14 ಬಿಲಿಯನ್​ ಡಾಲರ್​ (ಅಂದಾಜು 10 ಲಕ್ಷ ಕೋಟಿಗೂ ಅಧಿಕ ). ಹಾಗೇ ಟ್ವಿಟ್​ ಮಾಡಿದ ವ್ಯಕ್ತಿ ವೈಯಕ್ತಿವಾಗಿ ಹಾನಿ ಮಾಡಿಕೊಂಡಿದ್ದು 22,600 ಕೋಟಿ ರೂ.ಗಳು.

    ಆ ಕಂಪನಿ ಹೆಸರು ಟೆಸ್ಲಾ ಹಾಗೂ ಟ್ವಿಟ್​ ಮಾಡಿದ್ದು ಕಂಪನಿಯ ಸಿಇಒ ಎಲಾನ್​ ಮಸ್ಕ್​.

    ಕಂಪನಿ ಷೇರುಗಳ ಬಗ್ಗೆ ಮುಖ್ಯಸ್ಥನೇ ಹೇಳಿಕೆ ಕೊಡುವುದು ಸೂಕ್ತವಲ್ಲ ಹಾಗೂ ಅನಿರೀಕ್ಷಿತವೂ ಆದರೆ, ಇದೆಲ್ಲಕ್ಕಿಂತ ತಾನು ಭಿನ್ನ ಎಂಬುದನ್ನು ತೋರಿಸುವುದೇ ಮಸ್ಕ್​ ಉದ್ದೇಶ. ಆತನನ್ನು ದ್ವೇಷಿಸಬಹುದು ಅಥವಾ ಪ್ರೀತಿಸಬಹುದು ಬೇರೆ ಆಯ್ಕೆಗಳೇ ಇಲ್ಲ ಎಂಬಂಥ ವ್ಯಕ್ತಿತ್ವ ಮಸ್ಕ್​ನದ್ದು. ಅಷ್ಟೇ ವಿಚಿತ್ರ ಹಾಗೂ ವರ್ಣರಂಜಿತ ಕೂಡ.

    ಕಳೆದ ವಾರ ಈ ಘಟನೆ ನಡೆದಿದೆಯಷ್ಟೇ, ಇದೀಗ ಇನ್ನೊಂದು ವಿಚಿತ್ರ ನಿರ್ಧಾರಕ್ಕೆ ಮುಂದಾಗಿ ಮಸ್ಕ್​ ಮತ್ತಷ್ಟು ಅಚ್ಚರಿಗೆ ಕಾರಣನಾಗಿದ್ದಾನೆ.

    ಇದನ್ನೂ ಓದಿ; ದೇಶೀಯವಾಗಿ ತಯಾರಾಯ್ತು ಕೋವಿಡ್​ ಪರೀಕ್ಷಾ ಕಿಟ್​

    ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್​ ಕಾರು ಉತ್ಪಾದನಾ ಘಟಕ ಕೂಡ ಕ್ಯಾಲಿಫೋರ್ನಿಯಾದ ಫ್ರೆಮಾಂಟ್​ನಲ್ಲಿದೆ. ಕೋವಿಡ್​ ಸಂಕಷ್ಟದಿಂದಾಗಿ ಸ್ಥಳೀಯಾಡಳಿತ ಕಾರ್ಖಾನೆಯಲ್ಲಿ ಉತ್ಪಾದನಾ ಚಟುವಟಿಕೆ ನಡೆಸಲು ಕಂಪನಿಗೆ ಅನುಮತಿ ನೀಡುತ್ತಿಲ್ಲ. ಇದು ಮಸ್ಕ್​ಗೆ ಇನ್ನಿಲ್ಲದ ಕೋಪ ತರಿಸಿದೆ. ಹೀಗಾಗಿ ಕಾರು ಉತ್ಪಾದನಾ ಘಟಕವನ್ನೇ ಕ್ಯಾಲಿಫೋರ್ನಿಯಾದಿಂದ ಟೆಕ್ಸಾಸ್​ ಅಥವಾ ನೆವಡಾ ರಾಜ್ಯಕ್ಕೆ ಸ್ಥಳಾಂತರಿಸುವುದಾಗಿ ಹೇಳಿದ್ದಾನೆ. . ಅಷ್ಟೇ ಅಲ್ಲ ಸ್ಥಳೀಯಾಡಳಿತದ ವಿರುದ್ಧ ಕೋರ್ಟ್​ನಲ್ಲಿ ದಾವೆ ಹೂಡುವುದಾಗಿ ಮಸ್ಕ್​ ಎಚ್ಚರಿಕೆ ನೀಡಿದ್ದಾನೆ. ಇದು ಸ್ಥಳೀಯಾಡಳಿತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

    ಜನರನ್ನು ಬಾಹ್ಯಾಕಾಶ ಪ್ರವಾಸಕ್ಕೆ ಕರೆದೊಯ್ಯುವ ಯೋಜನೆ ಅನುಷ್ಠಾನದಲ್ಲಿ ಆತನ ಕಂಪನಿ ಬಿಜಿಯಾಗಿದೆ. ಅದಕ್ಕಾಗಿ 50ಕ್ಕೂ ಅಧಿಕ ರಾಕೆಟ್​ಗಳನ್ನು ಉಡಾಯಿಸಿ ಪರೀಕ್ಷೆ ಮಾಡಿದೆ. ಮಿಲಿಯನ್​ಗಟ್ಟಲೇ ಸಾಮಗ್ರಿಯನ್ನು ಮಂಗಳ ಗ್ರಹಕ್ಕೆ ಕೊಂಡೊಯ್ದು ಅಲ್ಲೊಂದು ವಸಾಹತುವನ್ನು ನಿರ್ಮಿಸುವ ಮಹದೋದ್ದೇಶ ಆತನದ್ದು.

    ಇದನ್ನೂ ಓದಿ; ಪ್ರತ್ಯೇಕತಾವಾದಿ ಬೆಂಬಲಿಗರಿಗೆ ಪ್ರಶಸ್ತಿ ನೀಡಿತಾ ಪುಲಿಟ್ಜರ್​; ಸಮಿತಿಗೆ ನೂರಾರು ಗಣ್ಯರಿಂದ ಪತ್ರ

    ಷೇರುಪೇಟೆಯಲ್ಲಿ ನಷ್ಟವಾದರೇನಂತೆ, ತನ್ನ ಒಡೆನದ ಎರಡು ಐಷಾರಾಮಿ ಬಂಗ್ಲೆಗಳನ್ನು ಮಾರಾಟ ಮಾಡುವುದಾಗಿ ಆತ ಘೋಷಿಸಿದ. ಎರಡು ದಿನಗಳ ಬಳಿಕ ಕ್ಯಾಲಿಫೋರ್ನಿಯಾದಲ್ಲಿರುವ ಎರಡು ಮನೆಗಳನ್ನು ಮಾರಾಟಕ್ಕಿಟ್ಟ. ಇದು ಕ್ಯಾಲಿಫೋರ್ನಿಯಾ ತೊರೆಯಲು ಆತ ಸಜ್ಜಾಗಿರುವುದಕ್ಕೆ ಮುನ್ಸೂಚನೆ ಎಂಬಂತಾಗಿತ್ತು.

    ಟೆಸ್ಲಾ ಖಾಸಗಿ ಕಂಪನಿಯಾಗಲಿದೆ ಎಂಬ ಹೇಳಿಕೆ ನೀಡಿ ತಾನೇ ಹುಟ್ಟುಹಾಕಿದ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನೇ ಕಳೆದುಕೊಂಡಿರುವ ಎಲಾನ್​ ಮಸ್ಕ್​ ಕೈಗೊಳ್ಳುವ ನಿರ್ಧಾರಗಳು ಕೂಡ ಅಷ್ಟೇ ವಿಚಿತ್ರ ಎನ್ನುವುದಕ್ಕೆ ಈ ಮೂಲಕ ಮತ್ತೊಂದು ನಿದರ್ಶನ ಸಿಕ್ಕಂತಾಗಿದೆ.

    ತಾಯ್ನಾಡು ಕರೆಸಿಕೊಳ್ಳುತ್ತಿಲ್ಲ, ಭಾರತ ವೀಸಾ ನೀಡುತ್ತಿಲ್ಲ; 55 ದಿನಗಳಿಂದ ವಿಮಾನ ನಿಲ್ದಾಣವೇ ಆತನಿಗೆ ಜಗತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts