More

    ಉಗ್ರನ ಮಗನಿಂದು KAS ಅಧಿಕಾರಿ: ವಿಶೇಷ ಸಾಧಕನಿಗೆ ಭಾರತೀಯ ಸೇನೆಯ ಗೌರವ!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮೃತ ಭಯೋತ್ಪಾದಕನ ಮಗನೊಬ್ಬ ಕೆಎಎಸ್​ (ಜಮ್ಮು ಕಾಶ್ಮೀರ ಆಡಳಿತ) ಅಧಿಕಾರಿಯಾಗುವ ಮೂಲಕ​ ಇತರರಿಗೆ ಮಾದರಿಯಾಗಿದ್ದು, ಭಾರತೀಯ ಸೇನೆಯ ಗೌರವಕ್ಕೆ ಪಾತ್ರರಾಗಿದ್ದಾರೆ.

    ಜಮ್ಮುವಿನಲ್ಲಿ ಹಿಂದೊಮ್ಮೆ ಭಯೋತ್ಪಾದನಾ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದ ದೊಡಾ ಜಿಲ್ಲೆಯ ರಿಮೋಟ್​ ಏರಿಯಾ ಗುಂಡ್ನಾ ಗ್ರಾಮದಲ್ಲಿ ಈ ಅದ್ಭುತ ಪ್ರತಿಭೆ ಅರಳಿದೆ. ಉಗ್ರ ಹತ್ಯೆಯ ಬಳಿಕ ಆತನ ಮಗ ಘಾಜಿ ಅದ್ಬುಲ್ಲಾನನ್ನು ಶ್ರೀನಗರದ ಅನಾಥಾಶ್ರಮದಲ್ಲಿ ಬೆಳೆಸಲಾಗಿತ್ತು. ಸಾಕಷ್ಟು ಸವಾಲುಗಳನ್ನು ಎದುರಿಸಿ, ತುಂಬಾ ಕಠಿಣ ಶ್ರಮದೊಂದಿಗೆ ತನ್ನ ಗುರಿ ಸಾಧಿಸುವ ಮೂಲಕ ಘಾಜಿ ಅದ್ಬುಲ್ಲಾ ಕಾಶ್ಮೀರದ ಅಧಿಕಾರಿಯಾಗಿದ್ದು, ಇತರರಿಗೆ ಉತ್ತಮ ಉದಾಹರಣೆಯಾಗಿದ್ದಾರೆ.

    ಆಲಿಗಢ ಮುಸ್ಲಿಂ ಯೂನಿವರ್ಸಿಟಿಯಲ್ಲಿ ಓದಿದ ಬಳಿಕ ಜಮ್ಮು ಮತ್ತು ಕಾಶ್ಮೀರದ ಪ್ರತಿಷ್ಠಿತ ಕೆಎಎಸ್​ ಪರೀಕ್ಷೆಯನ್ನು ಪಾಸ್​ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಟ್​ಪುರದಲ್ಲಿ ಭಾರತೀಯ ಸೇನೆ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು ಅಧಿಕಾರಿಗೆ ವಿಶೇಷ ಗೌರವ ಸಲ್ಲಿಸಿದೆ. ಇದೇ ವೇಳೆ ಘಾಜಿ ಅಬ್ದುಲ್ಲಾ ವಿದ್ಯಾರ್ಥಿಗಳೊಂದಿಗೆ ತಮ್ಮ ಹೋರಾಟದ ಹಾದಿಯನ್ನು ಮೆಲಕು ಹಾಕಿದರು.

    ಇದನ್ನೂ ಓದಿ: VIDEO| ಮದುವೆಯಾಗಲು ದೇವಸ್ಥಾನಕ್ಕೆ ಹೊರಟ ಪ್ರೇಮಿಗಳು ಮಾರ್ಗ ಮಧ್ಯೆಯೇ ಶವವಾದರು..!

    ಕಠಿಣ ಪರಿಶ್ರಮ ಹೇಗೆ ವ್ಯಕ್ತಿಯೊಬ್ಬನ ಹಣೆಬರಹವನ್ನು ಬದಲಾಯಿಸಬಹುದು ಎಂಬುದಕ್ಕೆ ಘಾಜಿ ಅಬ್ದುಲ್ಲಾ ಉತ್ತಮ ಉದಾಹರಣೆ ಎಂದು ಸೇನಾ ವಕ್ತಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಗ್ರತ್ವದೊಂದಿಗೆ ಹೋರಾಟ, ಬಡತನ ಮತ್ತು ಪ್ರತಿಕೂಲ ವಾತವಾರಣಕ್ಕೆ ಎದೆಗುಂದದೆ ಘಾಜಿ ಕೆಎಎಸ್​ ಪರೀಕ್ಷೆ ಮಾಡಿದ್ದಾರೆ.

    ತಮ್ಮ ಯಶಸ್ಸಿನ ಮಂತ್ರದ ಬಗ್ಗೆ ಹೇಳಿದ ಘಾಜಿ, ಉತ್ತಮ ತರಬೇತಿಯೊಂದಿಗೆ ಕಠಿಣ ಪರಿಶ್ರಮವಿದ್ದರೆ ಅಸಾಧ್ಯ ಎಂಬುದು ಇರುವುದಿಲ್ಲ. ಗುರಿಯನ್ನು ತಲುಪಲು ನಿರ್ಧಿಷ್ಟ ಉದ್ದೇಶಗಳನ್ನು ತೆಗೆದುಕೊಳ್ಳುತ್ತದೆ. ಇಂದಿನ ದಿನಗಳಲ್ಲಿ ಶಿಕ್ಷಣ ಸುಲಭವಾಗಿ ದೊರೆಯುತ್ತದೆ. ಯಾವುದೇ ಏರಿಯಾದ ವಿದ್ಯಾರ್ಥಿಯು ಸಹ ಶಿಕ್ಷಣವನ್ನು ಪಡೆಯಬಹುದು. ಸಮರ್ಪಣಾ ಭಾವದಿಂದ ಶ್ರಮವಹಿಸಿದರೆ ಯುಕವರು ಸಾಧನೆ ಮಾಡಬಹುದು ಎಂದಿದ್ದಾರೆ.

    ಕಷ್ಟಗಳು ಬಂದವು ಆದರೆ ಎಂದಿಗೂ ಬಿಟ್ಟುಕೊಡಲಿಲ್ಲ
    ಬಾಲ್ಯದಿಂದಲೂ ನನ್ನ ಜೀವನ ಪ್ರಯಾಣದಲ್ಲಿ ಸಾಕಷ್ಟು ಅಡೆತಡೆಗಳು ಎದುರಾದವು. ಆದರೆ, ಅಧಿಕಾರಿಯಾಬೇಕೆಂಬ ನನ್ನ ಗುರಿಯನ್ನು ನಾನೆಂದು ಬಿಟ್ಟು ಕೊಡಲಿಲ್ಲ. ಇನ್ನು ಉಗ್ರತ್ವ ಮುಕ್ತವಾಗಿರುವ ಪ್ರದೇಶಗಳಲ್ಲಿ ಯುವ ಜನಾಂಗಕ್ಕೆ ಸಾಕಷ್ಟು ಅವಕಾಶಗಳು ತೆರೆದುಕೊಂಡಿರುತ್ತವೆ ಎಂದು ಅಬ್ದುಲ್ಲಾ ಹೇಳಿದರು. (ಏಜೆನ್ಸೀಸ್​)

    ಕಾಂಗ್ರೆಸ್​ ಮಾನಸಿಕ ಅಸ್ವಸ್ಥ ಎಂದದ್ದಕ್ಕೆ ಖುಷ್ಬೂ ಕ್ಷಮೆ- ಮನೋರೋಗಿಗಳ ಬಗ್ಗೆ ಗೌರವವಿದೆ ಎಂದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts