More

    ಪಿಒಕೆಯಲ್ಲಿನ ಉಗ್ರರ ಶಿಬಿರ, ಲಾಂಚ್​ಪ್ಯಾಡ್​ಗಳು ಭರ್ತಿ

    ವದೆಹಲಿ: ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಇರುವ ಉಗ್ರರ ಶಿಬಿರಗಳು ಮತ್ತು 15 ಲಾಂಚ್​ಪ್ಯಾಡ್​ಗಳು ಭರ್ತಿಯಾಗಿವೆ. ಬೇಸಿಗೆಯ ಸಮಯದಲ್ಲಿ ಈ ಪ್ರದೇಶದಲ್ಲಿ ಹಿಮ ಕಡಿಮೆಯಾಗುವುದರಿಂದ, ಭಾರತದಲ್ಲಿ ನುಸುಳುವಿಕೆಯ ಉಗ್ರರ ಪ್ರಯತ್ನಗಳು ಹೆಚ್ಚಾಗಲಿವೆ ಎಂದು ಭಾರತೀಯ ಸೇನಾಪಡೆಯ ಲೆಫ್ಟಿನೆಂಟ್​ ಜನರಲ್​ ಬಿ.ಎಸ್​. ರಾಜು ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಆಯಕಟ್ಟಿನ ಜಾಗದಲ್ಲಿ ಸ್ಥಿತವಾಗಿರುವ 15 ಕೋರ್​ನ ಮುಖ್ಯಸ್ಥರಾಗಿ ಲೆ.ಜ. ಬಿ.ಎಸ್​. ರಾಜು ಮಾರ್ಚ್​ 1ರಂದು ಅಧಿಕಾರ ಸ್ವೀಕರಿಸಿದ್ದಾರೆ. ಉಗ್ರರ ಗಡಿ ನುಸುಳುವಿಕೆಗೆ ಅನುವು ಮಾಡಿಕೊಡಲು ಪಾಕ್​ ಯೋಧರು ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ತಕ್ಕದುದಾದ ಪ್ರತಿ ದಾಳಿ ಮಾಡುವ ಮೂಲಕ ಉಗ್ರರ ಒಳನುಸುಳುವಿಕೆಯನ್ನು ವಿಫಲಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ಪ್ರಗತಿ ಕಾಣದ ಮಾತುಕತೆ; ಲಡಾಖ್​ ಬಳಿ ಭಾರತ-ಚೀನಾ ಸೇನಾ ಜಮಾವಣೆ

    ಇವರ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಯಾಶೀಲರಾಗಿದ್ದ ಉಗ್ರರ ಪಡೆಯ ಬೆನ್ನೆಲುಬನ್ನೇ ಭದ್ರತಾಪಡೆಗಳು ಪುಡಿಗಟ್ಟಿವೆ. ಇದೀಗ ಕಣಿವೆ ರಾಜ್ಯ ಹಾಗೂ ಕಣಿವೆ ಕೇಂದ್ರಾಡಳಿತ ಪ್ರದೇಶದ ಜನರು ಶಾಂತಿ ಹಾಗೂ ನೆಮ್ಮದಿಯಿಂದ ಬದುಕುತ್ತಿರುವುದನ್ನು ಅರಗಿಸಿಕೊಳ್ಳಲಾಗದ ಪಾಕಿಸ್ತಾನ, ಅಲ್ಲಿ ಸೊರಗುತ್ತಿರುವ ಉಗ್ರರ ಸಂಖ್ಯೆಯನ್ನು ಹೆಚ್ಚಿಸಲು ಹುನ್ನಾರ ನಡೆಸುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದರು.

    ಈ ಕಾರಣಕ್ಕಾಗಿ ಪಿಒಕೆಯಲ್ಲಿ ಇರುವ ಎಲ್ಲ ಉಗ್ರರ ಶಿಬಿರಗಳು ಮತ್ತು 15 ಲಾಂಚ್​ಪ್ಯಾಡ್​ಗಳಲ್ಲಿ ಉಗ್ರರನ್ನು ಸಂಪೂರ್ಣವಾಗಿ ಭರ್ತಿಗೊಳಿಸಲಾಗಿದೆ. ಇವರೆಲ್ಲರೂ ಒಳನುಸುಳುವಿಕೆಗೆ ಸಿಗುವ ಅವಕಾಶದ ನಿರೀಕ್ಷೆಯಲ್ಲಿ ಸನ್ನದ್ಧರಾಗಿ ಕುಳಿತಿದ್ದಾರೆ ಎಂದು ಹೇಳಿದರು.

    ಐದು ದಶಕಗಳ ಬಳಿಕ ಕೊನೆಗೂ ಸಹೋದರಿ ಕೈ ಸೇರಿದ ಯೋಧನ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts