More

    ಪ್ರಗತಿ ಕಾಣದ ಮಾತುಕತೆ; ಲಡಾಖ್​ ಬಳಿ ಭಾರತ-ಚೀನಾ ಸೇನಾ ಜಮಾವಣೆ

    ನವದೆಹಲಿ: ಲಡಾಖ್​ನಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಭಾರತ ಮತ್ತು ಚೀನಾ ನಡುವೆ ವಿವಿಧ ಹಂತಗಳಲ್ಲಿ ನಡೆಯುತ್ತಿರುವ ಮಾತುಕತೆ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಭಾರತ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಯೋಧರು ಮತ್ತು ಯುದ್ಧೋಪಕರಣಗಳನ್ನು ವಾಸ್ತವ ಗಡಿರೇಖೆ (ಎಲ್​ಎಸಿ) ಬಳಿಗೆ ರವಾನಿಸುತ್ತಿದೆ.

    ಈಗಾಗಲೆ ಆ ಪ್ರದೇಶದಲ್ಲಿ ಬೀಡುಬಿಟ್ಟಿರುವ 5 ಸಾವಿರಕ್ಕೂ ಹೆಚ್ಚು ಚೀನಿ ಯೋಧರ ಸಂಖ್ಯೆಯನ್ನು ಮೀರಿಸುವಂತೆ ಭಾರತ ಯೋಧರನ್ನು ಎಲ್​ಎಸಿ ಬಳಿ ಜಮಾವಣೆ ಮಾಡುತ್ತಿದೆ ಎನ್ನಲಾಗಿದೆ.

    ಲಡಾಖ್​ನ ಗಲ್ವಾನ್​ ಪ್ರದೇಶದ ಮೂರು ಕಡೆ ಮತ್ತು ಪ್ಯಾಂಗಾಂಗ್​ ತ್ಸೊ ಸರೋವರ ಸೇರಿ ನಾಲ್ಕು ಕಡೆಗಳಲ್ಲಿ ಭಾರತ ಮತ್ತು ಚೀನಾದ ಯೋಧರು ಪರಸ್ಪರ ಬಿರುಗಣ್ಣು ಬಿಟ್ಟುಕೊಂಡು ಕೂತಿದ್ದಾರೆ ಎನ್ನಲಾಗಿದೆ. ಮೇ ಮೊದಲ ವಾರದಲ್ಲಿ ಉಭಯ ರಾಷ್ಟ್ರಗಳ ಯೋಧರ ನಡುವೆ ಹೊಯ್​ಕೈ ನಡೆದ ನಮತರದಲ್ಲಿ ಕಮಾಂಡಿಂಗ್​ ಆಫೀಸರ್​ಗಳು ಮತ್ತು ಬ್ರಿಗೇಡಿಯರ್​ಗಳ ಮಟ್ಟದಲ್ಲಿ ನಿರಂತರವಾಗಿ ಸಭೆಗಳು ನಡೆದಿದ್ದವು. ಆದರೆ ಅವು ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ ಈಗ ಮೇಜರ್​ ಜನರಲ್​ ದರ್ಜೆಯ ಅಧಿಕಾರಿಗಳ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನಗಳನ್ನು ಉಭಯ ರಾಷ್ಟ್ರಗಳು ಮಾಡುತ್ತಿವೆ ಎನ್ನಲಾಗಿದೆ.

    ಹಿಂದೆಸರಿಯಲು ನಿರಾಕರಣೆ: ವಾಸ್ತವ ಗಡಿರೇಖೆ ಬಳಿಯಲ್ಲಿನ ಸೇನಾ ಜಮಾವಣೆಯನ್ನು ಕಡಿಮೆ ಮಾಡುವ ಜತೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಭಾರತ ಚೀನಿಯರಿಗೆ ಹೇಳುತ್ತಿದೆ. ಆದರೆ, ಮಾತುಕತೆಯಲ್ಲಿ ಭಾರತದ ಆಕ್ಷೇಪವನ್ನು ಕಿವಿ ಮೇಲೆ ಹಾಕಿಕೊಳ್ಳದ ಚೀನಿಯರು, ಎಲ್​ಎಸಿಗೆ ಹೊಂದಿಕೊಂಡಂತೆ ಭಾರತ ಕೈಗೊಂಡಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಬೇಕು ಎಂಬ ಪಟ್ಟು ಹಿಡಿದು ಕುಳಿತಿದೆ. ಇದರಿಂದಾಗಿ ಮಾತುಕತೆ ಪ್ರಗತಿಯಾಗುತ್ತಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ಭಾರತದ ಪ್ರದೇಶ ಒಳಗೊಂಡ ವಿವಾದಾತ್ಮಕ ನಕ್ಷೆ ಸಂಸತ್​ನಲ್ಲಿ ಮಂಡನೆ

    ಇನ್ನೊಂದು ಮೂಲದ ಪ್ರಕಾರ ತನ್ನ ಭಾಗದಲ್ಲಿ ಗರಿಷ್ಠ ಪ್ರಮಾಣದ ಯೋಧರು ಮತ್ತು ಯುದ್ಧೋಪಕರಣಗಳನ್ನು ಜಮಾವಣೆ ಮಾಡಿಕೊಳ್ಳಲು ಸಮಯಾವಕಾಶ ಪಡೆದುಕೊಳ್ಳುವ ಸಲುವಾಗಿ ಚೀನಾ ಮಾತುಕತೆ ಪ್ರಕ್ರಿಯೆಯನ್ನು ವಿಸ್ತರಿಸುತ್ತಿದೆ ಎಂದು ಹೇಳಲಾಗುತ್ತಿದೆ.

    ಭಾರತ ಕೂಡ ಲಡಾಖ್​ ಬಿಕ್ಕಟ್ಟಿನ ಪ್ರದೇಶಕ್ಕೆ ಗರಿಷ್ಠ ಸಂಖ್ಯೆಯ ಯೋಧರು ಮತ್ತು ಯುದ್ಧೋಪಕರಣಗಳನ್ನು ಸಾಗಿಸಿದೆ. ಲಡಾಖ್​ ವಲಯದ ಅತಿಎತ್ತರದ ಭಾಗಗಳಲ್ಲಿ ಯೋಧರು ಮತ್ತು ಯುದ್ಧೋಪಕರಣಗಳನ್ನು ಈಗಾಗಲೆ ನಿಯೋಜಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

    ಚೀನಿ ಯೋಧರು ಭಾರತದ ಭೂಪ್ರದೇಶದೊಳಗೆ ಅತಿಕ್ರಮಣ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರಿಗೆ ಒಂದು ಇಂಚಿನಷ್ಟು ಒಳಬರಲು ಭಾರತೀಯ ಯೋಧರು ಅವಕಾಶ ನೀಡುತ್ತಿಲ್ಲ ಎಂದು ಮೂಲಗಳು ಹೇಳಿವೆ.

    ಚೀನಿ ಯೋಧರು ಗಡಿಭಾಗದಲ್ಲಿನ ಭಾರತದ ಗರಿಷ್ಠ ಭೂಪ್ರದೇಶದೊಳಗೆ ಅತಿಕ್ರಮಣ ಮಾಡುವ ಸಂಚು ರೂಪಿಸಿದ್ದರು. ಆದರೆ ಭಾರತ ಸರ್ಕಾರ ಸಕಾಲದಲ್ಲಿ ಗಡಿಭಾಗದಲ್ಲಿನ ಯೋಧರ ನಿಯೋಜನೆಯನ್ನು ಹೆಚ್ಚಿಸಿದ್ದರಿಂದ ಅವರ ಸಂಚು ವಿಫಲವಾಯಿತು ಎಂದು ಮೂಲಗಳು ತಿಳಿಸಿವೆ.

    ರಾಜ್ಯ ಸರ್ಕಾರದಿಂದ 5ನೇ ಹಂತದ ಲಾಕ್​ಡೌನ್​ ಮಾರ್ಗಸೂಚಿ ಪ್ರಕಟ: ಯಾರಿಗೆಲ್ಲಾ ಗುಡ್​ ನ್ಯೂಸ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts