More

    ಉಗ್ರಾತಂಕ! ಹೈ ಅಲರ್ಟ್​ನಲ್ಲಿ ಮೈಸೂರು, ಬೆಂಗಳೂರು

    ಬೆಂಗಳೂರು/ಮೈಸೂರು: ದೆಹಲಿ ಪೊಲೀಸರಿಂದ 6 ಮಂದಿ ಉಗ್ರರ ಬಂಧನ ನಡೆದಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾದ್ಯಂತ ಹಾಗೂ ಬೆಂಗಳೂರಿನಲ್ಲಿ ಫುಲ್​ ಹೈ ಅಲರ್ಟ್ ಜಾರಿಗೊಳಿಸಲಾಗಿದೆ. ಉಗ್ರರ ಹಿಟ್​ ಲಿಸ್ಟ್​ನಲ್ಲಿ ಕರ್ನಾಟಕದ ಈ ಎರಡು ನಗರಗಳು ಕೂಡ ಇದ್ದ ಬಗ್ಗೆ ದೆಹಲಿಯಿಂದ ರಾಜ್ಯಕ್ಕೆ ಸೂಚನೆ ರವಾನೆಯಾಗಿರುವುದೇ ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಬಂಧಿತ ಉಗ್ರರು ಅನೇಕ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೇಚ್ ಹಾಕಿದ್ದರು. ತನಿಖೆ ವೇಳೆ ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಪ್ಲಾನ್ ನಡೆಸಿದ್ದರು ಎಂದು ತಿಳಿದುಬಂದಿದೆ. ಈ ಹಿಟ್ ಲಿಸ್ಟ್​ನಲ್ಲಿ‌ ಕರ್ನಾಟಕದ ಮೈಸೂರು ಹಾಗೂ ಬೆಂಗಳೂರು ಒಂದಾಗಿದ್ದು, ದಸರಾವನ್ನ ಟಾರ್ಗೇಟ್ ಮಾಡಿದ್ದ ಮಾಹಿತಿ ಬಹಿರಂಗವಾಗಿದೆ. ಸದ್ಯ ಮೈಸೂರಿನಲ್ಲಿ‌ ಎಚ್ಚರ ವಹಿಸಲು ದೆಹಲಿಯಿಂದ ಸೂಚನೆ ರವಾನೆಯಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ಮೈಸೂರು ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ

    ಅಪರಿಚಿತ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾಕ್ಕೆ ಸೂಚನೆ ನೀಡಲಾಗಿದೆ. ಮೈಸೂರು ಅರಮನೆ ಮತ್ತು ದಸರಾ ನಡೆಯುವ ಕಡೆ ಪೊಲೀಸರು ಪ್ರತಿದಿನ ತಪಾಸಣೆಗೆ ಮುಂದಾಗಿದ್ದಾರೆ. ಆ ಭಾಗದಲ್ಲಿ ಓಡಾಡುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ಇಡಲು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಪೊಲೀಸ್​​ ಪಡೆ ಸಿದ್ಧವಾಗಿದೆ: ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್​, ಬೆಂಗಳೂರಿನಲ್ಲಿ ಫುಲ್ ಫ್ಲೆಡ್ಜ್ ಆಗಿ ನಮ್ಮ ಪೊಲೀಸ್ ಫೋರ್ಸ್ ಯಾವಾಗ್ಲೂ ಅಲರ್ಟ್ ಆಗಿದೆ. ಹೀಗಾಗಿ ಯಾವುದೇ ಸಮಸ್ಯೆ ಬಂದರೂ ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದಿದ್ದಾರೆ.

    “ನಮ್ಮಲ್ಲಿ ಒಳ್ಳೇ ಫೋರ್ಸ್​​ಗಳಿವೆ. ಗರುಡಾ ಆಗಿರಬಹುದು, ಹೊಯ್ಸಳ ಆಗಿರಬಹುದು – ನಮ್ಮಲ್ಲಿ ಪೊಲೀಸ್ ಫೋರ್ಸ್ ತುಂಬಾ ಅಲರ್ಟ್ ಆಗಿದೆ. ಅಷ್ಟಲ್ಲದೆ ಸ್ವಾಟ್​​ನಂತಹ ಕಮಾಂಡರ್ಸ್ ತಂಡ ಕೂಡ ಈಗಾಗಲೇ ಸಿದ್ಧವಾಗಿದೆ. ಒಂದಷ್ಟು ತಂಡ ತರಬೇತಿಯಲ್ಲಿದ್ದಾರೆ” ಎಂದಿದ್ದಾರೆ.

    ಬೆಂಗಳೂರಿನಲ್ಲಿ ಡ್ರಗ್ಸ್​ ಫ್ಯಾಕ್ಟರಿ ಪತ್ತೆ! ಮನೆಯಲ್ಲೇ ತಯಾರಿಸಿ ವಿವಿಧೆಡೆಗೆ ಸಪ್ಲೈ ಮಾಡ್ತಿದ್ದ ವಿದೇಶೀ ಪ್ರಜೆ!

    ಕುತ್ತಿಗೆಗೆ ಬಲ ನೀಡುವ ಸ್ಕಂದಾಸನ; ಜೀರ್ಣಶಕ್ತಿ ಹೆಚ್ಚಿಸಲು ಇದು ಸಹಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts