More

    ತೇರು ಬಯಲು ಪ್ರದೇಶಕ್ಕೆ ಮದ್ಯದಂಗಡಿ ಸ್ಥಳಾಂತರಿಸದಂತೆ ದಲಿತ ಸಂಘರ್ಷ ಸಮಿತಿ ಹಾಗೂ ಮಹಿಳೆಯರ ಆಗ್ರಹ

    ಕೊಟ್ಟೂರು: ಪಟ್ಟಣದ ಲಕ್ಷ್ಮೀ ಮದ್ಯದಂಗಡಿಯು ತೇರು ಬಯಲು ಪ್ರದೇಶಕ್ಕೆ ಸ್ಥಳಾಂತರವಾಗುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ಮಹಿಳೆಯರು ತಹಸೀಲ್ದಾರ್ ಜಿ.ಅನಿಲ್‌ಕುಮಾರ್‌ಗೆ ಗುರುವಾರ ಮನವಿ ಸಲ್ಲಿಸಿದರು.

    ಬಳ್ಳಾರಿ ಕ್ಯಾಂಪ್‌ನಿಂದ 8ನೇ ವಾರ್ಡ್ ತೇರು ಬಯಲು ಪ್ರದೇಶಕ್ಕೆ ಲಕ್ಷ್ಮೀ ಮದ್ಯದಂಗಡಿಯನ್ನು ಸ್ಥಳಾಂತರಿಸಲು ಸಿದ್ಧ್ದತೆ ನಡೆದಿದೆ. ಇಲ್ಲಿಂದ 200 ಅಡಿ ದೂರದಲ್ಲಿ ಮತ್ತೊಂದು ಮದ್ಯದಂಗಡಿ ಇದೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಲಿದೆ. ಜತೆಗೆ ಮದ್ಯದಂಗಡಿ ಸ್ಥಳಾಂತರಕ್ಕೆ ಉದ್ದೇಶಿಸಿರುವ ಪ್ರದೇಶದಲ್ಲಿ ಪ್ರತಿ ವರ್ಷ ಕೊಟ್ಟೂರೇಶ್ವರ ರಥೋತ್ಸವ ನಡೆಯಲಿದೆ. ಇದರಿಂದ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಮಾನಸಿಕ ತೊಂದರೆಯಾಗಲಿದೆ. ಅಲ್ಲದೆ, ಇಲ್ಲಿನ ವಿದ್ಯಾರ್ಥಿಗಳ ಅಭ್ಯಾಸಕ್ಕೂ ಅಡಚಣೆಯಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಬಹುತೇಕರ ವಿರೋಧದ ನಡುವೆಯೂ ತೇರು ಬಯಲಿನಲ್ಲಿ ಲಕ್ಷ್ಮೀ ಮದ್ಯದಂಗಡಿ ತೆರೆದರೆ ತಹಸಿಲ್ ಕಚೇರಿ ಮುಂದೆ ಮುಷ್ಕರ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಪಟ್ಟಣ ಪಂಚಾಯಿತಿ ಸದಸ್ಯ ಶಫಿಉಲ್ಲಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಪಿ.ಚಂದ್ರಶೇಖರ್, ಆರ್, ಅಂಬರೀಶ, ಕೊಟ್ರೇಶ್ ಬಿ.ಖುರ್ಷಿದ್ ಬೀ, ಕೆ.ಬಸವರಾಜ, ಜಿ.ಹೇಮಣ್ಣ, ನಾಜುಬೀ, ರೋಷನ್, ಕೆ.ದೇವಕ್ಕ, ರಾಹೀದಾಬಿ, ಕೆ. ಇನಾಯತ್, ಮಂಜಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts