More

    ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

    ತೇರದಾಳ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳವಾರ ವ್ಯಾಪಾರ-ವಹಿವಾಟು ಜೋರಾಗಿಯೇ ನಡೆದವು.

    ನಾಗರಿಕರು ಕಾಯಿಪಲ್ಯ, ಕಿರಾಣಿ ಸೇರಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿಕೊಂಡಿದ್ದರು. ಅಂಗಡಿಕಾರರಿಗೂ ಮಂಗಳವಾರ ಸಮಯದ ನಿಗದಿ ತಿಳಿಯದೇ ಇರುವುದರಿಂದ ಸ್ನಾನ-ಪಾನಾದಿಗಳನ್ನು ಬಿಟ್ಟು ಬೆಳ್ಳಂಬೆಳಗ್ಗೆ ಅಂಗಡಿಗಳನ್ನು ತೆರೆದುಕೊಂಡ ವ್ಯಾಪಾರದಲ್ಲಿ ತೊಡಗಿಕೊಂಡರು.
    ಬೆಳಗ್ಗೆ 10 ಗಂಟೆ ನಂತರ ಯಾವಾಗ ಬಂದ್ ಮಾಡಿಸುತ್ತಾರೋ ಎಂದು ಕಾಯಿಪಲ್ಯ ವ್ಯಾಪಾರಸ್ಥರು ಬೇಗ ಬೇಗ ತುಗೊಳ್ಳಿ ಎನ್ನುವುದು ಸಾಮಾನ್ಯವಾಗಿತ್ತು. ಹೀಗಾಗಿ ಗ್ರಾಹಕರು-ವ್ಯಾಪಾರಸ್ಥರಿಗೂ ನಿಗದಿತ ಸಮಯ ತಿಳಿಯದೆ ಇರುವುದರಿಂದ ಸಾಕಷ್ಟು ಗೊಂದಲಗಳು ಸೃಷ್ಟಿಯಾದವು.

    ಸಾರ್ವಜನಿಕರೊಬ್ಬರು ಅಧಿಕಾರಿಗಳಿಗೆ ಕರೆ ಮಾಡಿ ಕೇಳಿದಾಗ ರಾತ್ರಿ ಒಂಬತ್ತರವರೆಗೂ ಖರೀದಿ ಮಾಡಬಹುದು ಎಂದು ಹೇಳಿದಾಗ ಕೆಲ ವ್ಯಾಪಾರಸ್ಥರು ನಿರಾಳರಾದರೆ, ಇನ್ನೂ ಬಹುತೇಕರು ಯಾವಾಗ ಪೊಲೀಸರು ಬರ‌್ತಾರೆಂದು ಕಾಯುವುದರಲ್ಲೇ ಕಾಲಕಳೆದರು. ಜನತಾ ಕರ್ಫ್ಯೂ ಸಂದರ್ಭದಲ್ಲಿ ದಿನಂಪ್ರತಿ ಬೆಳಗ್ಗೆ ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳ ಸೇವೆ ಲಭ್ಯ ಎಂದರೂ ಕೂಡ ಭಯದ ನಡುವೆ ಹೇಗೆ ಹೊರಬರುವುದು ಎಂದುಕೊಂಡು ಮಂಗಳವಾರ ಜನಜಂದಣಿ ಕೂಡಿತ್ತು.

    ಗ್ರಾಮೀಣ ಭಾಗಗಳಲ್ಲಿ ಜನರ ಓಡಾಟ ಸಾಮಾನ್ಯವಾಗಿತ್ತು. ಸುತ್ತಮುತ್ತಲಿನ ಗ್ರಾಮದವರು ಪಟ್ಟಣಕ್ಕೆ ಬಂದು ಖರೀದಿಯಲ್ಲಿ ತೊಡಗಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts