More

    ನೇಹಾ ಕೊಲೆಗಾರನಿಗೆ ಮರಣದಂಡನೆ ವಿಧಿಸಿ

    ತೇರದಾಳ: ರಾಜ್ಯದಲ್ಲಿ ಇಂದು ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲದಾಗಿದೆ. ದೇಶ ವಿರೋಧಿಗಳಿಗೆ ರಾಜ್ಯ ಸರ್ಕಾರ ಪ್ರೋತ್ಸಾಹಿಸುತ್ತ ಬಂದಿದೆ. ಕಳೆದ ತಿಂಗಳ ಅವಧಿಯಲ್ಲಿ ಎಂಟು ಕೊಲೆಗಳಾಗಿದ್ದನ್ನು ಮರೆಯಲ್ಲ ಎಂದು ವಿಧಾನಪರಿಷತ್ ಸದಸ್ಯ ಪಿ.ಎಚ್. ಪೂಜಾರಿ ಹೇಳಿದರು.
    ಇತ್ತೀಚೆಗೆ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರಳನ್ನು ಹತ್ಯೆಗೆದ ಫಯಾಜ್ ಎಂಬ ಮತಾಂಧನಿಗೆ ಮರಣದಂಡನೆ ವಿಧಿಸಲು ಒತ್ತಾಯಿಸಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಬರೆಯಲಾದ ಪತ್ರವನ್ನು ತೇರದಾಳದ ಭಾಜಪ ಯುವಮೋರ್ಚಾ ಮತ್ತು ಹಿಂದುಪರ ಒಕ್ಕೂಟದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್ ವಿಜಯಕುಮಾರ ಕಡಕೋಳ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
    ಸಿದ್ದರಾಮಯ್ಯನವರ ದ್ವಿಮುಖ ನೀತಿ, ಓಲೈಕೆ ರಾಜಕಾರಣದಿಂದ ಹಿಂದುಗಳಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಇತ್ತಿಚೆಗೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಸಾವು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ರಾಜ್ಯದಲ್ಲಿ ಕಾನೂನು, ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಗೃಹ ಮಂತ್ರಿಗಳು ಬೇರೆ ರೀತಿ ಹೇಳಿಕೆ ಕೊಡುವುದು ವಿಪರ್ಯಾಸ. ರಾಜ್ಯಾದ್ಯಂತ ಭಯೋತ್ಪಾದಕ ಚಟುವಟಿಕೆಗೆ ಪುಷ್ಠಿ ನೀಡುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
    ನೇಹಾ ಕೊಲೆಗೈದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಆಕ್ರೋಶ ಹೊರಹಾಕಿದರು.
    ಮುಖಂಡರಾದ ರಾಮಣ್ಣ ಹಿಡಕಲ್ಲ, ಸಿದ್ದು ಅಮ್ಮಣಗಿ, ಮಹಾವೀರ ಕೊಕಟನೂರ, ಸುರೇಶ ಅಕ್ಕಿವಾಟ, ಸಂತೋಷ ಅಕ್ಕೆನ್ನವರ, ಆನಂದ ಮದುಮಲಿ, ಪಿಂಟು ಬಾಬಗೊಂಡ, ಲಕ್ಕಪ್ಪ ಪಾಟೀಲ, ಆನಂದ ಕಂಪು, ಪ್ರಕಾಶ ಮಾನಶೆಟ್ಟಿ, ಸದಾಶಿವ ಹೊಸಮನಿ, ಶಂಕರ ಹುನ್ನೂರ, ಕೇದಾರಿ ಪಾಟೀಲ, ನಿಂಗಪ್ಪ ಮಾಲಗಾಂವಿ ಇತರರಿದ್ದರು. ಟಿಡಿಎಲ್ 20-1ಎ
    ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಗೈದವರಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಭಾಜಪ ಯುವಮೋರ್ಚಾ ಮತ್ತು ಹಿಂದುಪರ ಒಕ್ಕೂಟದಿಂದ ತೇರದಾಳದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಿಪ ಸದಸ್ಯ ಪಿ.ಎಚ್. ಪೂಜಾರಿ ಮಾತನಾಡಿದರು. ಸುರೇಶ ಅಕ್ಕಿವಾಟ, ಆನಂದ ಕಂಪು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts