More

    ಯುಜಿಡಿ ಕಾಮಗಾರಿಗೆ ಸಹಕರಿಸಿ

    ತೇರದಾಳ: ನಗರದ ಪುರಸಭೆಗೆ ಯುಜಿಡಿ ಕಾರ್ಯ ಪರಿಶೀಲನೆಗಾಗಿ ಕೆಯುಡಬ್ಲುೃಎಸ್‌ಡಿಬಿ (ಕರ್ನಾಟಕ ಅರ್ಬನ್ ವಾಟರ್ ಸಪ್ಲೈ ಆ್ಯಂಡ್ ಡ್ರೈನೇಜ್ ಬೋರ್ಡ್) ಜಮಖಂಡಿ ವಿಭಾಗದ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ತೇರದಾಳ ಯುಜಿಡಿ ಯೋಜನೆ ಕುರಿತು ಸಮಗ್ರವಾಗಿ ಚರ್ಚಿಸಿದರು.

    ಜಮಖಂಡಿ ವಿಭಾಗದ ಎಇಇ ಜಗದೀಶ ಹಿರೇಮಠ ಮಾತನಾಡಿ, ತೇರದಾಳ ನಗರದ ಯುಜಿಡಿ ಕಾರ್ಯದ ನಿಯೋಜಿತ ಕಾರ್ಯಕ್ಕಾಗಿ ಯೋಜನೆ ತಯಾರಿಸಿದ್ದು, ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುತ್ತಿದೆ. ಕಾಮಗಾರಿ ಕಾರ್ಯಾರಂಭ ವೇಳೆ ಸದಸ್ಯರು ಸೇರಿ ಸಾರ್ವಜನಿಕರು ಸಹಕರಿಸಿದರೆ ಮಾತ್ರ ಯೋಜನೆಯ ಯಶಸ್ಸು ಸಾಧ್ಯವಾಗುತ್ತದೆ ಎಂದರು.

    ಈ ಯೋಜನೆ ನಗರದ ಒಟ್ಟು 72 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಇಲಾಖೆ ಮೂಲಕ ಈಗಾಗಲೇ ಸರ್ವೇ ಕಾರ್ಯ ಮುಗಿದಿದೆ. ನೀಲಿನಕ್ಷೆ ತಯಾರಿಸಿ ಸರಳವಾದ ಮಾರ್ಗಸೂಚಿ ಮಾಡಲಾಗಿದೆ ಎಂದರು.

    ಕೆಯುಡಬ್ಲುೃಎಸ್‌ಡಿಬಿ ಜೆಇ ಅರುಣಕುಮಾರ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಜೆಇ ಯಲ್ಲಪ್ಪ ಜೋಗಿ, ಸಂತೋಷ ಜಮಖಂಡಿ, ರುಸ್ತುಂ ನಿಪ್ಪಾಣಿ, ಸಚಿನ್ ಕೊಡತೆ, ಕಾಶಿನಾಥ ರಾಠೋಡ, ಆದಿನಾಥ ಸಪ್ತಸಾಗರ, ಸುರೇಶ ಕಬಾಡಗಿ, ಸದಾಶಿವ ಹೊಸಮನಿ, ಶಂಕರ ಕುಂಬಾರ, ಕೇದಾರಿ ಪಾಟೀಲ ಸೇರಿ ಪುರಸಭೆ ಸದಸ್ಯರು, ನಗರದ ಪ್ರಮುಖರು ಇದ್ದರು.

    ಕುಡಿವ ನೀರು ಯೋಜನೆಗೆ ಕಾಲಾವಕಾಶ
    ಗುತ್ತಿಗೆದಾರರು ತೇರದಾಳ ನಗರದ 24*7 ಕುಡಿಯುವ ನೀರಿನ ಕಾಮಗಾರಿಯ ಕೇವಲ ಶೇ.21.25 ಕಾರ್ಯ ಮುಗಿಸಿದ್ದಾರೆ. ಈ ಮೊದಲು ಕಾರ್ಯ ಸ್ಥಗಿತವಾದ ಹಿನ್ನೆಲೆ ಈಗಾಗಲೇ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಸದ್ಯ ಗುತ್ತಿಗೆದಾರರು ಹೆಚ್ಚಿನ ಕಾಲಾವಕಾಶ ಪಡೆದಿದ್ದು, ಕಾಮಗಾರಿ ಮುಗಿಯುವ ನಿರೀಕ್ಷೆಯಲ್ಲಿ ಇದ್ದೇವೆ ಎಂದು ತೇರದಾಳ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts