More

    ಅನಧಿಕೃತ ಕೋಕಾಗಳ ತೆರವು

    ತೇರದಾಳ: ಪಟ್ಟಣದ ಸಸಾಲಟ್ಟಿ ರಸ್ತೆಗೆ ಹೊಂದಿಕೊಂಡಿರುವ ಎಸ್‌ಪಿ ಕಾಲೇಜು ಪಕ್ಕದ ಸರ್ಕಾರಿ ಜಾಗದಲ್ಲಿರುವ ಅಂಗಡಿಕಾರರ ಅನಧಿಕೃತ ಶೆಡ್‌ಗಳನ್ನು ಬುಧವಾರ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ನೇತೃತ್ವದಲ್ಲಿ ತೆರವುಗೊಳಿಸುವ ಕಾರ್ಯ ನಡೆಯಿತು.

    ಅನಧಿಕೃತ ಶೆಡ್‌ಗಳಿಂದಾಗಿ ಮುಖ್ಯರಸ್ತೆ ಸೇರಿ ಪಟ್ಟಣದೆಲ್ಲೆಡೆ ಗಜಿಬಿಜಿ ವಾತಾವರಣ ಉಂಟಾಗಿ ವಾಹನ ಮತ್ತು ಪಾದಚಾರಿಗಳು ಸಂಚರಿಸಲು ತೊಂದರೆ ಅನುಭವಿಸುವಂತಾಗಿತ್ತು.

    ವಿಶೇಷವಾಗಿ ಪಟ್ಟಣದ ಆರಾಧ್ಯ ದೈವ ಅಲ್ಲಮಪ್ರಭುಗಳ ಜಾತ್ರೆ ವೇಳೆ ವಾಹನ ನಿಲುಗಡೆ ಸೇರಿ ಮತ್ತಿತರ ಕಾರ್ಯಕ್ಕೆ ಜಾಗವಿಲ್ಲದೆ ತೊಂದರೆ ಅನುಭವಿಸುವಂತಾಗಿತ್ತು. ಶೆಡ್ ತೆರವುಗೊಳಿಸುವ ಕಾರ್ಯದಿಂದಾಗಿ ಭಕ್ತರಿಗೆ ವಾಹನ ಸಂಚಾರ ಮತ್ತು ನಿಲುಗಡೆಗೆ ಬಹಳಷ್ಟು ಅನುಕೂಲವಾಗಲಿದೆ.

    ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿ ವಿಸ್ತರಣೆ ಕಾರ್ಯ ಕೂಡ ನಡೆದಿರುವುದರಿಂದ ಪಟ್ಟಣದ ಪೊಲೀಸ್ ಠಾಣೆ ಬದಿಯಲ್ಲಿರುವ ಅನಧಿಕೃತ ಶೆಡ್‌ಗಳ ಜತೆಗೆ ಅಲ್ಲಿರುವ ಹನುಮಾನ ದೇವಸ್ಥಾನ ತೆರವುಗೊಳಿಸುವಂತೆ ಕಮಿಟಿಯವರಿಗೆ ಸೂಚಿಸಲಾಗಿದ್ದು, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಜೆಇ ಯಲ್ಲಪ್ಪ ಜೋಗಿ, ಲೆಕ್ಕಪರಿಶೋಧಕ ಜೆ.ಎ.ಮುಲ್ಲಾ, ಕೀರಪ್ಪ ಗಿಡ್ಡಿ, ಪೌರಕಾರ್ಮಿಕರು ಇದ್ದರು.

    ಪ್ರಜ್ಞಾವಂತರ ಶ್ಲಾಘನೆ
    ಪಟ್ಟಣದಲ್ಲಿರುವ ಅನಧಿಕೃತ ಕೋಕಾಗಳನ್ನು ತೆರವುಗೊಳಿಸುವಂತೆ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಕ್ಷೇತ್ರ ಶಾಸಕ ಸಿದ್ದು ಸವದಿ ಅವರೇ ಖುದ್ದಾಗಿ ಮುಖ್ಯಾಧಿಕಾರಿಗೆ ಸೂಚಿಸಿದ್ದರು. ಹೀಗಾಗಿ ದಿಢೀರನೆ ಕಾರ್ಯ ಕೈಗೆತ್ತಿಕೊಂಡ ಪುರಸಭೆ ಅಧಿಕಾರಿಗಳ ಕಾರ್ಯವನ್ನು ಪ್ರಜ್ಞಾವಂತರು ಶ್ಲಾಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts