More

    ಭಾರಿ ಮಳೆಗೆ ಬೆಳೆ ಹಾನಿ

    ತೇರದಾಳ: ಶನಿವಾರ ಸಂಜೆಯಿಂದ ತಡರಾತ್ರಿಯವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ನಗರ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅನೇಕ ಮನೆಗಳು ಧರೆಗುರುಳಿದ್ದು ಕೆಲವೆಡೆ ಜಮೀನು ಹಾಗೂ ಮನೆಯೊಳಗೆ ನೀರು ನುಗ್ಗಿದೆ.

    ಪಟ್ಟಣದಲ್ಲಿ ಒಂದು ಮನೆ, ಹಳಿಂಗಳಿ ಗ್ರಾಮದಲ್ಲಿ ಆರು, ಸಸಾಲಟ್ಟಿ ಗ್ರಾಮದಲ್ಲಿ ಒಂದು ಹಾಗೂ ಇತರೆಡೆ ಮನೆಗಳು ಬಿದ್ದಿವೆ ಎಂದು ತೇರದಾಳ ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಮಠಪತಿ, ಸಸಾಲಟ್ಟಿ ಗ್ರಾಮ ಲೆಕ್ಕಾಧಿಕಾರಿ ಮಲ್ಲು ಕವಟಗೊಪ್ಪ, ಹಳಿಂಗಳಿ-ತಮದಡ್ಡಿ ಗ್ರಾಮಲೆಕ್ಕಾಧಿಕಾರಿ ಎ.ಐ. ಜಮಖಂಡಿ ತಿಳಿಸಿದ್ದಾರೆ.

    ತೇರದಾಳ-ಹಳಿಂಗಳಿ ರಸ್ತೆ ಮಧ್ಯೆದ ರೈತರ ಜಮೀನುಗಳಿಗೆ ಹಳ್ಳದ ನೀರು ನುಗಿದ್ದರಿಂದ ರೈತರು ಜರ್ಜರಿತಗೊಂಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿ ಮಹಾದೇವ ಯಲ್ಲಟ್ಟಿ ಪರಿಶೀಲನೆ ಮಾಡಿದ್ದಾರೆ. ತೇರದಾಳ-ಹಳಿಂಗಳಿ ರಸ್ತೆಯಲ್ಲಿನ ತೋಟದ ವಸತಿ ನಿವಾಸಿಗಳಾದ ಶ್ರೀಶೈಲ ತಳ್ಳಿ, ಮಹಾದೇವ ತಳ್ಳಿ, ಶಿವಲೀಲಾ ರಾಜು ತಳ್ಳಿ, ಶಂಕರ ಬಾಗಿ, ರಾಜು ಬಾಗಿ, ಪ್ರಕಾಶ ಬಾಗಿ, ಸಂಜು ಬಾಗಿ, ವಿಜಯ ಮಳ್ಳಿ, ಅನೀಲ ಬಾಗಿ ಅವರ ಮನೆಗಳಿಗೆ ನೀರು ನುಗ್ಗಿದೆ.

    ಶನಿವಾರ ಸುರಿದ ಭಾರಿ ಮಳೆಯಿಂದಾಗಿ ನಮ್ಮ ಜಮೀನಿನಲ್ಲಿರುವ ಗೋವಿನಜೋಳ ನೀರಲ್ಲಿ ನಿಂತಿದ್ದು ಹಾನಿಯಾಗುವ ಸಾಧ್ಯತೆಯಿದೆ. ಹಾನಿ ಅನುಭವಿಸಿದ ಎಲ್ಲ ರೈತರಿಗೆ ಸರ್ಕಾರ ಪರಿಹಾರ ಧನ ನೀಡಬೇಕು.
    – ಪುಂಡಲಿಕಪ್ಪ ಅವ್ವನಪ್ಪ ಸಂಶಿ, ರೈತ, ಸಸಾಲಟ್ಟಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts