More

    ಪೊಲೀಸ್ ಠಾಣೆ ಸೀಲ್‌ಡೌನ್

    ತೇರದಾಳ: ಪಟ್ಟಣ ಪೊಲೀಸ್ ಠಾಣೆಯ 34 ವರ್ಷದ ಪೇದೆಯೊಬ್ಬರಿಗೆ ಗುರುವಾರ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ.

    ಜು.10 ರಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗಂಟಲು ದ್ರವ ಮಾದರಿ ಸಂಗ್ರಹ ಕಾರ್ಯ ನಡೆದಿತ್ತು. ಅದರ ಬೆನ್ನಲ್ಲೇ ಪೇದೆಗೆ ಸೋಂಕು ಪತ್ತೆಯಾಗಿದೆ. ಹೀಗಾಗಿ ಉಳಿದ ಸಿಬ್ಬಂದಿಯಲ್ಲಿ ಕರೊನಾ ಭೀತಿ ಪ್ರಾರಂಭವಾಗಿದೆ.
    ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಬಂಧದಲ್ಲಿರುವ ನಾಲ್ಕು ಕುಟುಂಬಸ್ಥರು, ಮೂರು ಜನ ಸಿಬ್ಬಂದಿ, ಪೇದೆಯ ಸಂಪರ್ಕದ ಜಾಗಗಳಾದ ಹೋಟೆಲ್‌ನಲ್ಲಿನ ಇಬ್ಬರು, ಅಂಗಡಿಯಲ್ಲಿನ ಐವರು ಸೇರಿ ಹದಿನಾಲ್ಕು ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.

    ಪುರಸಭೆ ವತಿಯಿಂದ ಈಗಾಗಲೇ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಲಾಗಿದ್ದು, ಪಟ್ಟಣದ ಪೊಲೀಸ್ ಕ್ವಾರ್ಟರ್ಸ್ ಹಾಗೂ ವಿಶೇಷ ತಹಸೀಲ್ದಾರ್ ಕಚೇರಿಯನ್ನು ಸ್ಯಾನಿಟೈಸರ್ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಈರಣ್ಣ ದಡ್ಡಿ ತಿಳಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts