More

    ಮೌನೇಶ್ವರ ಮಧಾರ ಪೂಜೆ

    ತೇರದಾಳ: ಪಟ್ಟಣದ ದೇವರಾಜ ನಗರದಲ್ಲಿರುವ ವೇದಮಾತೆ ಗಾಯತ್ರಿದೇವಿ ದೇವಸ್ಥಾನದಲ್ಲಿ ಜಗದ್ಗುರು ಮೌನೇಶ್ವರರ ಮಧಾರ ಪೂಜಾ ಕಾರ್ಯಕ್ರಮ ಶನಿವಾರ ಜರುಗಿತು.

    ತನ್ನಿಮಿತ್ತ ಗಾಯತ್ರಿದೇವಿ ಮೂರ್ತಿಗೆ ಪಂಚಾಮೃತಾಭಿಷೇಕ, ತುಪ್ಪದಾರತಿ, ಮಂಗಳಾರತಿ ಜರುಗಿತು. ತದನಂತರ ವಿಶ್ವಕರ್ಮ ಪರಬ್ರಹ್ಮ ಹಾಗೂ ಮೌನೇಶ್ವರರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಮಾಲುದ್ದಿಯಿಂದ ಮೌನೇಶ್ವರರ ಮಧಾರ ಹಾಗೂ ಮೂರ್ತಿಯನ್ನು ಶಿಕ್ಷಕ ಐ.ಆರ್. ಬಡಿಗೇರ ತಯಾರಿಸಿದರು. ಕಲ್ಲಪ್ಪಾಚಾರ್ಯ ಬಡಿಗೇರ, ರಾಚಪ್ಪಾಚಾರ್ಯ ಬಡಿಗೇರ ಅವರಿಂದ ಪೂಜೆ ಜರುಗಿತು. ಓಂ ಏಕಲಾಕ ಐಂಸೀ ಹಜಾರ್ ಪಾಚೋ ಪೀರ್ ಪೈಗಂಬರ ಜಗದ್ಗುರು ಮೌನುದ್ದೀನ್, ಜೀತಾಪೀರ ಪೈಗಂಬರ ಜಗದ್ಗುರು ಮೌನಾದ್ದೀನ್ ಕಾಶಿಪತಿ ಗಂಗಾಧರ ಹರಹರ ಮಹಾದೇವ’’ ಎಂಬ ಹಿಂದು- ಮುಸ್ಲಿಂ ಭಾವೈಕ್ಯತೆಯ ಸಂಕೇತದ ಜೈಕಾರ, ಘೋಷಣೆಗಳೊಂದಿಗೆ ಭಕ್ತಿ ಆರತಿ ಮಾಡಲಾಯಿತು.

    ರಮೇಶ ಪೋತದಾರ, ನಾರಾಯಣ ಪತ್ತಾರ ಮಾತನಾಡಿ, ದೇವಸ್ಥಾನದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಸಮಾಜದ ಪ್ರತಿಯೊಬ್ಬರೂ ಸ್ಪಂದಿಸಬೇಕು. ಸಮಾಜ ಬಾಂಧವರಲ್ಲಿ ಸಂಘಟನೆ-ಒಗ್ಗಟ್ಟು ಮುಖ್ಯವಾಗಿರಬೇಕು. ಸಮಾಜ ನನಗೇನು ಕೊಟ್ಟಿದೆ ಎನ್ನುವುದು ಮುಖ್ಯವಲ್ಲ. ನಾನು ಸಮಾಜಕ್ಕೆ ಏನು ಕೊಟ್ಟೆದ್ದೇನೆ ಎನ್ನುವುದು ಮುಖ್ಯ ಎಂದರು. ಸದಾಶಿವ ಸುತಾರ ಅವರು ವ್ಯವಸ್ಥೆ ಮಾಡಿದ ಮಹಾಪ್ರಸಾದ ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts