More

    ಹತ್ತು ಪ್ರಕರಣಗಳೂ ನೆಗೆಟಿವ್

    ಬೆಳಗಾವಿ: ಕರೊನಾ ವೈರಸ್ (ಕೋವಿಡ್-19) ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯಿಂದ ಶಿವಮೊಗ್ಗ ಹಾಗೂ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ಎಲ್ಲ ಹತ್ತು ವರದಿಗಳೂ ನೆಗೆಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

    ಬೆಳಗಾವಿ ಜಿಲ್ಲೆಯಲ್ಲಿ ಕರೊನಾ ವೈರಸ್ ಲಕ್ಷಣ ಕಂಡು ಬಂದಿದ್ದ ಹತ್ತು ಜನರ ಗಂಟಲು ದ್ರವಗಳ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಈ ಮೊದಲು ಐದು ಮಾದರಿಗಳು ನೆಗೆಟಿವ್ ಬಂದಿದ್ದವು. ಬಳಿಕ ಹೊಸದಾಗಿ ಕಳುಹಿಸಲಾಗಿದ್ದ ಐದು ಮಾದರಿಗಳೂ ವರದಿ ಬುಧವಾರ ಲಭಿಸಿದ್ದು ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

    ಈ ಮೊದಲು ಇಬ್ಬರ ಮಾದರಿಯನ್ನು ಬೆಂಗಳೂರು ಹಾಗೂ ಮೂವರ ಮಾದರಿಗಳನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅವು ಕೂಡ ನೆಗೆಟಿವ್ ಬಂದಿದ್ದವು. ನಂತರ ಬೆಂಗಳೂರಿನ ಪ್ರಯೋಗಾಲಯಕ್ಕೆ ಮತ್ತೆ ಕಳುಹಿಸಲಾಗಿದ್ದ ಐವರ ಮಾದರಿಗಳ ವರದಿಯೂ ಸಹ ನೆಗೆಟಿವ್ ಬಂದಿವೆ. ಜಿಲ್ಲೆಯಿಂದ ಕಳುಹಿಸಲಾಗಿದ್ದ ಎಲ್ಲ ಹತ್ತು ಮಾದರಿಗಳೂ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಬಾರದು. ಸರ್ಕಾರದ ಸೂಚನೆ ಮೇರೆಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

    ನಿರಂತರ ಜಾಗೃತಿ: ಈಗಾಗಲೇ ಕರೊನಾ ವೈರಸ್ ಹರಡದಂತೆ ನಗರ ಪ್ರದೇಶಗಳಲ್ಲಿ ಸಾರಿಗೆ ಸಂಚಾರ, ವ್ಯಾಪಾರು ವಹಿವಾಟು, ಸಭೆ-ಸಮಾರಂಭ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಂತೆ, ಜಾತ್ರೆಗಳು, ಮದುವೆ ಕಾರ್ಯಕ್ರಮ ಹಾಗೂ ಇನ್ನಿತರ ಗುಂಪು ಗುಂಪಾಗಿ ಮಾಡುವ ಕೆಲಸಗಳನ್ನು ರದ್ದು ಪಡಿಸಲಾಗಿದೆ. ಅಲ್ಲದೆ ಗ್ರಾಪಂಗಳ, ಸ್ಥಳೀಯ ವೈದ್ಯಾಧಿಕಾರಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಚ್ಛತೆ ಕೆಲಸ ನಿರಂತರ ನಡೆಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts