More

    ಮೂಲ್ಕಿಯಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ

    ಮೂಲ್ಕಿ: ಪೇಟೆಯಲ್ಲಿ ವಾಹನ ನಿಲುಗಡೆ ಸಮಸ್ಯೆಗೆ ವಿಜಯ ಸನ್ನಿಧಿ ಬಳಿ ತಾತ್ಕಾಲಿಕ ನೆಲೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ನಗರ ಪಂಚಾಯಿತಿ ಅಧ್ಯಕ್ಷ ಸುಭಾಷ್ ಶೆಟ್ಟಿ ತಿಳಿಸಿದ್ದಾರೆ.

    ಇತ್ತೀಚೆಗೆ ರಸ್ತೆ ಬದಿಯಲ್ಲಿ ನಿಲ್ಲಿಸುವ ದ್ವಿಚಕ್ರ ವಾಹನಗಳಿಂದ ವೃದ್ಧರಿಗೆ ಸಮಸ್ಯೆಯಾಗುವ ಬಗ್ಗೆ ‘ವಿಜಯವಾಣಿ’ ಪ್ರಕಟಿಸಿತ್ತು. ಸೂಕ್ತ ಸ್ಥಳದ ಅಭಾವದಿಂದ ಸಮಸ್ಯೆ ಪರಿಹಾರ ಕಾಣದೆ, ವಿಜಯ ಸನ್ನಿಧಿ ಬಳಿ ಹಲವಾರು ವರ್ಷಗಳಿಂದ ವಾಹನ ಪಾರ್ಕಿಂಗ್ ನಡೆಯುತ್ತಿತ್ತು. ಇದರಿಂದಾಗಿ ಬ್ಯಾಂಕ್ ಮತ್ತು ಸಹಕಾರಿ ಸೊಸೈಟಿಗೆ ಬರುವ ವೃದ್ಧರಿಗೆ ಸಮಸ್ಯೆಯಾಗುತ್ತಿತ್ತು. ವಿಜಯ ಸನ್ನಿಧಿ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಬಳಿಯಲ್ಲಿ ಇದ್ದ ಉಪಯೋಗ ಇಲ್ಲದ ಗೂಡಂಗಡಿಗಳನ್ನು ತೆಗೆದು ಜೆಸಿಬಿ ಮೂಲಕ ನೆಲಸಮತಟ್ಟು ಮಾಡಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸುಭಾಷ್ ಶೆಟ್ಟಿ ತಿಳಿಸಿದ್ದಾರೆ.

    ಕಳೆದ ಹಲವಾರು ವರ್ಷಗಳಿಂದ ಸದಾ ಜನನಿಬಿಡ ಪ್ರದೇಶವಾಗಿರುವ ವಿಜಯ ಸನ್ನಿಧಿ ಬಳಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ದ್ವಿಚಕ್ರ ವಾಹನ ಸವಾರರು ಕಿನ್ನಿಗೋಳಿ- ಮೂಲ್ಕಿ ರಾಜ್ಯ ಹೆದ್ದಾರಿ ಬದಿ ನಿಲುಗಡೆ ಮಾಡಿ ಮಂಗಳೂರು ಉಡುಪಿ ಕಡೆಗೆ ಉದ್ಯೋಗಕ್ಕಾಗಿ ತೆರಳುವುದರಿಂದ ಬ್ಯಾಂಕ್ ಸೊಸೈಟಿಗೆ ಬರುವ ಗ್ರಾಹಕರಿಗೆ ತೊಂದರೆಯಾಗುತ್ತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts