More

    ಭಕ್ತರಿಲ್ಲದ ಶಬರಿಮಲೆ ದೇಗುಲದಲ್ಲಿ ಆಭರಣಗಳ ಲೆಕ್ಕಾಚಾರ; ಸಾವಿರ ಕೆಜಿ ಚಿನ್ನ ಯಾರ ಪಾಲಾಗುತ್ತೆ ಗೊತ್ತಾ?

    ನವದೆಹಲಿ: ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನದ ದಾಸ್ತಾನು ಕೋಣೆಯಲ್ಲಿ ಕೆಲ ದಿನಗಳಿಂದ ಇನ್ನಿಲ್ಲದ ಚಟುವಟಿಕೆ ನಡೆಯುತ್ತಿದೆ. ನೂರಾರು ವರ್ಷಗಳಿಂದ ಭಕ್ತರು ನೀಡಿರುವ ಚಿನ್ನವೆಷ್ಟು? ದಿನ ಬಳಕೆಗೆ ಬಳಸುವ ಆಭರಣಗಳು ಯಾವವು ಎಂದು ಲೆಕ್ಕ ಹಾಕಲಾಗುತ್ತಿದೆ. ಅತ್ಯಂತ ಪುರಾತನ, ಅಮೂಲ್ಯವಾದ ಆಭರಣಗಳನ್ನು ಪ್ರತ್ಯೇಕ ಮಾಡಲಾಗುತ್ತಿದೆ.

    ಶಬರಿಮಲೆ ಮಾತ್ರವಲ್ಲ, ದೇಶದ 10ಕ್ಕೂ ಹೆಚ್ಚು ಪ್ರಮುಖ ದೇವಸ್ಥಾನಗಳಲ್ಲಿ ಇಂಥದ್ದೇ ಕಾರ್ಯಕ್ಕೆ ಚಾಲನೆ ದೊರೆತಿದೆ. ಇಷ್ಟಕ್ಕೂ ದೇಶದ ದೇಗುಲಗಳಲ್ಲಿ 2,000 ಟನ್​ಗೂ ಅಧಿಕ ಚಿನ್ನವಿದೆ ಎಂದು ಅಂದಾಜು ಮಾಡಲಾಗಿದೆ. ಪ್ರಸ್ತುತ ದರದಲ್ಲಿ ಇದರ ಮೌಲ್ಯ 6.30 ಲಕ್ಷ ಕೋಟಿ ರೂ.ಗಳೆಂದು ವರ್ಲ್ಡ್​ ಗೋಲ್ಡ್​ ಕೌನ್ಸಿಲ್​ ಲೆಕ್ಕ ಹಾಕಿದೆ.

    ಇದನ್ನೂ ಓದಿ; ನಿಷೇಧವಾಗುತ್ತಾ 2 ಸಾವಿರ ರೂ. ಮುಖಬೆಲೆ ನೋಟು? ಪ್ರಿಂಟ್​ ಏಕೆ ಮಾಡ್ತಾಯಿಲ್ಲ ಗೊತ್ತಾ? 

    ವರ್ಷಕ್ಕೆ ಮೂರು ಕೋಟಿಗೂ ಅಧಿಕ ಭಕ್ತರು ಭೇಟಿ ನೀಡುವ ಶಬರಿಮಲೆ ದೇಗುಲ ಸೇರಿ 1,247 ದೇವಸ್ಥಾನಗಳನ್ನು ತನ್ನ ಅಧೀನದಲ್ಲಿ ಹೊಂದಿರುವ ಟ್ರಾವಂಕೂರ್​ ದೇವಸ್ವಂ ಮಂಡಳಿ (ಟಿಡಿಬಿ) ಚಿನ್ನದ ಮೇಲಿನ ಸಾಲಕ್ಕಾಗಿ ರಿಸರ್ವ್​ ಬ್ಯಾಂಕ್​ ಇಂಡಿಯಾ ಮೊರೆ ಹೋಗಲು ನಿರ್ಧರಿಸಿದೆ.

    ಇಂಥದ್ದೊಂದು ಚಿಂತನೆ ಹಿಂದಿನಿಂದಲೂ ಇತ್ತಾದರೂ, ಕೋವಿಡ್​ನಿಂದ ದೇಗುಲಕ್ಕೆ ಭಕ್ತರಿಂದ ಬರುತ್ತಿದ್ದ ಆದಾಯವೇ ನಿಂತು ಹೋಗಿದೆ. ಹೀಗಾಗಿ ಪ್ರತಿ ತಿಂಗಳು 50 ಕೋಟಿ ರೂ. ಗೂ ಅಧಿಕ ಮೊತ್ತವನ್ನು ಸಿಬ್ಬಂದಿಗೆ ಸಂಬಳವಾಗಿ ನೀಡಬೇಕಾದ ಟಿಬಿಡಿ, ಕಳೆದ ಐದು ತಿಂಗಳಿನಿಂದ ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಈ ಕಾರಣದಿಂದಾಗಿ ಚಿನ್ನ ಠೇವಣಿಯಿಡುವ ಅನಿವಾರ್ಯತೆಗೆ ಟಿಡಿಬಿ ಸಿಲುಕಿದೆ.

    ಜತೆಗೆ, ಬಳಕೆಯಾಗದ ಹಿತ್ತಾಳೆ, ತಾಮ್ರ ಮೊದಲಾದ ಲೋಹದ ವಸ್ತುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಶಬರಿಮಲೆ ಮಾತ್ರವಲ್ಲ, ತಿರುಪತಿ ದೇಗುಲವೂ ಕೂಡ 500 ಕೋಟಿ ರೂ. ಮೌಲ್ಯದ ಸ್ವತ್ತು ಮಾರಾಟಕ್ಕೆ ಮುಂದಾಗಿದೆ.

    ಇದನ್ನೂ ಓದಿ; ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್​ ಹರಡಲು ಇವರೇ ಕಾರಣ….! 

    ಕಳೆದ ಆಗಸ್ಟ್​ 22ರಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಸಭೆಯೊಂದನ್ನು ನಡೆಸಿದ್ದರು. ಇದರಲ್ಲಿ ಟಿಡಿಬಿ ಸೇರಿ ಇತರ ಹತ್ತು ದೇಗುಲಗಳ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. ಬ್ಯಾಂಕ್​ಗಳ ಮೂಲಕ ಆರ್​ಬಿಐನಲ್ಲಿ ಚಿನ್ನ ಠೇವಣಿ ಹಾಗೂ ಸಾಲದ ಯೋಜನೆ ಬಗ್ಗೆ ಮಾಹಿತಿ ನೀಡಲಾಗಿತ್ತು.

    ದೇಗುಲಕ್ಕೆ ಸಲ್ಲಿಕೆಯಾದ ಚಿನ್ನದ ನಾಣ್ಯ ಹಾಗೂ ಇತರ ಚಿನ್ನದ ಆಭರಣಗಳನ್ನು ಪ್ರತ್ಯೇಕಿಸಲಾಗುತ್ತಿದ್ದು, ಅಂದಾಜು ಒಂದು ಸಾವಿರ ಕೆಜಿ ಚಿನ್ನವನ್ನು ಬ್ಯಾಂಕ್​ನಲ್ಲಿ ಠೇವಣಿಯಾಗಿಡಲು ಒಪ್ಪಿದ್ದಾಗಿ ಟಿಡಿಬಿ ಅಧ್ಯಕ್ಷ ಎನ್​. ವಾಸು ತಿಳಿಸಿದ್ದಾರೆ.

    ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts