More

    ಮಂದಿರಗಳು ಇರುವ ದೇಶದಲ್ಲಿ ಧರ್ಮದ ಉಳಿವು

    ಚಿಕ್ಕೋಡಿ: ಯಾವ ದೇಶದಲ್ಲಿ ಮಂದಿರಗಳಿವೆ ಆ ದೇಶದಲ್ಲಿ ಧರ್ಮ ಉಳಿಯುತ್ತದೆ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.

    ಪಟ್ಟಣದ ಕೇಶವ ಕಲಾಭವನದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ವಿಶ್ವ ಹಿಂದು ಪರಿಷತ್ ಚಿಕ್ಕೋಡಿ ಜಿಲ್ಲೆ ಸಹಯೋಗದಲ್ಲಿ ಜ.22 ರಂದು ನಡೆಯಲಿರುವ ಆಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದ ಅಕ್ಷತಾ ಕಲಶ ವಿತರಣಾ ಕಾರ್ಯಕ್ರಮ ಹಾಗೂ ಜನವರಿ 1ರಿಂದ 15ರ ವರೆಗೆ ಎಲ್ಲ ಮನೆಗಳಿಗೂ ಅಕ್ಷತೆ ವಿತರಣೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

    ಸಾನ್ನಿಧ್ಯ ವಹಿಸಿದ್ದ ಪರಮಾನಂದವಾಡಿ ಶ್ರೀ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ರಾಷ್ಟ್ರಕ್ಕಾಗಿ ಏನಾದರೂ ಮಾಡಲು ಸಿದ್ಧರಿದ್ದೇವೆ ಎಂದು ವಿಶ್ವಕ್ಕೆ ತೋರಿಸಿಕೊಡಬೇಕಾಗಿದೆ. ದೇಶ, ಧರ್ಮ, ಸಂಸ್ಕೃತಿ ವಿಷಯ ಬಂದಾಗ ಕಂಕಣ ಬದ್ಧರಾಗಿ ನಿಲ್ಲಬೇಕು. ರಾಮ ಜನ್ಮಭೂಮಿಯಿಂದ ಬಂದಿರುವ ಅಕ್ಷತೆಯನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡೋಣ ಎಂದರು.

    ಜೋಡಕುರಳಿಯ ಚಿದ್ಗಣಾನಂದ ಸ್ವಾಮೀಜಿ, ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ, ಜಿಲ್ಲಾ ಸಂಘ ಚಾಲಕ ಬಾಹುಬಲಿ ನಸಲಾಪುರೆ, ನಂಜುಡ ಜುಗಳೆ, ವಿಶ್ವಹಿಂದು ಪರಿಷತ್ ಪ್ರಮುಖ ಡಾ.ಆರ್.ಕೆ.ಬಾಗಿ, ವಿಠ್ಠಲ ಮಾಳಿ, ವಂಕೇಟೇಶ ದೇಶಪಾಂಡೆ, ಅಚ್ಯುತ್ ಕುಲಕರ್ಣಿ, ನಾರಾಯಣ ಮಠಾಧಿಕಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts