More

    ನಾಮಪತ್ರ ಸಲ್ಲಿಕೆಗೂ ಮುನ್ನ ಅಭ್ಯರ್ಥಿಗಳ ಟೆಂಪಲ್​ ರನ್​

    ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಾವು ರಂಗೇರಿದ್ದು, ಇಂದು ಕೂಡ ಘಟಾನುಘಟಿ ನಾಯಕರುಗಳು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೂ ಮುನ್ನ ತಮ್ಮ ತಮ್ಮ ನೆಚ್ಚಿನ ದೇವರುಗಳು ಆಶೀರ್ವಾದಕ್ಕೆ ಅಭ್ಯರ್ಥಿಗಳು ಮುಗಿಬಿದ್ದಿದ್ದಾರೆ.

    ಮಹಾಲಕ್ಷ್ಮೀಗೆ ಲಕ್ಷ್ಮೀ ಹೆಬ್ಬಾಳ್ಕರ್​ ಶರಣು
    ನಾಮಪತ್ರ ಸಲ್ಲಿಕೆ ಮುನ್ನ ಕಾಂಗ್ರೆಸ್​ ಶಾಸಕಿ ಹೆಬ್ಬಾಳ್ಕರ್ ಟೆಂಪಲ್ ರನ್ ನಡೆಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಎರಡನೇ ಬಾರಿಗೆ ಆಯ್ಕೆ ಬಯಸಿ ಶಾಸಕಿ ಹೆಬ್ಬಾಳ್ಕರ್​ ನಾಮಪತ್ರ ಸಲ್ಲಿಸಲಿದ್ದಾರೆ. ನಿನ್ನೆ ಖಾನಾಪೂರ ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಮನೆ ದೇವರು ವೀರಭದ್ರನ ಮುಂದೆ ಬಿ- ಫಾರ್ಮ್ ಇಟ್ಟು ಪೂಜೆ ಸಲ್ಲಿಸಿದ್ದರು. ಇಂದು ಬೆಳಿಗ್ಗೆ ಬೆಳಗಾವಿ ತಾಲೂಕಿನ ಸುಳೆಭಾವಿ ‌ಮಹಾ ಲಕ್ಷ್ಮೀ ದೇವರ ಮುಂದೆ ನಾಮಪತ್ರ ಇಟ್ಟು ಪೂಜೆ ಸಲ್ಲಿಕೆ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸಹೋದರ ಚೆನ್ನರಾಜ್ ಹಟ್ಟಿಹೊಳಿ, ಪುತ್ರ ಮೃನಾಲ್ ಹೆಬ್ಬಾಳ್ಕರ್ ಸಾಥ್ ನೀಡಿದರು. ಇಂದು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

    ತಂದೆ, ತಾಯಿಗಳ ಮೂರ್ತಿಗಳಿಗೆ ಪೂಜೆ
    ಬಿಜೆಪಿ ಅಭ್ಯರ್ಥಿಯಾಗಿ ಬಿ.ಸಿ. ಪಾಟೀಲ್​ ಇಂದು ನಾಮ ಪತ್ರ ಸಲ್ಲಿಸಲಿದ್ದಾರೆ. ಸ್ಟಾರ್ ಕ್ಷೇತ್ರ ಹಿರೇಕೆರೂರು ವಿಧಾನಸಭೆಯ ಬಿಜೆಪಿ ಬಿಸಿಪಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ತಮ್ಮ ತೋಟದಲ್ಲಿರುವ ತಂದೆ, ತಾಯಿಗಳ ಮೂರ್ತಿಗಳಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ಇದಾದ ಬಳಿಕ ಹಿರೆಕೇರೂರಿನ ಶಕ್ತಿ ದೇವತೆ ದುರ್ಗಾದೇವಿ ಆಶಿರ್ವಾದ ಪಡೆದರು. ಪ್ರತಿಬಾರಿ ಚುನಾವಣೆಯಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿ ಬಿ ಫಾರ್ಮ್ ಇಟ್ಟು ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಬಿಸಿಪಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

    ಇದನ್ನೂ ಓದಿ: ಆನ್‌ಲೈನ್ ವಹಿವಾಟಿನ ಮೇಲೆ ಆಯೋಗ ಹದ್ದಿನ ಕಣ್ಣು: ಕಳ್ಳ ವ್ಯವಹಾರ ನಡೆಯದಂತೆ ಎಚ್ಚರಿಕೆ

    ಮನೆದೇವರ ಮೊರೆ ಹೋದ ಸಿಪಿವೈ ದಂಪತಿ
    ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಅವರು ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಮನೆದೇವರು ಕೊಡಂಬಳ್ಳಿಯ ಬಿಸಿಲಮ್ಮನಿಗೆ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಶೀಲಾ ಯೋಗೇಶ್ವರ್, ಪುತ್ರರಾದ ಶ್ರವಣ್, ಧ್ಯಾನ್ ಒಡಗೂಡಿ ಪೂಜೆ ಸಲ್ಲಿಸಿದರು. ರೋಡ್ ಶೋ ಮೂಲಕ ತೆರಳಿ ಸಿಪಿವೈ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬಸವನಗುಡಿ ದೇವಾಲಯದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ಸಾಗಲಿದ್ದಾರೆ.

    ಸವದಿಯಿಂದ ಶಿವಯೋಗಿಗಳ ದರ್ಶನ
    ಇಂದು ಅಥಣಿ ಕ್ಷೇತ್ರದಿಂದ ಮಹೇಶ್ ಕುಮಟಳ್ಳಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಸಲ್ಲಿದ್ದಾರೆ. 11 ಗಂಟೆಗೆ ತಮ್ಮ ಅಭಿಮಾನಿಗಳು ಕಾರ್ಯಕರ್ತರ ಜೊತೆ ಬೃಹತ್ ಮೆರವಣಿಗೆ ಮೂಲಕ ತೆರಳಿ ಶಕ್ತಿ ಪ್ರದರ್ಶನದ ಬಳಿಕ ಅಥಣಿ ತಹಶಿಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಟೆಂಪಲ್ ರನ್ ಮಾಡಿರುವ ಸವದಿ, ಪಟ್ಟಣದ ಶಿವಯೋಗಿಗಳ ಮಠಕ್ಕೆ ಭೇಟಿ ನೀಡಿ ಶಿವಯೋಗಿಗಳ ದರ್ಶನ ಪಡೆದರು. ಅಲ್ಲದೆ, ಅಥಣಿಯ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.

    ‘ಮಳೆಯಲ್ಲಿ ಸಾಂಗ್​ ಶೂಟಿಂಗ್​ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿ ಸರ್ ಗಲಿಬಿಲಿಗೊಂಡಿದ್ದರು’

    ನನಗೆ ಪೂರ್ಣಾ ಜೊತೆ ಲವ್ ಅಫೇರ್ ಇದೆ ಆದರೆ… ನಟ, ನಿರ್ದೇಶಕ ರವಿಬಾಬು ಶಾಕಿಂಗ್​ ಹೇಳಿಕೆ

    ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts