More

    ಪ್ರಸಾದ ತಯಾರಿಸೋ ವೇಳೆ ಅಗ್ನಿ ಅವಘಡದಿಂದ ಮೃತರಾದ ಅರ್ಚಕ‌ರು…

    ಜಯನಗರ: ಈಗ ಬಹುತೇಕ ಎಲ್ಲರೂ ಗ್ಯಾಸ್ ಒಲೆಯಲ್ಲೇ ಅಡುಗೆ ಮಾಡುವುದು. ಅದು ಎಷ್ಟೇ ಸುರಕ್ಷಿತ ವಿಧಾನ ಆಗಿದ್ದರೂ ಗ್ಯಾಸ್​ ಎನ್ನುವುದು ಯಾವಾಗಲೂ ಅಪಾಯಕಾರಿ. ಇಲ್ಲೊಬ್ಬ ಅರ್ಚಕರು ಮರೆವಿನಿಂದಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಜಯನಗರದ 4th ಬ್ಲಾಕ್‌ನಲ್ಲಿರೋ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅರ್ಚಕರೊಬ್ಬರು ಪ್ರಸಾದ ತಯಾರಿಸುವ ವೇಳೆ ಅಗ್ನಿ ಅವಘಡದಿಂದ ತಮ್ಮ ಪ್ರಾಣ ಕಳೆದುಕೊಂಡ ದುರ್ಘಟನೆ ನಡೆದಿದೆ.

    18ನೇ ತಾರೀಕಿನಂದು ಎಂದಿನಂತೆ ಬೆಳಗ್ಗೆ 61 ವರಷ ಪ್ರಾಯದ ಅರ್ಚಕ ನಾಗಯ್ಯ ದೇವಸ್ಥಾನಕ್ಕೆ ಹೋಗಿದ್ದರು. ಪ್ರಸಾದ ತಯಾರಿಸಲು ಅರ್ಚಕರು ದೇವಸ್ಥಾನದ ಹಿಂಬಾಗದ ಕೋಣೆಗೆ ಹೋಗಿದ್ದರು. ಈ ವೇಳೆ ಗ್ಯಾಸ್ ಆನ್ ಮಾಡಿ ಬೆಂಕಿಪೊಟ್ಟಣಕ್ಕಾಗಿ ಹುಡುಕಾಡಿದ್ದಾರೆ. ಅದು ಸಿಗಲಿಲ್ಲ ಎಂದು ಅಟ್ಟದ ಮೇಲ್ಭಾಗದ ಕೋಣೆಗೆ ತೆರಳಿದ್ದರು. ಆದರೆ ಈ ವೇಳೆ ಗ್ಯಾಸ್​ ಸ್ಟೌ ಆಫ್​ ಮಾಡಲು ಅರ್ಚಕರು ಮರೆತು ಹೋಗಿದ್ದಾರೆ. ಅಷ್ಟು ಹೊತ್ತಿಗೆ ಗ್ಯಾಸ್ ಲೀಕ್ ಆಗಿತ್ತು. ಈ ವಿಷಯವನ್ನು ಗಮನಿಸದ ಅರ್ಚಕರು ಕಡ್ಡಿ ಗೀರಿದ್ದಾರೆ. ಇದರಿಂದ ಒಮ್ಮೆಲೆ ಗ್ಯಾಸ್​ ಸ್ಫೋಟವಾಗಿ ಅರ್ಚಕರಿಗೆ ಗಂಭೀರ ಗಾಯಗಳಾಗಿದ್ದವು.

    ಈ ಘಟನೆ ನಡೆದ ನಂತರ ಗಾಯಗೊಂಡಿದ್ದ ಅರ್ಚಕರನ್ನು ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಸಲಾಗಿತ್ತು.. ಆದರೆ ಚಿಕಿತ್ಸೆ ಫಲಕಾರಿಯಾಗದೆ 23ರಂದು ಅರ್ಚಕ ನಾಗಯ್ಯ ದೈವಾಧೀನರಾಗಿದ್ದಾರೆ. ಸದ್ಯ ಜಯನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts