More

    ದೇವಸ್ಥಾನ, ಮನೆಗೆ ನುಗ್ಗಿದ ನೀರು

    ನಿಪ್ಪಾಣಿ: ಎರಡು ದಿನಗಳಿಂದ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕರೊನಾ ಹಾವಳಿ ಮಧ್ಯೆ ಪ್ರವಾಹದ ಭೀತಿಯೂ ಎದುರಾಗಿದೆ.

    ಹಳ್ಳಕೊಳ್ಳಗಳು ತುಂಬಿ ಹರಿದು ತಾಲೂಕಿನ ವಿವಿಧ ಗ್ರಾಮಗಳ ಮನೆಗಳಲ್ಲಿ, ಗುಡಿಗಳಲ್ಲಿ ನೀರು ನುಗ್ಗಿದೆ. ಮಮದಾಪುರ ಗ್ರಾಮದ ಅಂಬಿಕಾ ದೇವಸ್ಥಾನದಲ್ಲಿ ನೀರು ನುಗ್ಗಿದೆ. ಲಖನಾಪುರ ಗ್ರಾಮದ ಬಳಿ ಹಳ್ಳದ ನೀರು ನಿಪ್ಪಾಣಿ-ಅಕ್ಕೋಳ ರಸ್ತೆ ಮೇಲೆ ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ. ನಿಪ್ಪಾಣಿ ನಗರದ ಕುಂಬಾರ ಗಲ್ಲಿಯಲ್ಲಿ ನಂದಕುಮಾರ ಭೋಪಳೆ ಅವರಿಗೆ ಸೇರಿದ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ತಾಲೂಕಿನ ಕೊಗನೋಳಿ ಗ್ರಾಮದ ಗಾಯಕವಾಡ ಗಲ್ಲಿಯಲ್ಲಿ ಹಿಂದುರಾವ್ ಶಂಕರ ಕೋಳಿ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ

    ಬೋರಗಾಂವ ವರದಿ: ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ಸಮೀಪದ ಕೊಗನೊಳ್ಳಿ ಗ್ರಾಮದ ಬಡಾವಣೆಗಳ ಮನೆಗಳಲ್ಲಿ ನೀರು ನುಗ್ಗಿದೆ. ಗ್ರಾಮದ ಸುತಾರ ಬಡಾವಣೆ ಹಾಗೂ ಲೋಖಂಡೆ ಬಡಾವಣೆ ಗಳ ಮನೆಗಳಲ್ಲಿ ನೀರು ನುಗ್ಗಿದೆ. ಧಾರಾಕಾರ ಮಳೆಯಿಂದಾಗಿ ಗ್ರಾಮದ ಅಂಬಿಕಾ ಕೆರೆ ತುಂಬಿ ಹರಿದಿದ್ದು, ಕೆರೆಯ ನೀರು ರಸ್ತೆ ಚರಂಡಿಗಳಲ್ಲಿ ಹರಿಯುತ್ತಿದೆ. ಹಾಗಾಗಿ ಮನೆಗಳಿಗೆ ನೀರು ನುಗ್ಗಿದೆ. ಏಕಾಏಕಿ ಮನೆಗಳಲ್ಲಿ ನೀರು ನುಗ್ಗಿದ್ದರಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts