More

    ಆಂಧ್ರಪ್ರದೇಶದಲ್ಲಿ ಹೆಚ್ಚಾಗಿದೆ ದೇಗುಲ ಧ್ವಂಸ ಪ್ರಕರಣ; ಹೈ ಅಲರ್ಟ್ ಘೋಷಣೆ

    ಅಮರಾವತಿ: ಆಂಧ್ರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ದೇವಸ್ಥಾನಗಳ ಮೇಲಿನ ದಾಳಿ, ಧ್ವಂಸ ಪ್ರಕರಣ ಹೆಚ್ಚಾಗಿದೆ. ಹೀಗಾಗಿ, ರಾಜ್ಯದ್ಯಂತ ದೇವಸ್ಥಾನಗಳ ಮೇಲಿನ ನಿಗಾ ಹೆಚ್ಚಿಸಲು ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಪತ್ರಿಯೊಂದು ದೇವಸ್ಥಾನಕ್ಕೂ ಭದ್ರತೆ ಒದಗಿಸುವಂತೆ ಸೂಚನೆ ನೀಡಿರುವ ಪೊಲೀಸ್ ಇಲಾಖೆ, ದೇವಸ್ಥಾನಗಳ ಸುತ್ತ ಬಿಗಿ ಪೊಲೀಸ್ ಪಹರೆಗ ಕ್ರಮ ತೆಗೆದುಕೊಂಡಿದೆ. ಎಲ್ಲ ದೇವಸ್ಥಾನಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದನ್ನು ಕಡ್ಡಾಯ ಮಾಡಿದೆ.

    ಸೀತಾ ವಿಗ್ರಹ ಧ್ವಂಸ: ವಿಜಯವಾಡದಲ್ಲಿ ಶ್ರೀಸೀತಾರಾಮ ಮಂದಿರದಲ್ಲಿದ್ದ ಸೀತಾದೇವಿಯ ವಿಗ್ರಹವನ್ನು ದುಷ್ಕರ್ವಿುಗಳು ಶನಿವಾರ ಹಾನಿಗೊಳಿಸಿದ್ದಾರೆ. ಡಿಸೆಂಬರ್ 29ರಂದು ಶ್ರೀರಾಮ ವಿಗ್ರಹವನ್ನು ಹಾಳುಗೆಡವಿದ್ದರು. ಈ ಮೂರ್ತಿ ಡಿಸೆಂಬರ್ 30ರಂದು ದೇವಸ್ಥಾನದ ನೀರಿನ ಟ್ಯಾಂಕ್​ನಲ್ಲಿ ಪತ್ತೆಯಾಗಿತ್ತು. ರಾಜಕೀಯ ಕೆಸರೆರಚಾಟ: ಆಂಧ್ರ ಪ್ರದೇಶದಲ್ಲಿ ದೇಗುಲ ಧ್ವಂಸ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ವೈಎಸ್​ಆರ್​ಸಿ ಪಕ್ಷ ಆಡಳಿತದಲ್ಲಿ ಕಳೆದ 19 ತಿಂಗಳ ಅವಧಿಯಲ್ಲಿ 125ಕ್ಕೂ ಹೆಚ್ಚು ದೇಗುಲಗಳು ಧ್ವಂಸವಾಗಿವೆ. ಧಾರ್ವಿುಕ ಕ್ಷೇತ್ರಗಳ ರಕ್ಷಣೆ ಮಾಡುವಲ್ಲಿ ಜಗನ್ ಸರ್ಕಾರ ವಿಫಲವಾಗಿದೆ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಈ ನಡುವೆ, ಜಗನ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿಯೇ ಟಿಡಿಪಿ ನಾಯಕರು ಈ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿ ದ್ದಾರೆ ಎಂದು ವೈಎಸ್​ಆರ್​ಸಿ ಸಂಸದ ವಿಜಯಸಾಯಿ ರೆಡ್ಡಿ ಆರೋಪಿಸಿದ್ದಾರೆ.

    ನದಿ ದಡದಲ್ಲಿ ಸಿಕ್ಕ ಬೈಕ್​, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್​!

    ‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

    ಕರೊನಾ ಎಂಬುದೇ ಸುಳ್ಳು, ವಂಚನೆ!; ಆಸ್ಪತ್ರೆ ಮುಂದೆಯೇ ಪ್ರತಿಭಟನೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts