More

    9 ಜಿಲ್ಲೆಗಳಲ್ಲಿ 40ರ ಗಡಿ ದಾಟಿದ ಉಷ್ಣಾಂಶ: ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುಂದುವರಿಕೆ

    ಬೆಂಗಳೂರು:ಅರ್ಧ ರಾಜ್ಯಕ್ಕೆ ಮುಂದಿನ ಎರಡು ದಿನ ಬಿಸಿ ಗಾಳಿ ಮುಂದುವರಿಯಲಿದೆ. 9 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 40 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಟಿದ್ದು, ತಾಪಮಾನದಿಂದಾಗಿ ಕರುನಾಡು ಜನರು ತತ್ತರಿಸಿದ್ದಾರೆ. ಅಲ್ಲದೆ, ಕೆಲವೆಡೆ ನೀರು ಸಿಗದೆ ಮೂಕ ಪ್ರಾಣಿಗಳ ರೋಧನೆ ಮುಗಿಲು ಮುಟ್ಟಿದೆ.

    ಭಾನುವಾರ ರಾಜ್ಯದ ಎಲ್ಲ ಜಿಲ್ಲೆಗಳಗಿಂತ ಯಾದಗಿರಿಯಲ್ಲಿ 44.6 ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಬಳ್ಳಾರಿ 43.7, ಕಲಬುರಗಿ 43.1, ತುಮಕೂರು 42, ರಾಯಚೂರು 41.8, ಬಾಗಲಕೋಟೆ 41.5, ಕೊಪ್ಪಳ 41.3, ವಿಜಯಪುರ 41 ಹಾಗೂ ಗದಗ 40.6 ಡಿ.ಸೆ.ಉಷ್ಣಾಂಶ ದಾಖಲಾಗಿದೆ. ಈ ಮೇಲಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ 3-4 ಡಿ.ಸೆ.ಹೆಚ್ಚು ತಾಪಮಾನ ಕಂಡುಬರುತ್ತಿದೆ. ಬೆಳಗಾವಿ, ಧಾರವಾಡ, ಬೀದರ್​, ದಾವಣಗೆರೆ ಜಿಲ್ಲೆಗಳಲ್ಲಿ 40ರ ಅಸುಪಾಸಿನಲ್ಲಿ ಉಷ್ಣಾಂಶ ಏರಿಕೆಯಾಗಿದೆ. ದಣ ಕರ್ನಾಟಕ ಜಿಲ್ಲೆಗಳಲ್ಲೂ ಉಷ್ಣಾಂಶ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಮಂಡ್ಯ 39, ಚಾಮರಾಜನಗರ 38.9, ಕೋಲಾರ 38.3,ಚಿಕ್ಕಬಳ್ಳಾಪುರ 37.8,ಬೆಂ.ಗ್ರಾಮಾಂತರ 37.8, ಮೈಸೂರು 37.7, ಬೆಂಗಳೂರು 37.6, ರಾಮನಗರ 37.3 ಡಿ.ಸೆ.ದಾಖಲಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಇನ್ನಷ್ಟು ಹೆಚ್ಚಳವಾಗುತ್ತಿದ್ದು, ಗರಿಷ್ಠ ತಾಪಮಾನದಲ್ಲಿ 3&4 ಡಿ.ಸೆ.ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

    15 ವರ್ಷ ಬಳಿಕ ದಾಖಲೆ ಉಷ್ಣಾಂಶ:
    ಗಾರ್ಡನ್​ ಸಿಟಿ, ಐಟಿ ಸಿಟಿಯೆಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ದಾಖಲೆ ಉಷ್ಣಾಂಶ ಕಂಡುಬರುತ್ತಿದೆ. ಏಪ್ರಿಲ್​ನಲ್ಲಿ ಐದಾರು ಬಾರಿ 37ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಭಾನುವಾರ ಬೆಂಗಳೂರು 37.6 ಡಿ.ಸೆ.ದಾಖಲಾಗಿದ್ದು, ಇದು 15 ವರ್ಷ ಬಳಿಕ ಏಪ್ರಿಲ್​ನಲ್ಲಿ ಅತಿ ಹೆಚ್ಚು ಉಷ್ಣಾಂಶ. ನಗರದಲ್ಲಿ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 3.6 ಡಿ.ಸೆ.ಹೆಚ್ಚಳವಾಗಿದೆ. ಕಳೆದ ವರ್ಷ ಈಶಾನ್ಯ ಮಾನ್ಸೂನ್​ ಕುಂಠಿತವಾಗಿದ್ದ ಪರಿಣಾಮ ಇನ್ನಷ್ಟು ಉಷ್ಣಾಂಶ ಏರಿಕೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

    ರಾಜಕೀಯ ಪಕ್ಷಗಳಿಂದ ನಾಮಪತ್ರ ವಾಪಸ್‌ಗೆ ಕೊನೆಯ ಕ್ಷಣದ ಕಸರತ್ತು

    ಕೆಲ ಜಿಲ್ಲೆಗಳಲ್ಲಿ ಹಗುರ ಮಳೆ:
    ದಣ ಕನ್ನಡ, ಉಡುಪಿ, ಬೀದರ್​, ಶಿವಮೊಗ್ಗ, ಕಲಬುರಗಿ, ಹಾಸನ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ ಏ.10ರಿಂದ ಏ.14ರವರೆಗೆ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಉಷ್ಣಾಂಶ ವಿವರ
    ದಿನಾಂಕ        ತಾಪಮಾನ
    ಏ.1             36.5
    ಏ.2             37.3
    ಏ.3             36.6
    ಏ.4             37.6
    ಏ.5             37.6
    ಏ.6             37.8
    ಏ.7             37.8

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts