More

    ಏಕದಿನ ವಿಶ್ವಕಪ್ ಟೂರ್ನಿ ಕ್ಯಾಪ್ಟನ್ಸ್ ಡೇ ಸಮಾರಂಭದಲ್ಲಿ ನಿದ್ದೆಗೆ ಜಾರಿದ ನಾಯಕ

    ಅಹಮದಾಬಾದ್: ಐಸಿಸಿ ಟೂರ್ನಿಗೆ ಮುನ್ನ ಆಯೋಜಿಸುವ ‘ಕ್ಯಾಪ್ಟನ್ಸ್ ಡೇ’ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ನಿದ್ದೆಗೆ ಜಾರುವ ಮೂಲಕ ಸುದ್ದಿಯಾಗಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಆಡುವ 10 ತಂಡಗಳ ನಾಯಕರು ಹಾಜರಿದ್ದ ಸಮಾರಂಭದಲ್ಲಿ ಬವುಮಾ ತೂಕಡಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನರೇಂದ್ರ ಮೋದಿ ಕ್ರೀಡಾಂಗಣದ ಸಭಾಂಗಣದಲ್ಲಿ ಬುಧವಾರ ಎಲ್ಲ 10 ತಂಡಗಳ ನಾಯಕರು ಹಾಗೂ ಪತ್ರಕರ್ತರಿಗೆ ಆಯೋಜಿಸಿದ್ದ ವಿಶೇಷ ಸಂವಾದ ಕಾರ್ಯಕ್ರಮದ ಮಧ್ಯದಲ್ಲಿ ಟೆಂಬಾ ಬವುಮಾ ನಿದ್ದೆಗೆ ಜಾರಿದ್ದಾರೆ. ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಬವುಮಾ, ಕಾರ್ಯಕ್ರಮದಲ್ಲಿ ತಾನು ನಿದ್ದೆ ಮಾಡಿರಲಿಲ್ಲ, ಕ್ಯಾಮರಾದಲ್ಲಿ ತಪ್ಪಾಗಿ ಚಿತ್ರೀಕರಿಸಲಾಗಿದೆ ಎಂದು ಟ್ವಿಟ್ ಮೂಲಕ ಸಮಜಾಯಿಷಿ ನೀಡಿದ್ದಾರೆ.

    https://x.com/mufaddal_vohra/status/1709461922033381652?s=20

    ಐಸಿಸಿ ಏಕದಿನ ವಿಶ್ವಕಪ್ ಮಹಾಕದನಕ್ಕೆ ವೇದಿಕೆ ಸಜ್ಜಾಗಿದ್ದು, ಕ್ರಿಕೆಟ್ ಜನಕ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ಬಾರಿ ಕೊದಲೆಳೆಯ ಅಂತರದಲ್ಲಿ ಪ್ರಶಸ್ತಿ ವಂಚಿತವಾಗಿದ್ದ ನ್ಯೂಜಿಲೆಂಡ್ ತಂಡಗಳು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವೆನಿಸಿದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುರುವಾರ ಮುಖಾಮುಖಿ ಆಗಲಿವೆ. ಇದರೊಂದಿಗೆ 13ನೇ ಆವೃತ್ತಿಯ ವಿಶ್ವಕಪ್‌ಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಕಳೆದ ಬಾರಿಯ ೈನಲ್ ಪಂದ್ಯದ ಮರುಹೋರಾಟ ಇದಾಗಿದ್ದು, ಕಿವೀಸ್ ಪ್ರಶಸ್ತಿ ಸುತ್ತಿನ ವೀರೋಚಿತ ಸೋಲಿಗೆ ಮುಯ್ಯಿ ತೀರಿಸುವ ತವಕದಲ್ಲಿದೆ.

     

    https://x.com/mufaddal_vohra/status/1709501203481260366?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts