More

    ರಚ್ಚು ಮೊದಲ ತೆಲುಗು ಸಿನಿಮಾ ರಿಲೀಸ್, ಹೇಗಿದೆ ‘ಸೂಪರ್ ಮಚ್ಚಿ’ಗೆ ರೆಸ್ಪಾನ್ಸ್?

    ಜನವರಿ 14 2021 ನಟಿ ರಚಿತಾ ರಾಮ್ ಅವರ ಜೀವನದಲ್ಲಿ ತುಂಬಾ ಮುಖ್ಯವಾದ ದಿನ ಎಂದೇ ಹೇಳಬೇಕು. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ನಟಿ ರಚಿತಾ ಅವರ ಮೊದಲ ತೆಲುಗು ಸಿನಿಮಾ ಜನವರಿ 14 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿತ್ತು. ‘ಸೂಪರ್ ಮಚ್ಚಿ‘ ಸಿನಿಮಾದಲ್ಲಿ ಮೀನಾಕ್ಷಿ ಪಾತ್ರದಲ್ಲಿ ಡಿಂಪಲ್ ಕ್ವೀನ್ ಅವರು ಮಿರ ಮಿರ ಮಿಂಚುತ್ತಿದ್ದಾರೆ.
    ಮೆಗಾ ಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಅವರ ಜತೆ ನಾಯಕಿಯಾಗಿ ನಟಿಸಿರುವ ರಚಿತಾ ಹೋಮ್ಲಿ ಹುಡುಗಿಯಂತೆ ಬಬ್ಲಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ರಾಜು ಎಂಬ ಬೇಜವಾಬ್ದಾರಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಕಲ್ಯಾಣ್ ದೇವ್ ಅವರನ್ನು ಸಾಫ್ಟ್ವೇರ್ ಇಂಜಿನಿಯರ್ ಆದ ಮೀನಾಕ್ಷಿ ತುಂಬಾ ಹುಚ್ಚಾಗಿ ಪ್ರೀತಿಸುತ್ತಾಳೆ. ಆದರೆ, ರಾಜು ಮೀನಾಕ್ಷಿಯ ಪ್ರೀತಿಯನ್ನು ನಿರಾಕರಿಸುತ್ತಾನೆ.

    ರಚ್ಚು ಮೊದಲ ತೆಲುಗು ಸಿನಿಮಾ ರಿಲೀಸ್, ಹೇಗಿದೆ 'ಸೂಪರ್ ಮಚ್ಚಿ'ಗೆ ರೆಸ್ಪಾನ್ಸ್?

    ಇದು, ಈ ಸಿನಿಮಾ ಕಥೆಯಾಗಿದೆಚಿತ್ರದ ನಾಯಕಿಯೇ ನಟನ ಹಿಂದೆ ಪ್ರೀತಿಸು ಎಂದು ಬೀಳುವ ಕಥೆಯಾಗಿರುವುದರಿಂದ, ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಯಾವುದೇ ಪ್ರಚಾರವಿಲ್ಲದೇ ಏಕಾಏಕಿ ಬಿಡುಗಡೆ ದಿನಾಂಕವನ್ನು ತಿಳಿಸಿ, ಈ ಚಿತ್ರವನ್ನು ರಿಲೀಸ್ ಮಾಡಲಾಗಿದೆ. ಹಾಗಾಗಿ, ಸಿನಿಪ್ರೇಕ್ಷಕರಲ್ಲಿ ಚಿತ್ರದ ಮೇಲೆ ಕುತೂಹಲ ಹೆಚ್ಚಿದ್ದು, ಎಲ್ಲರೂ ಥಿಯೇಟರ್​ಗಳಿಗೆ ಲಗ್ಗೆ ಇಡುತ್ತಿದ್ದಾರೆ

    ಅಪ್ಪು ‘ಐ ಲವ್ ಯೂ’: ಸಂಕ್ರಾಂತಿಯಂದು ಶಿವಣ್ಣನ ಎರಡು ವಿಡಿಯೋಗಳು ವೈರಲ್!

    ನಟಿ ಅರ್ಚನಾ ಗೌತಮ್​ಗೆ ಕಾಂಗ್ರೆಸ್ ಎಂಎಲ್ಎ ಟಿಕೆಟ್, ಬಿಕಿನಿ ಫೋಟೋ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts