More

    ನಿವೃತ್ತ ಪೊಲೀಸ್​ ಅಧಿಕಾರಿಯನ್ನು ಕೊಂದು ಮೃತದೇಹದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಆರೋಪಿ

    ಹೈದರಾಬಾದ್​: ನಿವೃತ್ತ ಪೊಲೀಸ್​ ಅಧಿಕಾರಿಯನ್ನು ಕೊಲೆಗೈದು ಮೃತದೇಹದ ಮುಂದೆ ನಿಂತು ಆರೋಪಿ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಫೋಟೋದಲ್ಲಿರುವ ಮೃತ ವ್ಯಕ್ತಿಯನ್ನು ನಿವೃತ್ತ ಸಹಾಯಕ ಸಬ್​ ಇನ್ಸ್​ಪೆಕ್ಟರ್ (ಎಎಸ್​ಐ)​ ಶಿವರಾಜ್​(62) ಎಂದು ಗುರುತಿಸಲಾಗಿದೆ. ಆರೋಪಿಯ ಹೆಸರು ವಿವೇಕ್​ ಎಂದು ತಿಳಿದುಬಂದಿದೆ.

    ನಿವೃತ್ತ ಪೊಲೀಸ್​ ಅಧಿಕಾರಿ ಉತ್ನೂರ್​ ಸಮೀಪದ ಗಂಗಣ್ಣಪೇಟೆ ಮೂಲದವರಾಗಿದ್ದು, ಮಾರ್ಚ್​ 6ರಂದು ಕೊಲೆಯಾಗಿದ್ದಾರೆ. ಕುಟುಂಬ ಕಲಹವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅದರಲ್ಲಿ ವಿವೇಕ್​ ಕೂಡ ಒಬ್ಬನಾಗಿದ್ದಾನೆ. ಅಲ್ಲದೆ, ವಿವೇಕ್​ ಮೃತ ಶಿವರಾಜ್​ ಸೋದರ ಸಂಬಂಧಿಯಾಗಿದ್ದಾನೆ.

    ಮೂಲಗಳ ಪ್ರಕಾರ ವಿವೇಕ್​ ಇಂಜಿನಿಯರ್​ ಶಿಕ್ಷಣವನ್ನು ಮೊಟಕುಗೊಳಿಸಿದ್ದಾನೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಆರೋಪಿ ವಿವೇಕ್​ ತಂದೆ ಜಯರಾಜ್​ ಮತ್ತು ಮೃತ ಶಿವರಾಜ್​ ನಡುವೆ ಕಲಹ ಉಂಟಾಗಿತ್ತು ಎಂದು ತಿಳಿದುಬಂದಿದೆ.

    ವಿವೇಕ್​ ಮತ್ತು ಶಿವರಾಜ್​ ಮಾರ್ಚ್​ 6ರಂದು ತಮ್ಮ ಆಪ್ತರ ಜತೆಯಲ್ಲಿ ಗ್ರಾಮದ ಪ್ರಾರ್ಥನಾ ಮಂದಿರದ ಬಳಿ ಭೇಟಿ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು, ತಾರಕಕ್ಕೇರಿದಾಗ ವಿವೇಕ್​ ಕಟ್ಟಿಗೆಯೊಂದನ್ನು ತೆಗೆದುಕೊಂಡು ಶಿವರಾಜ್​ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಸ್ಥಳದಲ್ಲೇ ಕುಸಿದುಬಿದ್ದ ಶಿವರಾಜ್,​ ಸಾಕಷ್ಟು ರಕ್ತಸ್ರಾವವಾಗಿ ಪ್ರಾಣಬಿಟ್ಟಿದ್ದಾನೆ ಎಂದು ತನಿಖಾ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

    ತದನಂತರ ಮೃತದೇಹವನ್ನು ಶವಪರೀಕ್ಷೆಗಾಗಿ ಉತ್ನೂರ್​ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಪಿಯನ್ನು ಬಂಧಿಸಿ, ಸ್ಥಳೀಯ ಮ್ಯಾಜಿಸ್ಟ್ರೇಟ್​ ಮುಂದೆ​ ಹಾಜರು ಪಡಿಸಲಾಯಿತು. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಕೊಲೆಗೆ ಸಂಬಂಧಪಟ್ಟ ಫೋಟೋವೊಂದು ವೈರಲ್​ ಆಗಿದ್ದು, ಇದನ್ನು ಯಾವಾಗ ಕ್ಲಿಕ್ಕಿಸಲಾಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆಯ ಮೊರೆ ಹೋಗಿದ್ದಾರೆ. ಅಲ್ಲದೆ, ಫೋಟೋವನ್ನು ಸಾಕ್ಷ್ಯಾಧಾರವನ್ನಾಗಿ ಪರಿಗಣಿಸಲಾಗಿದೆ. (ಏಜೆನ್ಸೀಸ್​)

    ಪಾರ್ಸೆಲ್​ ತೆಗೆದುಕೊಳ್ಳುವುದು ತಡವಾಯಿತೆಂದು ಜೊಮ್ಯಾಟೊ ಸಿಬ್ಬಂದಿಗೆ ಸಾಯುವಂತೆ ಹೊಡೆದ ಹೋಟೆಲ್​ ಸಿಬ್ಬಂದಿ

    ಹೋಳಿ ಸಂಭ್ರಮದಲ್ಲಿ ಚೆಲ್ಲಿತು ರಕ್ತ; ಬಣ್ಣದಿಂದ ತಪ್ಪಿಸಿಕೊಳ್ಳಲು ಹೋಗಿ ಪ್ರಾಣವನ್ನೇ ಬಿಟ್ಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts