ಚಿನ್ನದ ಝರಿ ನೇಯ್ಗೆ ಇರುವ ಸೀರೆಯನ್ನು ದೇವರಿಗೆ ಅರ್ಪಿಸಿದ ಭಕ್ತ!

Saree With Gold Zari
Published on

ತೆಲಂಗಾಣ: ಭಕ್ತರೊಬ್ಬರು ಚಿನ್ನದ ಜರಿ ಇರುವುದು ಸೇರಿ ಎರಡು ವಿಶಿಷ್ಟ ಸೀರೆಗಳನ್ನು ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ಮತ್ತು ತಿರುಚನೂರು ಪದ್ಮಾವತಿ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.

ಅರ್ಪಿಸಿದ ಸೀರೆಯ ಬೆಲೆ ಸುಮಾರು 45,000 ರೂ. ಆಗಿದ್ದರೆ, ಅಮ್ಮನವರಿಗೆ ದೇಣಿಗೆಯಾಗಿ ನೀಡಿದ ಸೀರೆಯಲ್ಲಿ 5 ಗ್ರಾಂ ಚಿನ್ನದ ಝರಿ ನೇಯ್ಗೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿಪೊಟ್ಟಣದಲ್ಲಿ ಮಡಚಿಡಬಹುದಾದ ಈ ಸೀರೆಗಳನ್ನು ನಲ್ಲ ವಿಜಯ್‌ ಅವರು ಆಂಧ್ರಪ್ರದೇಶದ ಮುಖ್ಯಕಾರ್ಯದರ್ಶಿ ಕೆ.ಎಸ್‌.ಜವಾಹರ್‌ ರೆಡ್ಡಿ ಮೂಲಕ ದೇಗುಲದ ಆಡಳಿತ ಮಂಡಳಿಗೆ (ಟಿಟಿಡಿ) ಹಸ್ತಾಂತರಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಕ್ತರೊಬ್ಬರು ತಿರುಪತಿಯ ಶ್ರೀ ಪದ್ಮಾವತಿ ರೆಸ್ಟ್ ಹೌಸ್‌ನಲ್ಲಿ ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) ಸೀರೆಗಳನ್ನು ಅರ್ಪಿಸಿದರು ಎಂದು ಅಧಿಕಾರಿ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net