More

    ಈ ಗ್ರಾಮದ ಸಮಾರಂಭಗಳಲ್ಲಿ ಬಿಯರ್ ಬ್ಯಾನ್; ಕಾರಣ ಕೇಳಿದರೆ ಬರುತ್ತೆ ವಿಚಿತ್ರ ಉತ್ತರ!

    ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಬುಡಕಟ್ಟು ಸಮುದಾಯವದರು ವಾಸಿಸುವ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಕೀಲಾಂಗ್ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ವ್ಯರ್ಥ ವೆಚ್ಚವನ್ನು ತಡೆಯಲು ಹಬ್ಬಗಳು ಮತ್ತು ಮದುವೆಗಳಲ್ಲಿ ಬಿಯರ್ ನೀಡುವುದನ್ನು ನಿಷೇಧಿಸಲಾಗಿದೆ.

    ಇದನ್ನೂ ಓದಿ: VIDEO | ಮಲ್ಲಿಗೆ ಹೂವಿನ ಸ್ಕರ್ಟ್​​ ತೊಟ್ಟು ಕಾಣಿಸಿಕೊಂಡ ಉರ್ಫಿ ಜಾವೇದ್! 
    ಬುಡಕಟ್ಟು ಸಮುದಾಯದವರು ವಾಸವಾಗಿಸುವ ಕೀಲಾಂಗ್ ಪಂಚಾಯತ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಹಬ್ಬಗಳು ಮತ್ತು ಮದುವೆಗಳಲ್ಲಿ ಬಿಯರ್ ಅನ್ನು ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿದೆ. ಇಂತಹ ಕಾರ್ಯಕ್ರಮಗಳಲ್ಲಿ ವ್ಯರ್ಥ ಖರ್ಚು ತಡೆಯಲು ಪಂಚಾಯತ್ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ. ಮದುವೆ ಮತ್ತು ಇತರ ಆಚರಣೆಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳ ಆಚರಣೆಗೆ ಕಡಿವಾಣ ಹಾಕುವ ಬಗ್ಗೆ ಗ್ರಾಮಸಭೆಯ ಸಭೆಯಲ್ಲಿ ಚರ್ಚಿಸಿದೆ ಎಂದು ಪಂಚಾಯತ್ ಮುಖ್ಯಸ್ಥರು ಹೇಳಿದ್ದಾರೆ.

    ಇದನ್ನೂ ಓದಿ: ನೆರೆ ಮನೆಯ 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ವ್ಯಕ್ತಿಗೆ 6 ತಿಂಗಳು ಜೈಲು ಶಿಕ್ಷೆ!
    ಈ ಹಿಂದೆ ಕಿನ್ನೌರ್ ಜಿಲ್ಲೆಯ ಹ್ಯಾಂಗ್ರಾಂಗ್ ಕಣಿವೆಯಲ್ಲಿರುವ ಸುಮಾರಾ ಪಂಚಾಯತ್ ಮದುವೆಗಳಲ್ಲಿ ಬುಡಕಟ್ಟು ಸಂಪ್ರದಾಯಗಳಿಗೆ ಅಂಟಿಕೊಳ್ಳಲು ಮತ್ತು ಆಡಂಬರ ಮತ್ತು ಪ್ರದರ್ಶನದೊಂದಿಗೆ  ನಡೆಯುವುದನ್ನು ನಿಯಂತ್ರಿಸಲು ಈ ನಿರ್ಣಯವನ್ನು ಅಂಗೀಕರಿಸಿತ್ತು. ಹಬ್ಬಗಳು ಮತ್ತು ಮದುವೆಗಳಲ್ಲಿ ಬಿಯರ್ ಅನ್ನು ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿದೆ. ಯುವಜನತೆಯೂ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸುವ ನಿಟ್ಟಿನಲ್ಲಿ ಚಿಂತಿಸುತ್ತಿದ್ದು, ಈ ನಿಟ್ಟಿನಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪರಿಷತ್ ಸದಸ್ಯ ಕುಂಗ ಬೋಧ್ ಹೇಳಿದರು.

    ಇದೇ ನೋಡಿ ವಿಶ್ವದ ದುಬಾರಿ ನಂಬರ್‌ ಪ್ಲೇಟ್; 122 ಕೋಟಿ ರೂ. ನೀಡಿ ಕಾರಿನ ನಂಬರ್ ಪ್ಲೇಟ್ ಖರೀದಿಸಿದ ವ್ಯಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts