More

    ಬಿಜೆಪಿ ವರ್ಚ್ಯುವಲ್​ ರ‍್ಯಾಲಿ ಮೂಲಕ ಕರೊನಾ ಸೋಂಕು ಹಬ್ಬಿಸುತ್ತಿದೆ: ಆರ್​ಜೆಡಿ ನಾಯಕನ ಆರೋಪ

    ಪಟನಾ: ಬಿಹಾರದಲ್ಲಿ ಕರೊನಾ ಪ್ರಸರಣ ಪ್ರಮಾಣ ಹೆಚ್ಚುತ್ತಿದ್ದರೂ ಬಿಜೆಪಿ ಮತ್ತು ಜೆಡಿಯು ಪಕ್ಷಗಳ ಮುಖಂಡರು ಚುನಾವಣೆ ಬಗ್ಗೆಯೇ ಯೋಚಿಸುತ್ತಿವೆ ಎಂದು ರಾಷ್ಟ್ರೀಯ ಜನತಾ ದಳ್​ (ಆರ್​ಜೆಡಿ) ನಾಯಕ ತೇಜಸ್ವಿ ಯಾದವ್​ ವ್ಯಂಗ್ಯವಾಡಿದ್ದಾರೆ.

    ಬಿಹಾರದಲ್ಲಿ ಕರೊನಾ ಸೋಂಕಿನ ಪರಿಸ್ಥಿತಿ ತುಂಬ ಕೆಟ್ಟದಾಗಿದೆ. ಇಲ್ಲಿ ಕೊವಿಡ್​-19 ತಪಾಸಣಾ ದರ ಕಡಿಮೆ ಇದೆ. ರಾಜ್ಯದಲ್ಲಿ ದಿನಕ್ಕೆ ಕನಿಷ್ಠ 30,000 ಜನರನ್ನಾದರೂ ಟೆಸ್ಟ್​ ಮಾಡಬೇಕು ಎಂದು ನಾವು ಒತ್ತಾಯಿಸುತ್ತಲೇ ಬಂದಿದ್ದೇವೆ. ಮಾರ್ಚ್​ನಿಂದ ಮೇ ವರೆಗೆ ಇದ್ದ ಲಾಕ್​​ಡೌನ್​ ಬಳಿಕ ಕರೊನಾ ವೈರಸ್ ಪ್ರಸರಣವಾಗುವ ಮತ್ತು ಸಾಯುವ ಸಂಖ್ಯೆಯೂ ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದೆ. ಇಷ್ಟೆಲ್ಲ ಆದರೂ ಬಿಜೆಪಿ ಮತ್ತು ಜೆಡಿಯುಗೆ ಚಿಂತೆಯೇ ಇಲ್ಲ. ಮುಂಬರುವ ಚುನಾವಣೆ ಬಗ್ಗೆಯೇ ಗಮನಹರಿಸುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಂದು ರಾತ್ರಿಯಿಂದಲೇ ಬೆಂಗಳೂರು ಸ್ತಬ್ಧ: ಲಾಕ್ ಡೌನ್ ಅವಧಿಯಲ್ಲಿ ಏನಿರುತ್ತೆ, ಏನಿರಲ್ಲ?

    ಬಿಜೆಪಿ ಕಚೇರಿಯಲ್ಲಿ ಒಟ್ಟು 75 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿದೆ. ಮುಖ್ಯಮಂತ್ರಿ ನಿವಾಸ, ಉಪಮುಖ್ಯಮಂತ್ರಿ ಕಚೇರಿ, ಕಾರ್ಯದರ್ಶಿಗಳು ಎಲ್ಲರೂ ಕರೊನಾ ಭೀತಿಯಲ್ಲಿದ್ದಾರೆ. ಸಾಮಾನ್ಯ ಜನರಂತೂ ಸದಾ ಕರೊನಾ ವೈರಸ್​ ಆತಂಕದಲ್ಲೇ ಇರುವಂತಾಗಿದೆ. ಹೀಗಿರುವಾಗ ಬಿಹಾರದಲ್ಲಿ ಚುನಾವಣೆ ನಡೆಸಲು ಹೇಗೆ ಸಾಧ್ಯ? ಅದರ ಮಧ್ಯೆ ಬಿಜೆಪಿ ವರ್ಚ್ಯುವಲ್​ ರ್ಯಾಲಿ ನಡೆಸಿ ಕರೊನಾ ಹರಡಲು ಕಾರಣವಾಗುತ್ತಿದೆ. ಬಿಜೆಪಿ ಎಲ್ಲೆಲ್ಲೆ ವರ್ಚ್ಯುವಲ್​ ರ‍್ಯಾಲಿ ಆಯೋಜಿಸಿತ್ತೋ ಅಲ್ಲೆಲ್ಲ ಕರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಇವರೆಲ್ಲ ಯಾವ ಜಮಾತ್​ಗೆ ಸೇರಿದ ಜನರು? ಈ ಬಗ್ಗೆ ಬಿಜೆಪಿಯವರೇ ಹೇಳಬೇಕು ಎಂದು ಟೀಕಿಸಿದ್ದಾರೆ.
    ಹಾಗೇ ರಾಜ್ಯದ ಆರೋಗ್ಯ ವ್ಯವಸ್ಥೆ ಸುಧಾರಣೆಯತ್ತ ಸರ್ಕಾರ ಗಮನಹರಿಸಬೇಕು ಎಂದು ಹೇಳಿದ್ದಾರೆ.(ಏಜೆನ್ಸೀಸ್​)

    ಬಾಲಿವುಡ್​ ನಟಿ ರೇಖಾ ಬಂಗಲೆಯಲ್ಲಿನ ಇನ್ನೂ ನಾಲ್ವರು ಗಾರ್ಡ್​ಗಳಿಗೆ ಕರೊನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts