More

    ಶೌಚಗೃಹದಲ್ಲಿ ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಆಚೆಗೆಸೆದ ಹದಿಹರೆಯದ ತಾಯಿ!

    ಮುಂಬೈ: ನವಜಾತ ಶಿಶುವನ್ನು ಶೌಚಾಲಯದ ಕಿಟಕಿಯಿಂದ ಹೊರಗೆ ಎಸೆದ ಆರೋಪದ ಮೇಲೆ ನವಿ ಮುಂಬೈ ಪೊಲೀಸರು ಹದಿಹರೆಯದ ಹುಡುಗಿ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    ಜನವರಿ 13 ರಂದು ತಡರಾತ್ರಿ, ಈಕೆ ತಂಗಿದ್ದ ಉಲ್ವೆಯಲ್ಲಿರುವ ಸಂಬಂಧಿಕರ ಮನೆಯ ಶೌಚಾಲಯದಲ್ಲಿ ಹೆರಿಗೆ ಮಾಡಿಸಿದ್ದಾರೆ. ಬಾಲಕಿ ಶೌಚಾಲಯದ ಕಿಟಕಿ ತೆಗೆದು ಮಗುವನ್ನು ಹೊರಗೆ ಎಸೆದಿದ್ದಾಳೆ ಎನ್ನಲಾಗಿದೆ. ಪೊಲೀಸರು ಆಕೆಯನ್ನು ವಾಶಿಯ ನಾಗರಿಕ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ.

    ಬಾಲಕಿ ತನ್ನ ಸೋದರಸಂಬಂಧಿಯೊಂದಿಗೆ ದೈಹಿಕ ಸಂಬಂಧ ಹೊಂದಿ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಆರೋಪದ ಅಡಿಯಲ್ಲಿ ಹದಿಹರೆಯದ ಹುಡುಗಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವಾಶಿಯ ಎನ್‌ಎಂಎಂ ಆಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರೆ, ಆರೋಪಿ ಹದಿಹರೆಯದ ಬಾಲಕಿಯನ್ನು ನೆರೂಲ್‌ನ ಎನ್‌ಎಂಎಂಸಿಯ ಮೀನಾತಾಯಿ ಠಾಕ್ರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಎನ್‌ಆರ್‌ಐ ಕರಾವಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಉತ್ತಮ್ ಜಗದಾಳೆ ಮಾಹಿತಿ ನೀಡಿದ್ದಾರೆ, . ಆರೋಪಿ ಹದಿಹರೆಯದ ಹುಡುಗಿಯಾಗಿದ್ದು ಸೇವಕಿಯಾಗಿ ಕೆಲಸ ಮಾಡುತ್ತಿದ್ದಾಳೆ ಎಂಬ ಮಾಹಿತಿ ಲಭಿಸಿದೆ.

    ಎಫ್‌ಐಆರ್‌ನ ಪ್ರಕಾರ, ಜನವರಿ 13ರಂದು ಮಧ್ಯರಾತ್ರಿ 12.45 ರ ಸುಮಾರಿಗೆ ಬೀಟ್ ಮಾರ್ಷಲ್ ಕಾನ್‌ಸ್ಟೆಬಲ್ ಸಂತೋಷ್ ಖಂಡಾರೆ ಮತ್ತು ಅವರ ಸಹೋದ್ಯೋಗಿ ಮದನೆ ರಾತ್ರಿ ಗಸ್ತು ತಿರುಗುತ್ತಿದ್ದರು. ಆಗ ಆಟೊ ರಿಕ್ಷಾ ಚಾಲಕರು ಉಲ್ವೆಯ ಸೆಕ್ಟರ್ 21 ರ ಕಟ್ಟಡದ ಆವರಣದಲ್ಲಿ ನವಜಾತ ಶಿಶುವನ್ನು ಎಸೆದಿರುವುದನ್ನು ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾನ್‌ಸ್ಟೆಬಲ್‌ಗಳು ಎಪಿಐ ಗಣೇಶ್‌ ಜಾಧವ್‌ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ತೆರಳಿದ್ದಾರೆ. ಎಪಿಐ ಜಾಧವ್ ನೇತೃತ್ವದ ಪೊಲೀಸ್ ತಂಡವು ನವಜಾತ ಶಿಶುವಿನ ತಾಯಿಯ ಬಗ್ಗೆ ವಿಚಾರಿಸಿದೆ. ನಂತರ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts