More

    ತಂತ್ರಜ್ಞಾನ ಬಳಕೆ ಶ್ಲಾಘನೀಯ

    ಚಿಕ್ಕೋಡಿ: ಎಂ.ಕೆ.ಕವಟಗಿಮಠ ಶಾಲೆಯು ಎಸ್‌ಎಸ್‌ಎಲ್‌ಸಿ ಲಿತಾಂಶದಲ್ಲಿ ಸತತ ಎರಡು ಬಾರಿಗೆ ಪ್ರಥಮ ಹಾಗೂ 17 ವರ್ಷಗಳಿಂದ ಉತ್ತಮ ಲಿತಾಂಶದೊಂದಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಸಿಎಲ್‌ಇ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಜಗದೀಶ ಕವಟಗಿಮಠ ಹೇಳಿದರು.

    ಪಟ್ಟಣದ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ನಡೆ-ನುಡಿ ಕಲಿಸಬೇಕು ಎಂದರು. ಸ್ಪರ್ಧಾತ್ಮಕ ಯುಗದಲ್ಲಿ ಬೋಧನೆಯಲ್ಲಿ ನೂತನ ತಂತ್ರಜ್ಞಾನ ಬಳಸುತ್ತಿರುವುದು ಸಂತಸದ ವಿಷಯ ಎಂದರು.

    ಶಿಕ್ಷಕ ಶಿವಾನಂದ ಗುಂಡಾಳಿ ಮಾತನಾಡಿ, ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಸತತ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಗುರಿ ಸಾಧಿಸಬಹುದು ಎಂದರು. ಮುಖ್ಯೋಪಾಧ್ಯಾಯ ಬಿ.ಡಿ.ರುಕಡೆ ವಾರ್ಷಿಕ ವರದಿ ಮಂಡಿಸಿದರು. ಎಸ್.ಐ. ಬಿಸ್ಕೋಪ, ಡಿ.ಎಸ್.ಕೋಳಿ ಇದ್ದರು. ಪ್ರೀತಿ ಕಾಂಬಳೆ ಸ್ವಾಗತಿಸಿದರು. ಸಂಧ್ಯಾ ಮೇತ್ರಿ ನಿರೂಪಿಸಿದರು. ಪ್ರಜ್ವಲ ಕೊಟಬಾಗಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts