More

    ಸಿಇಟಿ ಆಪ್ಷನ್ ಎಂಟ್ರಿಗೆ ಅವಕಾಶ ಕೊಟ್ಟ ಬೆನ್ನಿಗೇ ತಾಂತ್ರಿಕ ಸಮಸ್ಯೆ!; ಕಂಗೆಟ್ಟ ವಿದ್ಯಾರ್ಥಿಗಳು..

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರ ರಾತ್ರಿಯಿಂದಲೇ ಸಿಇಟಿ ಆಪ್ಷನ್​ ಎಂಟ್ರಿಗೆ ಅವಕಾಶ ಕಲ್ಪಿಸಿದ್ದು, ಇದಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಆಪ್ಷನ್​ ಎಂಟ್ರಿ ಮಾಡಲು ಮುಂದಾದಾಗ ತಾಂತ್ರಿಕ ಸಮಸ್ಯೆ ಉಂಟಾಗಿದೆ.

    ತಾಂತ್ರಿಕ ಸಮಸ್ಯೆಯಿಂದ ಕಂಗೆಟ್ಟಿರುವ ವಿದ್ಯಾರ್ಥಿಗಳು ಕೆಇಎ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿಇಟಿ ರ‌್ಯಾಂಕಿಂಗ್ ಪಟ್ಟಿ ಗೊಂದಲದಿಂದ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿದೆ. ಇದರಿಂದಾಗಿ ಸಿಇಟಿ ಕ್ಷಣ ಕ್ಷಣದ ಮಾಹಿತಿಗಾಗಿ ಕಾಯ್ದು ಕುಳಿತಿರುವ ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ 8 ಗಂಟೆಯ ನಂತರ ಆಪ್ಷನ್​ ಎಂಟ್ರಿ ಮಾಡಲು ಅವಕಾಶ ಸಿಕ್ಕ ತಕ್ಷಣ ಎಂಟ್ರಿಗೆ ಮುಂದಾಗಿದ್ದು, ಆಪ್ಷನ್​ ತೆಗೆದುಕೊಳ್ಳುತ್ತಿರಲಿಲ್ಲ. ಅಲ್ಲದೆ, ತಾಂತ್ರಿಕ ಸಮಸ್ಯೆಯಿಂದ ಪೇಜ್ ಕೂಡ ಓಪನ್ ಆಗುತ್ತಿರಲಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಎಲ್ಲ ಸರಿ ಹೋಗಲಿದೆ: ಕೆಇಎ

    ವಿದ್ಯಾರ್ಥಿಗಳು ಒಮ್ಮೆಲೇ ಆಪ್ಷನ್​ ಎಂಟ್ರಿ ಮಾಡಲು ಮುಂದಾದ ಪರಿಣಾಮ ಸರ್ವರ್ ಡೌನ್‌ನಿಂದ ಈ ರೀತಿ ಸಮಸ್ಯೆ ಉಂಟಾಗಿದೆ. ಭಾನುವಾರದಿಂದ ಎಲ್ಲ ಸರಿ ಹೋಗಲಿದೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.

    ಆಪ್ಯನ್ ಎಂಟ್ರಿಗೆ ಅ.19ರವೆಗೆ ಅವಕಾಶ ಕಲ್ಪಿಸಿದೆ. ಅ.21ರಂದು ಅಣುಕು ಸೀಟು ಹಂಚಿಕೆಯ ಫಲಿತಾಂಶ ಬಿಡುಗಡೆ ಮಾಡಲಿದೆ. ಅ.21ರಿಂದ 26ರವರೆಗೆ ಆಯ್ಕೆಗಳನ್ನು ಬದಲಾಯಿಸಲು ಅವಕಾಶ ನೀಡಲಿದೆ. ಅ.28ರಂದು ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಿದೆ.

    ಅ.28ರಿಂದ 30ರವರೆಗೆ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ಆಯ್ಕೆ ದಾಖಲಿಸಲು ಅವಕಾಶ ನೀಡಿದೆ. ಸೀಟು ಆಯ್ಕೆಮಾಡಿಕೊಂಡ ವಿದ್ಯಾರ್ಥಿಗಳು ನ.3ರೊಳಗೆ ಕಾಲೇಜುಗಳಿಗೆ ಪ್ರವೇಶ ಪಡೆದುಕೊಳ್ಳಲು ತಿಳಿಸಿದೆ.

    20ರೊಳಗೆ ಪ್ರವೇಶ ಪಡೆದುಕೊಳ್ಳಿ: ಪಿಜಿಸಿಇಟಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ನ ಪ್ರವೇಶದ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆ ಪ್ರಕಾರ ಶುಕ್ರವಾರ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಕಾಲೇಜುಗಳಿಗೆ ಅ.20ರೊಳಗೆ ಪ್ರವೇಶ ಪಡೆದುಕೊಳ್ಳುವಂತೆ ಸೂಚಿಸಿದೆ.

    ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!

    ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸು: ನಾಳೆ ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

    Photos | ಹರ್ಷಿಕಾ ಹೆರಳಲ್ಲಿ ಹರಳು, ಕೊರಳಲ್ಲೂ ಹರಳು?: ವಿಭಿನ್ನ ದಿರಿಸಲ್ಲಿ ನಟಿ ಪೂಣಚ್ಚ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts