More

    ಈರುಳ್ಳಿ ಬೆಳೆಗಾರರಿಗೆ ಕಣ್ಣೀರು ತರಿಸಿದ ಕೊಳೆ ರೋಗ

    ಪಟ್ಟನಾಯಕನಹಳ್ಳಿ: ಜಡಿಮಳೆ ಹಾಗೂ ಕೊಳೆ ರೋಗದಿಂದ ಈರುಳ್ಳಿ ಕೊಳೆಯುತ್ತಿರುವುದು ಬೆಳೆಗಾರರಿಗೆ ಕಣ್ಣೀರು ತರಿಸಿದೆ.
    ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿ ಕರೇಕಲ್ಲಹಟ್ಟಿಯ 33 ರೈತರು 80 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಬೆಳೆ ಉತ್ತಮವಾಗಿದ್ದರಿಂದ ಇಳುವರಿ ಚೆನ್ನಾಗಿಯೇ ಇರಬಹುದೆಂಬ ನಿರೀಕ್ಷೆ ಈಗ ಹುಸಿಯಾಗಿದೆ.

    ಈರುಳ್ಳಿ ಕಿತ್ತ ಮೇಲೆ ಜಡಿಮಳೆ ಹಿಡಿದಿರುವುದು ಹಾಗೂ ಕೊಳೆರೋಗದಿಂದ ಕೊಳೆಯುತ್ತಿದ್ದು ಮಾರಾಟ ಮಾಡಲು ಸಾಧ್ಯವಾಗದಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜಮೀನಿನಲ್ಲಿಯೇ ಕುರಿಗಳಿಗೆ ಆಹಾರವಾಗುತ್ತಿದೆ ಎನ್ನುತ್ತಾರೆ ಬೆಳೆಗಾರರಾದ ನರಸಿಂಹಮೂರ್ತಿ, ಮಂಜುನಾಥ್, ಜಯರಾಮ್.

    80 ಎಕರೆಯಲ್ಲಿ ಬೆಳೆದ ಈರುಳ್ಳಿಗೆ ಕನಿಷ್ಠ ಬೆಲೆ ಸಿಕ್ಕಿದ್ದರೂ 75 ಲಕ್ಷ ರೂ. ರೈತರ ಕೈಸೇರಬೇಕಿತ್ತು. ಈಗ ಎಲ್ಲವೂ ನಾಶವಾಗಿದೆ, ವರ್ಷದ ಕೂಳೇ ಮಣ್ಣಾಗಿದೆ ಎಂದು ಕಣ್ಣೀರಾಗುತ್ತಾರೆ ಕೃಷ್ಣಮೂರ್ತಿ, ಮೂಡಲಗಿರಿಯಪ್ಪ. ಬೆಳೆ ನಷ್ಟವಾಗಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಹುಲಿಕುಂಟೆ ಹೋಬಳಿಯ ಕರೇಕಲ್ಲಹಟ್ಟಿಯಲ್ಲಿ ಕೊಳೆರೋಗ ಬಂದ ಈರುಳ್ಳಿಯನ್ನು ಜಮೀನಿನಲ್ಲಿಯೇ ಬಿಟ್ಟಿದ್ದು ಕುರಿಗಳಿಗೆ ಆಹಾರವಾಗಿದೆ.

    ಜಡಿಮಳೆ ಹಾಗೂ ಕೊಳೆ ರೋಗದಿಂದ ಈರುಳ್ಳಿ ಬೆಳೆ ನೆಲ ಕಚ್ಚಿದೆ. ಸಾಲ ಮಾಡಿ ಕೃಷಿ ಮಾಡಿದ್ದು, ದಿಕ್ಕು ತೋಚದಂತಾಗಿದೆ. ಸರ್ಕಾರ ನೆರವಿಗೆ ಬರಬೇಕು.
    ಕಾಟಪ್ಪಈರುಳ್ಳಿ ಬೆಳೆಗಾರ

    ಈರುಳ್ಳಿ ಕಿತ್ತಾಗ ಚೆನ್ನಾಗಿದ್ದವು, 180 ಚೀಲವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋದೆ, ಅಲ್ಲಿ ಚೀಲ ಬಿಚ್ಚಿ ನೋಡಿದರೆ ಎಲ್ಲ ಈರುಳ್ಳಿ ಕೊಳೆತಿದ್ದವು, ಅಷ್ಟೂ ಈರುಳ್ಳಿಯನ್ನು ಅಲ್ಲಿಯೇ ಬಿಟ್ಟು ಬಸ್ಸಿಗೆ ಬರಲು ಹಣವಿಲ್ಲದೆ ಬೇರೆಯವರ ಹತ್ತಿರ ಸಹಾಯ ಪಡೆದು ಊರಿಗೆ ಬಂದೆ.
    ಕೃಷ್ಣಮೂರ್ತಿಈರುಳ್ಳಿ ಬೆಳೆಗಾರ, ಕರೇಕಲ್ಲಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts