More

    ಇಂದು ಐಪಿಎಲ್ ಆಟಗಾರರ ರಿಟೇನ್ ಪಟ್ಟಿ ಪ್ರಕಟ; ಯಾರು ರಿಟೇನ್, ಯಾರು ರಿಲೀಸ್?

    ನವದೆಹಲಿ: ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ ಮುನ್ನ ಯಾವ ಆಟಗಾರರು ತಮ್ಮ ತಂಡದಲ್ಲೇ ಉಳಿದುಕೊಳ್ಳಲಿದ್ದಾರೆ ಮತ್ತು ಯಾವ ಆಟಗಾರರು ಹರಾಜಿಗೆ ಒಳಪಡಲಿದ್ದಾರೆ ಎಂಬುದು ಮಂಗಳವಾರ ಸ್ಪಷ್ಟವಾಗಲಿದೆ. ಐಪಿಎಲ್‌ನ 8 ಹಳೆಯ ತಂಡಗಳು ಆಟಗಾರರ ರಿಟೇನ್ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ಮಂಗಳವಾರ ಕೊನೇ ದಿನವಾಗಿದೆ. ಪ್ರತಿ ತಂಡ ಗರಿಷ್ಠ ಇಬ್ಬರು ವಿದೇಶಿ ಮತ್ತು ಮೂವರು ಭಾರತೀಯರ ಸಹಿತ ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ.

    ಮುಂದಿನ ವರ್ಷದ ಜನವರಿಯಲ್ಲಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದಕ್ಕೆ ಮುನ್ನ 2 ಹೊಸ ತಂಡಗಳಾದ ಲಖನೌ ಮತ್ತು ಅಹಮದಾಬಾದ್‌ಗೆ ರಿಲೀಸ್ ಪಟ್ಟಿಯಿಂದ ಗರಿಷ್ಠ 3 ಆಟಗಾರರನ್ನು ಆಯ್ದುಕೊಳ್ಳಲು ಡಿಸೆಂಬರ್ 1ರಿಂದ 25ರವರೆಗೆ ಕಾಲಾವಕಾಶವಿದೆ. ಈ ಬಾರಿ ತಂಡಗಳು ಆಟಗಾರರ ಖರೀದಿಗೆ ಗರಿಷ್ಠ 90 ಕೋಟಿ ರೂ. ಬಜೆಟ್ ಹೊಂದಿದ್ದು, ಗರಿಷ್ಠ ನಾಲ್ವರನ್ನು ರಿಟೇನ್ ಮಾಡಿಕೊಂಡರೆ 42 ಕೋಟಿ ರೂ. (16, 12, 8, 6) ಕಡಿತವಾಗಲಿದೆ. ಮೂವರನ್ನು ರಿಟೇನ್ ಮಾಡಿದರೆ 33 ಕೋಟಿ ರೂ. (15, 11, 7) ಕಡಿತವಾಗಲಿದೆ. ಇಬ್ಬರನ್ನು ರಿಟೇನ್ ಮಾಡಿದರೆ 24 ಕೋಟಿ ರೂ. (14, 10) ಕಡಿತವಾಗಲಿದೆ. ಒಬ್ಬ ಆಟಗಾರನನ್ನು ರಿಟೇನ್ ಮಾಡಿದರೆ 14 ಕೋಟಿ ರೂ. ಕಡಿತವಾಗಲಿದೆ.

    ಕಳೆದ ಆವೃತ್ತಿಯಲ್ಲಿ ನಾಯಕರಾಗಿದ್ದ ಕನ್ನಡಿಗ ಕೆಎಲ್ ರಾಹುಲ್ (ಪಂಜಾಬ್ ಕಿಂಗ್ಸ್), ಸಂಜು ಸ್ಯಾಮ್ಸನ್ (ರಾಜಸ್ಥಾನ) ಮತ್ತು ಶ್ರೇಯಸ್ ಅಯ್ಯರ್ (ಡೆಲ್ಲಿ) ಈ ಬಾರಿ ಹೊಸ ತಂಡಗಳನ್ನು ಸೇರುವ ಹಂಬಲದಲ್ಲಿದ್ದಾರೆ. ಹೀಗಾಗಿ ರಿಟೇನ್ ನಿರೀಕ್ಷೆ ಇಲ್ಲ. ಮುಂಬೈ ತಂಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ರಿಲೀಸ್ ಮಾಡಿದರೂ, ಹರಾಜಿನಲ್ಲಿ ಮರಳಿ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಇದೇ ರೀತಿ ಇನ್ನೂ ಕೆಲ ತಂಡಗಳು ಪ್ರಮುಖ ಆಟಗಾರರನ್ನು ರಿಲೀಸ್ ಮಾಡಿದರೂ, ಹರಾಜಿನಲ್ಲಿ ಮರಳಿ ಸೇರಿಸಿಕೊಳ್ಳಲು ಪೈಪೋಟಿ ನಡೆಸುವ ಯೋಜನೆಯಲ್ಲಿವೆ.

    ಅಂತಿಮ ರಿಟೇನ್ ಪಟ್ಟಿ ಪ್ರಕಟ ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ಮಂಗಳವಾರ ಸಂಜೆ 5 ಗಂಟೆಯಿಂದ ನೇರಪ್ರಸಾರವಾಗಲಿದೆ.

    ತಂಡಗಳ ಸಂಭಾವ್ಯ ರಿಟೇನ್:
    ಆರ್‌ಸಿಬಿ: ವಿರಾಟ್ ಕೊಹ್ಲಿ, ಯಜುವೇಂದ್ರ ಚಾಹಲ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್/ಮೊಹಮದ್ ಸಿರಾಜ್/ದೇವದತ್ ಪಡಿಕಲ್.
    ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್, ಪೃಥ್ವಿ ಷಾ, ಅಕ್ಷರ್ ಪಟೇಲ್, ಅನ್ರಿಚ್ ನೋಕಿಯ.
    ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ, ಕೈರಾನ್ ಪೊಲ್ಲಾರ್ಡ್, ಸೂರ್ಯಕುಮಾರ್ ಯಾದವ್/ಇಶಾನ್ ಕಿಶನ್.
    ಚೆನ್ನೈ ಸೂಪರ್‌ಕಿಂಗ್ಸ್: ಎಂಎಸ್ ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ/್ಾ ಡು ಪ್ಲೆಸಿಸ್.
    ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್, ಮೊಹಮದ್ ಶಮಿ,ಅರ್ಷದೀಪ್ ಸಿಂಗ್, ರವಿ ಬಿಷ್ಣೋಯಿ.
    ಕೆಕೆಆರ್: ಸುನೀಲ್ ನಾರಾಯಣ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್.
    ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಯಶಸ್ವಿ ಜೈಸ್ವಾಲ್.
    ಸನ್‌ರೈಸರ್ಸ್‌: ಕೇನ್ ವಿಲಿಯಮ್ಸನ್, ರಶೀದ್ ಖಾನ್, ಭುವನೇಶ್ವರ್, ಟಿ. ನಟರಾಜನ್.

    ಅಹಮದಾಬಾದ್ ತಂಡದ ಬಗ್ಗೆ ಗೊಂದಲ
    ಕಳೆದ ತಿಂಗಳು ಅಹಮದಾಬಾದ್ ಫ್ರಾಂಚೈಸಿಯನ್ನು 5,625 ಕೋಟಿ ರೂ.ಗೆ ಖರೀದಿಸಿರುವ ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆಯು ಬೆಟ್ಟಿಂಗ್ ಕಂಪನಿಗಳ ಜತೆ ಲಿಂಕ್ ಹೊಂದಿರುವ ಬಗೆಗಿನ ಆರೋಪಗಳಿಂದ ಗೊಂದಲ ಮೂಡಿದೆ. ಅಹಮದಾಬಾದ್ ಭವಿಷ್ಯ ನಿರ್ಧಾರಕ್ಕಾಗಿ ಬಿಸಿಸಿಐ ಕಾನೂನು ಮೊರೆ ಹೋಗಿದೆ. ಜತೆಗೆ ಈ ಬಗ್ಗೆ ಸಮಗ್ರ ಪರಿಶೀಲನೆಗಾಗಿ ಸ್ವತಂತ್ರ ಸಮಿತಿಯೊಂದನ್ನೂ ನೇಮಿಸಿದೆ. ಅಹಮದಾಬಾದ್ ಮಾಲೀಕತ್ವ ರದ್ದುಗೊಂಡರೆ, 2022ರ ಐಪಿಎಲ್‌ನಲ್ಲಿ 9 ತಂಡಗಳಷ್ಟೇ ಆಡಬಹುದು ಎನ್ನಲಾಗಿದೆ. ಇನ್ನೊಂದು ವರದಿಯ ಪ್ರಕಾರ ತಂಡಕ್ಕೆ 2ನೇ ಗರಿಷ್ಠ ಬಿಡ್ ಸಲ್ಲಿಸಿದ್ದ ಅದಾನಿ ಗ್ರೂಪ್‌ಗೆ ಒಡೆತನ ಒಲಿಯಲಿದೆ.

    PHOTO: ಟೀಮ್ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts