More

    ಕರ್ನಾಟಕದ ಮನೀಷ್ ಪಾಂಡೆ ಲಂಕಾ ಪ್ರವಾಸಕ್ಕೆ ನಾಯಕನಾಗಬೇಕಿತ್ತು ಎಂದ ಭಾರತ ತಂಡದ ಮಾಜಿ ವೇಗಿ

    ಬೆಂಗಳೂರು: ಚೇತನ್​ ಶರ್ಮ ಸಾರಥ್ಯದ ಆಯ್ಕೆ ಸಮಿತಿ ಗುರುವಾರವಷ್ಟೇ (ಜೂನ್​ 10) ಶ್ರೀಲಂಕಾದ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಿದೆ. ಟೆಸ್ಟ್​ ಸರಣಿಯಲ್ಲಿ ಆಡಲು ವಿರಾಟ್​ ಕೊಹ್ಲಿ ಸಾರಥ್ಯದ ಭಾರತ ತಂಡ ಇಂಗ್ಲೆಂಡ್​ಗೆ ತೆರಳಿರುವ ಹಿನ್ನೆಲೆಯಲ್ಲಿ ಲಂಕಾ ಪ್ರವಾಸಕ್ಕೆ ಯುವ ಆಟಗಾರರಿಗೆ ಹೆಚ್ಚು ಮಣೆ ಹಾಕಲಾಗಿದೆ. ಅನುಭವಿ ಶಿಖರ್​ ಧವನ್​ ಸಾರಥ್ಯದ ಭಾರತ ತಂಡದಲ್ಲಿ ಕನ್ನಡಿಗರಾದ ಮನೀಷ್​ ಪಾಂಡೆ, ದೇವದತ್​ ಪಡಿಕಲ್​ ಹಾಗೂ ಕೆ.ಗೌತಮ್​ಗೆ ಅವಕಾಶ ನೀಡಲಾಗಿದೆ. ನೆಟ್​ ಬೌಲರ್​ಗಳು ಸೇರಿದಂತೆ 20 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆದರೆ, ತಂಡದ ನಾಯಕತ್ವದ ವಿರುದ್ಧ ಕನ್ನಡಿಗ, ಭಾರತ ತಂಡದ ಮಾಜಿ ವೇಗಿ ದೊಡ್ಡ ಗಣೇಶ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧವನ್​ ಬದಲಿಗೆ ಕರ್ನಾಟಕದ ಮನೀಪ್​ ಪಾಂಡೆಗೆ ನಾಯಕತ್ವ ನೀಡಬೇಕಿತ್ತು ಎಂದು ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಇದನ್ನೂ ಓದಿ: ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಶಿಖರ್​ ಧವನ್​ ಸಾರಥ್ಯದ ಭಾರತ ತಂಡ ಎದುರಿಸಲಿದೆ ಕಠಿಣ ಕ್ವಾರಂಟೈನ್

    ಶ್ರೀಲಂಕಾ ಪ್ರವಾಸಕ್ಕೆ ಮನೀಷ್​ ಪಾಂಡೆ ಅವರನ್ನು ನಾಯಕನಾಗಿ ಮಾಡಬೇಕಿತ್ತು. ವೇಗಿ ಭುವನೇಶ್ವರ್​ ಕುಮಾರ್​ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ಅಶ್ಚರ್ಯ ತರಿಸಿದೆ ಎಂದು ಬೆಂಗಳೂರಿನ ದೊಡ್ಡ ಗಣೇಶ್​ ತಿಳಿಸಿದ್ದಾರೆ. ಮನೀಷ್​ ಪಾಂಡೆ ಆಟಗಾರ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ಆಟಗಾರ. ಒಂದು ವೇಳೆ ಧವನ್​ ಅವರನ್ನು ಇಂಗ್ಲೆಂಡ್​ ಪ್ರವಾಸಕ್ಕೆ ಮಧ್ಯದಲ್ಲಿಯೇ ಕರೆದರೆ ತಂಡವನ್ನು ಮುನ್ನಡೆಸುವವರು ಯಾರು ಎಂದು ಆಯ್ಕೆ ಸಮಿತಿ ನಿರ್ಧಾರವನ್ನು 47 ವರ್ಷದ ಗಣೇಶ್​ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ನಡಾಲ್​-ಜೋಕೋ ನಡುವಿನ ಕಾದಾಟದ ವೇಳೆ ಫ್ರೆಂಚ್​ ಅಧ್ಯಕ್ಷರು ಹೊರಡಿಸಿದ ಆದೇಶ ಏನು ಗೊತ್ತೆ?

    ಭಾರತ ಹಾಗೂ ಶ್ರೀಲಂಕಾ ನಡುವೆ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಜುಲೈ 13, 16 ಹಾಗೂ 18 ರಂದು ಏಕದಿನ, ಜುಲೈ 21, 23 ಹಾಗೂ 25 ರಂದು ಟಿ20 ಪಂದ್ಯಗಳು ನಡೆಯಲಿವೆ. ಭಾರತ ತಂಡದ ಆಟಗಾರರ ಲಂಕಾ ಪ್ರವಾಸಕ್ಕೂ ಮುನ್ನ ಜೂನ್​ 14 ರಿಂದ 28 ರವರೆಗೆ ಮುಂಬೈನಲ್ಲಿ ಕ್ವಾರಂಟೈನ್​ಗೆ ಒಳಗಾಗಲಿದ್ದಾರೆ.

     

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts