More

    ಶಿಕ್ಷಕರ ಸಂಘದ ಪಾತ್ರ ಪ್ರಮುಖವಾದದ್ದು

    ಗೋಕಾಕ: ಶಿಕ್ಷಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಡುವಿನ ಸಂಪರ್ಕ ಸಾಧಿಸುವಲ್ಲಿ ಶಿಕ್ಷಕರ ಸಂಘ ಮಹತ್ವದ್ದಾಗಿದೆ ಎಂದು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿಮತ ವ್ಯಕ್ತಪಡಿಸಿದ್ದಾರೆ.

    ನಗರದ ಎನ್‌ಎಸ್‌ಎಫ್ ಅತಿಥಿ ಗೃಹದ ಆವರಣದಲ್ಲಿ ಭಾನುವಾರ ಮೂಡಲಗಿ ತಾಲೂಕು ಶಿಕ್ಷಕರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಸಮನ್ವಯತೆಯ ಆಧಾರದಲ್ಲಿ ಕರ್ತವ್ಯ ನಿರ್ವಹಿಸಿ ಯಶಸ್ವಿಯಾಗುವಂತೆ ಶುಭ ಕೋರಿದರು.

    ಮೂಡಲಗಿ ತಾಲೂಕು ಘಟಕಕ್ಕೆ ಶಿಕ್ಷಕರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವುದು ಶಿಕ್ಷಕರಲ್ಲಿರುವ ಒಗ್ಗಟ್ಟನ್ನು ಪ್ರದರ್ಶಿಸಿದೆ. ಇದಕ್ಕಾಗಿ ವಲಯದ ಎಲ್ಲ ಶಿಕ್ಷಕರನ್ನು ಅಭಿನಂದಿಸುತ್ತೇನೆ. ಎಲ್ಲ ಸಮುದಾಯದಿಂದ ಶಿಕ್ಷಕರು ಪ್ರತಿನಿಧಿಸಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಸಾಮಾಜಿಕ ನ್ಯಾಯ ತತ್ವವನ್ನು ಜಾರಿಗೊಳಿಸಿದ್ದರು. ಅದರ ಮಾದರಿಯಲ್ಲಿಯೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದಿನ ಮಹಾನ್ ಪುರುಷರ ತತ್ತ್ವಾದರ್ಶದಲ್ಲಿ ಕೆಲಸ ನಿರ್ವಹಿಸುವಂತೆ ಶಾಸಕರು ಸಲಹೆ ನೀಡಿದರು.

    ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ಹೊಂದಲು ಸಾಧ್ಯ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

    ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 2020-2025ನೇ ಸಾಲಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಡಲಗಿ ತಾಲೂಕಾ ಘಟಕದ ನೂತನ ದಿಗ್ಧರ್ಶಕ ಮಂಡಳಿಯವರನ್ನು ಹೂ-ಮಾಲೆ ಹಾಕಿ ಅಭಿನಂದಿಸಿದರು. ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರ ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಹೊಸ ಮಂಡಳಿಯವರನ್ನು ಅಭಿನಂದಿಸಿದರು.

    ಹೊಸ ನಿರ್ದೇಶಕ ಮಂಡಳಿಯ ಸದಸ್ಯರು: ಎಸ್.ಎಂ. ಲೋಕಣ್ಣವರ, ಎಂ.ವೈ.ಸಣ್ಣಕ್ಕಿ, ಬಿ.ಬಿ. ಕೇವಟಿ, ಆರ್.ಎಂ. ಮಹಾಲಿಂಗಪುರ, ಎ.ಪಿ.ಪರಸಣ್ಣವರ, ಎಂ.ಜಿ.ಮಾವಿನಗಿಡದ, ಎಲ್.ಎಂ. ಬಡಕಲ್, ಕೆ.ಎಲ್. ಮೀಸಿ, ಎಲ್.ಎಂ. ಭೂಮಣ್ಣವರ, ವೈ.ಡಿ.ಝಲ್ಲಿ, ಬಿ.ಎಲ್. ನಾಯಿಕ, ಬಿ.ಎ. ಡಾಂಗೆ, ಎಸ್.ಎಂ. ಕುರಣಗಿ, ಎಂ.ಎಂ. ಕಳಸಣ್ಣವರ, ಸುನೀತಾ, ಲಕ್ಷ್ಮೀ ಹೆಬ್ಬಾಳ, ಎಲ್.ಎಸ್. ಯಲಿಗಾರ, ವಿ.ಎಂ. ಪೂಜೇರಿ, ಆರ್.ಎಂ.ಹುಣಶ್ಯಾಳಕರ, ಎಸ್.ಜಿ. ರಾಮದುರ್ಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts