More

    ಶಿಕ್ಷಕರು ಅಧ್ಯಯನಶೀಲರಾದರೆ ಜ್ಞಾನದ ಕಣಜ

    ನಾಯಕನಹಟ್ಟಿ: ಶಿಕ್ಷಕರು ನಿರಂತರವಾಗಿ ಅಧ್ಯಯನಶೀಲರಾದರೆ ಜ್ಞಾನದ ಕಣಜವಾಗಲಿದ್ದಾರೆ ಎಂದು ಡಿಡಿಪಿಐ ಕೆ.ರವಿಶಂಕರರೆಡ್ಡಿ ಅಭಿಪ್ರಾಯಪಟ್ಟರು.

    ಪಟ್ಟಣದ ಜೆಜೆಆರ್ ಶಾಲೆ ಪರಿಶೀಲನೆಗಾಗಿ ಮಂಗಳವಾರ ದಿಢೀರ್ ಭೇಟಿ ನೀಡಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಹನಶೀಲತೆಯಿಂದ ವರ್ತಿಸಬೇಕು. ನಕ್ಕುನಲಿಸುವ ಶಿಕ್ಷಕರನ್ನು ವಿದ್ಯಾರ್ಥಿಗಳು ಇಷ್ಟಪಡುತ್ತಾರೆ. ಸಿಟ್ಟು, ಕೋಪಗಳಿಂದ ಹೊರಬಂದು ಸಮಾಧಾನದಿಂದ ವೃತ್ತಿಯಲ್ಲಿ ತೊಡಗಬೇಕು ಎಂದರು.

    ಇತ್ತೀಚಿನ ದಿನಗಳಲ್ಲಿ ಪಾಲಕರು ಅತಿಯಾದ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಅದಕ್ಕೆ ತಕ್ಕಂತೆ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಕಲಿಕೆಯ ಜತೆಗೆ ಶಿಕ್ಷಕರು ತಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳುವುದು ಅಗತ್ಯ.

    ಪಠ್ಯಕ್ಕೆ ಸೀಮಿತವಾಗದೆ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ ಎಂದು ತಿಳಿಸಿದರು.

    ತಾಳ್ಮೆ ಮತ್ತು ಸಮಾಧಾನದ ಗುಣಗಳನ್ನು ಹೊಂದಿರಬೇಕು. ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳವುದು ಅಗತ್ಯ. ಹುಮ್ಮಸ್ಸಿನಿಂದ ಕಲಿಕೆಯಲ್ಲಿ ಪಾಲ್ಗೊಳ್ಳುವ ಕಾರ್ಯವನ್ನು ಶಿಕ್ಷಕರು ಮನಗಾಣಬೇಕು.

    ಶಿಕ್ಷಕರು ಪ್ರತಿದಿನ ಮತ್ತು ಪ್ರತಿ ತರಗತಿಗೆ ಹೋಗುವಾಗ ಉತ್ಸಾಹದಿಂದ ಇರಬೇಕು. ಮಕ್ಕಳು ಸ್ವಾಭಾವಿಕ ಗುಣವನ್ನು ಹೊಂದಿರುತ್ತಾರೆ ಎಂದರು.

    ಸಂವಿಧಾನ ಎಲ್ಲ ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ನೀಡಿದೆ. ಡಾ. ಅಂಬೇಡ್ಕರ್ ಶಿಕ್ಷಣದ ಅವಶ್ಯಕತೆಯನ್ನು ಮನಗಂಡಿದ್ದರು. ಹೀಗಾಗಿ ಸಂವಿಧಾನದಲ್ಲಿ ಕಲಿಕೆ ಮತ್ತು ಶಿಕ್ಷಣಕ್ಕೆ ವಿಶೇಷ ಗಮನ ನೀಡಲಾಗಿದೆ.

    ಶಿಕ್ಷಣವನ್ನು ಮೂಲ ಹಕ್ಕು ಎಂದು ಪರಿಗಣಿಸಲಾಗಿದೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಇದೇ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದರು.

    ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್.ಸುರೇಶ್, ನಾಗಭೂಷಣ್, ಜೆಜೆಆರ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಚ್.ಟಿ. ಮೈಲಾರ ಸ್ವಾಮಿ, ತಿಪ್ಪೇರುದ್ರಸ್ವಾಮಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಪಿ.ಒ.ತಿಪ್ಪೇಸ್ವಾಮಿ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts