More

    ಶಿಕ್ಷಕ, ಶಿಕ್ಷಕಿಯರ ಸಹಕಾರ ಸಂಘದ ಚುನಾವಣೆಗೆ ಶಾಂತಿಯುತ ಮತದಾನ

    ರಾಣೆಬೆನ್ನೂರ: ಇಲ್ಲಿನ ತಾಲೂಕು ಶಿಕ್ಷಕ, ಶಿಕ್ಷಕಿಯರ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ನಗರದ ಚರ್ಚ್ ರಸ್ತೆಯ ಸಂಘದ ಕಚೇರಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.
    ಸಂಘದ ಆಡಳಿತ ಮಂಡಳಿಯಲ್ಲಿ 1 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡ, 1 ಹಿಂದುಳಿದ ಅ ವರ್ಗ, 1 ಹಿಂದುಳಿದ ಬ ವರ್ಗ, 2 ಮಹಿಳಾ ಮೀಸಲು ಹಾಗೂ 7 ಸಾಮಾನ್ಯ ಸೇರಿ ಒಟ್ಟು 13 ಸ್ಥಾನಗಳಿವೆ. ಪುರುಷರು, ಮಹಿಳೆಯರು ಸೇರಿ 685 ಮತದಾರರರಿದ್ದು ಆ ಪೈಕಿ ಪೈಕಿ 676 ಜನರು ತಮ್ಮ ಹಕ್ಕು ಚಲಾಯಿಸಿದ್ದು ಶೇ. 98.6 ಮತದಾನವಾಗಿದೆ.
    ಕೊನೆ ಕ್ಷಣದ ಓಲೈಕೆ…
    ಬೆಳಗ್ಗೆ 9ರಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು ಶಿಕ್ಷಕ ಮತದಾರರು ಹೆಚ್ಚಿನ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಆಗಮಿಸುತ್ತಿದ್ದರು. ಚುನಾವಣೆಯಲ್ಲಿ ಹೋರಾಟ ಸಮಿತಿ ಹಾಗೂ ಕ್ರಿಯಾ ಸಮಿತಿ ಸಂಘಟನೆಗಳ ಅಭ್ಯರ್ಥಿಗಳು ಕಣದಲ್ಲಿದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಉಭಯ ಸಂಘಟನೆಗಳ ಅಭ್ಯರ್ಥಿಗಳು ತೀವ್ರ ಪೈಪೋಟಿ ನಡೆಸಿದ್ದು ಕೊನೆ ಕ್ಷಣದಲ್ಲಿ ಮತದಾರರ ಓಲೈಕೆಯಲ್ಲಿ ತೊಡಗಿರುವುದು ಕಂಡುಬಂದಿತು.
    ಮತದಾನ ಮಾಡಲು ಬಂದ ಶಿಕ್ಷಕರಿಗೆ ಹೋರಾಟ ಸಮಿತಿ ಹಾಗೂ ಕ್ರಿಯಾಸಮಿತಿ ಪರವಾಗಿ ಚಹಾ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts