ಚಹಾ ಅಂಗಡಿಯವನಿಗೆ ಖುಲಾಯಿಸಿದ ಅದೃಷ್ಟ! ಇದಕ್ಕೆ ಕಾರಣ ಸಚಿನ್ ತೆಂಡೂಲ್ಕರ್!

Sachin Visit Tea New
Published on

ಬೆಳಗಾವಿ: ಇಲ್ಲೊಬ್ಬ ಚಹಾ ಅಂಗಡಿ ಮಾಲೀಕನಿಗೆ ಅದೃಷ್ಟ ಖುಲಾಯಿಸಿದೆ! ಹೇಗೆ ಅಂತೀರಾ? ಚಹಾ ಅಂಗಡಿಯವನಿಗೆ 'ಸ್ಟಾರ್​​' ಕುದುರಿದ್ದು ಸಚಿನ್​​​ ತೆಂಡೂಲ್ಕರ್​​​​​ನಿಂದ..!

ಆಗಿದ್ದು ಇಷ್ಟು... ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿರುವ ಪೌಜಿ ಚಹಾ ಅಂಗಡಿಗೆ ಬಂದು, ಜಸ್ಟ್​​​ ಒಂದು ಟೀ ಕುಡಿದು ಹೋದರು. ಅದಾಗಿದ್ದೇ ತಡ... ಪೌಜಿ ಚಾಯ್​​​​ ಅಂಗಡಿಯ ವ್ಯಾಪಾರ ದುಪ್ಪಟ್ಟಾಗಿದೆ.

ಚಾಯ್​​​ ಅಂಗಡಿಯವನಿಗೆ ಡಬಲ್​​ ಧಮಾಕಾ ಆಗಿದ್ದು ಅಕ್ಟೋಬರ್ 31ರಂದು. ಆ ದಿನ ಸಚಿನ್ ತೆಂಡೂಲ್ಕರ್ ಮಹಾರಾಷ್ಟ್ರದಿಂದ ಕುಟುಂಬ ಸಮೇತ ಗೋವಾಗೆ ತೆರಳುತ್ತಿದ್ದರು. ಈ ವೇಳೆ ಮಹಾರಾಷ್ಟ್ರ-ಗೋವಾ ರಸ್ತೆ ಮಾರ್ಗದಲ್ಲಿರುವ ಪೌಜಿ ಚಹಾ ಅಂಗಡಿಗೆ ಭೇಟಿ ನೀಡಿದ್ದರು. ಬಿಸ್ಕತ್ ಜತೆ ಚಹಾ ರುಚಿ ಸವಿದು ನಗು ಬೀರಿದ್ದರು. ಈ ದೃಶ್ಯಗಳು ಸೋಷಿಯಲ್​ ಮೀಡಿಯಾ ತುಂಬ ಹರಿದಾಡಿದವು.

ಆ ನಂತರವೇ ಪೌಜಿ ಚಹಾ ಅಂಗಡಿಗೆ ಲಕ್​​​ ಖುಲಾಯಿಸಿದ್ದು. ಸಚಿನ್​​ ಭೇಟಿಯ ನಂತರ ಅದೇ ಅಂಗಡಿಗೆ ಬರುವ ಜನ ಹೆಚ್ಚಾಗತೊಡಗಿದ್ದಾರೆ. ಬಂದ ಜನರು, ಚಹಾ ಕುಡಿದು ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಚಹಾ ಅಂಗಡಿಯವನ ವ್ಯಾಪಾರ ಡಬಲ್​​​ ಧಮಾಕಾದಂತೆ ದುಪ್ಪಟ್ಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net