More

    ತೆರಿಗೆ ವಸೂಲಿ ಮಾಡಿ ರಸೀದಿ ನೀಡಲ್ಲ: ಯಲಬುರ್ಗಾ ಪಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

    ಯಲಬುರ್ಗಾ: ಸಾರ್ವಜನಿಕರಿಂದ ಎಲ್ಲ ಮಾದರಿ ತೆರಿಗೆ ವಸೂಲಿ ಮಾಡಿ ರಸೀದಿ ನೀಡದಿದ್ದರೆ ಪಟ್ಟಣ ಪಂಚಾಯಿತಿ ಯಾಕೆ ಬೇಕು ಎಂದು ರಿಯಾಜ್ ಖಾಜಿ, ಹನುಮಂತಪ್ಪ ಭಜಂತ್ರಿ ಪ್ರಶ್ನಿಸಿದರು.

    ಪಪಂ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಮತ್ತು ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಕುರಿತು ಮಾತನಾಡಿದ ಅವರು, ಪಪಂ ಸಿಬ್ಬಂದಿಯು ನಾಗರಿಕರಿಂದ ಮನೆ, ನೀರು ಇತರ ತೆರಿಗೆ ಪಡೆದು ಬೇಬ್ಯಾಕ್ ಪತ್ರ, ಉತಾರ ನೀಡದೆ ಸತಾಯಿಸುತ್ತಿದ್ದಾರೆ. 2016-17ನೇ ಸಾಲಿನಲ್ಲಿ ನಮ್ಮ ಮನೆ ಯೋಜನೆಯಡಿ ಮಂಜೂರಾಗಿದ್ದ ಕೆಲ ಮನೆಗಳ ಫಲಾನುಭವಿಗಳಿಗೆ ಅನುದಾನ ಬಂದಿಲ್ಲ. ಇದಕ್ಕೆ ಕಾರಣವೇನು ಎಂದು ರಿಯಾಜ್ , ಹನುಮಂತಪ್ಪ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

    ಹಣ ಹಿಂದಿರುಗಿಸಿದ್ದೇಕೆ?: ಪಟ್ಟಣದಲ್ಲಿ 280 ಶೌಚಗೃಹಗಳಿಗೆ ಹಣ ಮಂಜೂರಾಗಿಲ್ಲ. ಸರ್ಕಾರದಿಂದ ಬಿಡುಗಡೆಯಾದ ಅನುದಾನ ವಾಪಸ್ ಕಳಿಸಿದ್ದೇಕೆ ಎಂದು ಅಶೋಕ ಅರಕೇರಿ ಪ್ರಶ್ನಿಸಿದರು. ಅಧ್ಯಕ್ಷ ಅಮರೇಶ ಪ್ರತಿಕ್ರಿಯಿಸಿ, ನನ್ನ ಮತ್ತು ಸದಸ್ಯರ ಗಮನಕ್ಕೆ ತರದೆ ಸರ್ಕಾರಕ್ಕೆ ಅನುದಾನ ಹೇಗೆ ವಾಪಸ್ ಕಳಿಸಿದ್ದೀರಿ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಜಿಲ್ಲಾಧಿಕಾರಿಗೆ ಪತ್ರ ಬರೆದು ಅನುದಾನ ವಾಪಸ್ ತರಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ಬಳಿಕ ಲೆಕ್ಕಾಧಿಕಾರಿ ಚನ್ನಯ್ಯ, ಎಸ್‌ಡಿಸಿ ಸೋಮಪ್ಪ ವಿರುದ್ಧ ಸೂಕ್ತ ಕ್ರಮಕ್ಕಾಗಿ ನೋಟಿಸ್ ಜಾರಿಗೆ ಸೂಚಿಸಿದರು. ಪಪಂ ಉಪಾಧ್ಯಕ್ಷೆ ಶಾಂತಾ ಮಾಟೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ ಬಾವಿಮನಿ, ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಹಾಗೂ ಸರ್ವ ಸದಸ್ಯರು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts