More

    ತೆರಿಗೆ ಬಾಕಿದಾರರ ಸ್ಥಿರ ಆಸ್ತಿ ಜಪ್ತಿಗೆ ಪ್ರಸ್ತಾವನೆ : ಪಾಲಿಕೆ ಆಯುಕ್ತರಿಂದ ಆಡಳಿತಾಧಿಕಾರಿಗೆ ಪತ್ರ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಚರ ಆಸ್ತಿ ಮುಟ್ಟುಗೋಲು ಹಾಕಿಕೊಂಡರೂ ಬಾಕಿ ತೀರುವುದಿಲ್ಲ. ಹೀಗಾಗಿ ಸುಸ್ತಿದಾರರ ಸ್ಥಿರ ಆಸ್ತಿಯನ್ನು ಕೂಡ ಜಪ್ತಿ ಮಾಡಲು ಕರ್ನಾಟಕ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಪ್ರಸ್ತಾವನೆ ಸಲ್ಲಿಸಿದ್ದಾರೆ.

    ಪಾಲಿಕೆಯಲ್ಲಿ 2008ರಿಂದ ಸ್ವಯಂಘೊಷಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕೆಲವರು ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ತಪ್ಪು ಮಾಹಿತಿ ನೀಡಿದ್ದರೆ ಆಸ್ತಿ ಮಾಲೀಕರಿಗೆ ದುಪ್ಪಟ್ಟು ತೆರಿಗೆ ಮತ್ತು ದಂಡ ವಿಧಿಸಲಾಗುತ್ತದೆ. ಇದನ್ನು ನಿಗದಿತ ಅವಧಿಯೊಳಗೆ ಪಾವತಿ ಮಾಡದಿದ್ದಲ್ಲಿ ನೋಟಿಸ್ ಜಾರಿಗೊಳಿಸಿ ಚರ ಆಸ್ತಿಗಳನ್ನು ಜಪ್ತಿ ಮಾಡಿಕೊಂಡು ಹರಾಜು ಹಾಕಲಾಗುತ್ತದೆ.

    ಇದನ್ನೂ ಓದಿ: ಜನಪ್ರತಿನಿಧಿಗಳನ್ನು ಅಣಕಿಸಿ ರಸ್ತೆ ಹಳ್ಳದಲ್ಲಿ ಬಾಗಿನ ಸಲ್ಲಿಸಿದ ರೈತ ಸಂಘ

    ಈ ಕ್ರಮದಿಂದಲೂ ಪೂರ್ಣ ಪ್ರಮಾಣದಲ್ಲಿ ಆಸ್ತಿ ತೆರಿಗೆ ಬಾಕಿ ಪಾವತಿಯಾಗುವುದಿಲ್ಲ. ಹೀಗಾಗಿ, ಸುಸ್ತಿದಾರರ ಬಾಕಿ ಹಣ ವಸೂಲಿಗೆ ಚರ ಆಸ್ತಿ ಜತೆಗೆ, ಸ್ಥಿರ ಆಸ್ತಿ ಜಪ್ತಿ ವಶಕ್ಕೆ ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ನಿಯಮ 164ರಿಂದ 170 ಅಡಿ ಬಾಕಿದಾರರ ಚರ ಆಸ್ತಿಯ ಜತೆಗೆ ಸ್ಥಿರ ಆಸ್ತಿಯನ್ನು ಜಪ್ತಿ, ಹರಾಜು ಮತ್ತು ಮಾರಾಟಕ್ಕೆ ಅವಕಾಶವಿದೆ. ಆ ನಿಯಮವನ್ನು ಕೆಎಂಸಿ ಕಾಯ್ದೆಗೆ ಅಳವಡಿಸುವಂತೆ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತ ಅವರಿಗೆ ಪ್ರಸ್ತಾವನೆ ನೀಡಿದ್ದಾರೆ.

    ಹೊಸ ಹಳ್ಳಿ ಸೇರ್ಪಡೆ ಹೆಸರಲ್ಲಿ ರಿಯಲ್ಟಿ ಉದ್ಯಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts