More

    ಮಧ್ಯಮ ವರ್ಗಕ್ಕೆ ತೆರಿಗೆ ಬಂಪರ್!?

    ನವದೆಹಲಿ: ಆರ್ಥಿಕ ಹಿಂಜರಿತದ ಕಾರಣದಿಂದಾಗಿ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಈ ಸಲದ ಕೇಂದ್ರ ಬಜೆಟ್​ನಲ್ಲಿ ಸಿಹಿ ಸಿಗಬಹುದಾಗಿದೆ. ಕೇಂದ್ರ ಬಜೆಟ್​ನಲ್ಲಿ (ಫೆ.1) ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆಯಾಗಬಹುದೆಂಬ ಮಧ್ಯಮ ವರ್ಗದವರ ನಿರೀಕ್ಷೆ ಈಡೇರುವ ಲಕ್ಷಣ ಕಂಡುಬಂದಿದೆ. -ಠಿ; 5 ಲಕ್ಷವರೆಗಿನ ವಾರ್ಷಿಕ ಆದಾಯವನ್ನು ತೆರಿಗೆಮುಕ್ತಗೊಳಿಸಲು ಚಿಂತಿಸಿರುವ ಸರ್ಕಾರ -ಠಿ; 5ರಿಂದ 10 ಲಕ್ಷವರೆಗಿನ ಆದಾಯಕ್ಕೆ ಶೇ.10, -ಠಿ; 10ರಿಂದ 20 ಲಕ್ಷಕ್ಕೆ ಶೇ.20 ಹಾಗೂ -ಠಿ; 20 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ.30ರ ತೆರಿಗೆ ನಿಗದಿ ಮಾಡುವ ಸಾಧ್ಯತೆ ಇರುವುದಾಗಿ ತಿಳಿದು ಬಂದಿದೆ. ಇನ್ನೊಂದು ಮೂಲದ ಪ್ರಕಾರ, -ಠಿ; 7 ಲಕ್ಷವರೆಗಿನ ಆದಾಯಕ್ಕೆ ಶೇ.5, -ಠಿ; 7ರಿಂದ 10 ಲಕ್ಷ ಆದಾಯಕ್ಕೆ ಶೇ. 10 ತೆರಿಗೆ ವಿಧಿಸಬಹುದು ಎಂದು ಅಂದಾಜಿಸಲಾಗಿದೆ.

    ಈ ಪರಿಷ್ಕರಣೆ ಸಾಧ್ಯತೆ ಕಳೆದ ವರ್ಷದ ಕೊನೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ ಕಾಪೋರೆಟ್ ತೆರಿಗೆ ದರಗಳಿಗೆ ಹೋಲುತ್ತದೆ. ಎಲ್ಲ ವಿನಾಯಿತಿ ಮತ್ತು ಪೋ›ತ್ಸಾಹಕಗಳನ್ನು ತ್ಯಜಿಸಲು ಒಪ್ಪಿದ ಕಂಪನಿಗಳಿಗೆ ಮೂಲ ಕಾರ್ಪೆರೇಟ್ ತೆರಿಗೆ ದರವನ್ನು ಶೇ.30ರಿಂದ 22ಕ್ಕೆ ಇಳಿಸಲಾಗಿತ್ತು. ಜತೆಗೆ ಹೊಸ ಉತ್ಪಾದನಾ ಕಂಪನಿಗಳಿಗೆ ತೆರಿಗೆಯನ್ನು ಶೇ. 15 ಕಡಿಮೆ ಮಾಡಲಾಗಿತ್ತು.

    ಜಿಎಸ್​ಟಿ ಕಡಿತ

    ಶಿಕ್ಷಣಕ್ಕೆ ಸಂಬಂಧಿತ ಸೇವೆಗಳ ಮೇಲಿನ ಜಿಎಸ್​ಟಿ ಶೇ. 18 ವ್ಯಾಪ್ತಿಯಲ್ಲಿವೆ. ಆನ್​ಲೈನ್ ಕೋರ್ಸ್​ಗಳು ಮತ್ತು ಜಾಬ್ ಕೌನ್ಸಲಿಂಗ್ ಕೂಡ ಈ ತೆರಿಗೆ ವ್ಯಾಪ್ತಿಯಲ್ಲಿರುವ ಪರಿಣಾಮ ಯುವಜನತೆಗೆ ಶುಲ್ಕದ ಹೊರೆಯಾಗುತ್ತಿದೆ. ವೃತ್ತಿಜೀವನದ ತಪು್ಪ ಆಯ್ಕೆಗಳು ಭವಿಷ್ಯದಲ್ಲಿ ದೇಶಕ್ಕೆ ದೊಡ್ಡ ಹೊರೆ ಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೋರ್ಸ್​ಗಳ ಮೇಲಿನ ತೆರಿಗೆ ಕಡಿಮೆ ಮಾಡು ವುದರ ಮೂಲಕ ಹೆಚ್ಚಿನ ಯುವಜನರನ್ನು ಪ್ರೋತ್ಸಾಹಿ ಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

    ಈಗ ತೆರಿಗೆ ಎಷ್ಟಿದೆ?

    ಪ್ರಸಕ್ತ ಆರ್ಥಿಕ ಸಾಲಿನಲ್ಲಿ -ಠಿ; 2.50 ಲಕ್ಷವರೆಗಿನ ವೈಯಕ್ತಿಕ ಆದಾಯವನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. -ಠಿ; 2.50 ಲಕ್ಷದಿಂದ 5 ಲಕ್ಷವರೆಗಿನ ಆದಾಯಕ್ಕೆ ಶೇ. 5, -ಠಿ; 5 ಲಕ್ಷದಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ 20, -ಠಿ; 10 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ. 30 ತೆರಿಗೆ ದರ ಅನ್ವಯಿಸುತ್ತದೆ. -ಠಿ; 50 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಶ್ರೀಮಂತರಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts