More

  ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಪಾಕ್ ಧ್ವಜ

  ತಾವರಗೇರಾ: ಪಟ್ಟಣದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಪಾಕಿಸ್ತಾನ ಧ್ವಜದ ಫೋಟೊ ಹಾಕಿ ಸಲ್ಲದ ಹೇಳಿಕೆ ನೀಡಿರುವ ಕಾರಣ ಆತನನ್ನು ಪಟ್ಟಣದ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ಶುಕ್ರವಾರ ನಡೆದಿದೆ.

  ಬಂಧಿತ ರಾಜಾಸಾಬ್ ಮಹಮ್ಮದ್ ಸಾಬ್ ನಾಯ್ಕ, ಪಟ್ಟಣದಲ್ಲಿ ಸೈಕಲ್ ಶಾಪ್ ಇಟ್ಟುಕೊಂಡಿದ್ದು, ಸ್ಥಳೀಯ ಮಸೀದಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಮುಸ್ಲಿಮರನ್ನು ಆಹ್ವಾನಿಸಲು ಪಾಕಿಸ್ತಾನದ ಧ್ವಜ ಹಾಕಿ ಅದರ ಕೆಳಗಡೆ ಪಾಕಿಸ್ತಾನದ ಪರವಾಗಿ ಸ್ವಾಗತಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.

  ಇದನ್ನು ನೋಡಿದ ಬಜರಂಗದಳ ಇತರ ಹಿಂದುಪರ ಸಂಘಟನೆಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ರಾಜಾಸಾಬ್‌ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವುದಾಗಿ ಸ್ಥಳೀಯ ಠಾಣಾಧಿಕಾರಿ ನಾಗರಾಜ್ ಕೊಟಗಿ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts