More

    ಜನಾಕರ್ಷಿಸಿದ 200 ಮೀಟರ್ ಉದ್ದದ ಕನ್ನಡ ಧ್ವಜ

    ತಾವರಗೇರಾ: ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ ಸಂಭ್ರಮ 50ರ ಕನ್ನಡ ಜ್ಯೋತಿ ರಥಯಾತ್ರೆಯನ್ನು ಸೋಮವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.

    ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಹಾಗೂ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜ್ಯೋತಿ ರಥಯಾತ್ರೆ ಮೆರವಣಿಗೆಗೆ ಪಪಂ ಮುಖ್ಯಾಧಿಕಾರಿ ನಬಿಸಾಬ್ ಖುದನವರ್ ಹಾಗೂ ನಾಡ ತಹಸೀಲ್ದಾರ್ ಶರಣಬಸವೇಶ್ವರ ಕಳ್ಳಿಮಠ ಚಾಲನೆ ನೀಡಿದರು.

    ಮುಖ್ಯ ವೃತ್ತಗಳನ್ನು ಸುತ್ತಿದ ಮೆರವಣಿಗೆಯಲ್ಲಿ ಕುಂಭ, ಕಳಶ ಹೊತ್ತ ಮಹಿಳೆಯರು, ಕುರುಹಿನ ಶೆಟ್ಟಿ ಸಮುದಾಯದ ಮಹಿಳೆಯರಿಂದ ಕೋಲಾಟ, ಭಜನೆ, ಬುಡ್ಗ ಜಂಗಮ ಕಲಾವಿದರಿಂದ ವಿವಿಧ ವೇಷಭೂಷಣ ಪ್ರದರ್ಶನ, ಡೊಳ್ಳುಕುಣಿತ, ಹಲಗೆ ವಾದನ, ನೃತ್ಯ ಪ್ರದರ್ಶನ, ಶಾಲಾ ಮಕ್ಕಳಿಂದ ರಾಷ್ಟ್ರೀಯ ನಾಯಕರ ವೇಷಭೂಷಣ, 200 ಮೀಟರ್ ಉದ್ದದ ಕನ್ನಡ ಧ್ವಜ ಪ್ರದರ್ಶನ ಗಮನಸೆಳೆದವು.

    ಪಿಎಸ್‌ಐ ನಾಗರಾಜ್ ಕೋಟಗಿ, ಕನ್ನಡ ಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಸಾಗರ ಭೇರಿ, ಕರವೇ ಪದಾಧಿಕಾರಿಗಳಾದ ಸಂಜೀವ ಛಲವಾದಿ, ಅಮರೇಶ ಕುಂಬಾರ, ಶ್ಯಾಮೂರ್ತಿ ಅಂಚಿ, ಸಿದ್ದನಗೌಡ ಪುಂಡಗೌಡರ್, ಚನ್ನಪ್ಪ ನಾಲತವಾಡ, ವಕೀಲ ಕಳಕನಗೌಡ ಪಾಟೀಲ್, ಕಸಾಪ ಅಧ್ಯಕ್ಷ ರವಿಂದ್ರ ಬಳಿಗೇರ, ಶಸಾಪ ಅಧ್ಯಕ್ಷ ಬಸವರಾಜ ದೇವರಮನಿ, ಮಾಜಿ ಅಧ್ಯಕ್ಷ ಅಮರೇಶ ಗಲಗಲಿ, ಡಾ.ಸುಭಾಷ್ ಪೋರೆ , ಪ್ರಮುಖರಾದ ಲಕ್ಷ್ಮಣಸಿಂಗ್, ಆರ್.ಜಿ.ಅಂಬಿಗೇರ, ಮುಖ್ಯಗುರು ಪರಸಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts