More

    ಕೈಗೆಟುಕುವ ದರದಲ್ಲಿ ಸಿಗಲಿದೆ ರತನ್ ಟಾಟಾ ಅವರ ಕನಸಿನ ಕಾರು?

    ನವದೆಹಲಿ: ಮಧ್ಯಮ ವರ್ಗದ ಜನರಿಗೆಂದೇ ತಯಾರಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಟ್ಯಾಟೋ ನ್ಯಾನೋ ಒಂದು ಸಮಯದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

    ಇದನ್ನೂ ಓದಿ: ದತ್ತಗಿರಿ ಶಾಲೆ ವಿದ್ಯಾರ್ಥಿಗಳ ಸೃಜನಶೀಲತೆ ಅನಾವರಣ

    ಐಷಾರಾಮಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾದ ಟಾಟಾ ನ್ಯಾನೋ, ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರಾಗಿ ಮತ್ತೊಮ್ಮೆ ಮಾರುಕಟ್ಟೆಗೆ ವಿಶಿಷ್ಟ ಫೀಚರ್ಸ್​ಗಳೊಂದಿಗೆ ಬರಲು ಸಜ್ಜಾಗಿದೆ. ಆದ್ರೆ, ಈ ಬಾರಿ ಎಲೆಕ್ಟ್ರಿಕ್​ ಆಗಿ ಎಂಬುದು ಮತ್ತಷ್ಟು ವಿಶೇಷ.

    ಟಾಟಾ ನ್ಯಾನೊದ ಹೊಸ ಅವತಾರವು ಕಡಿಮೆ ಬೆಲೆಯಲ್ಲಿ ನಂಬಲಾಗದ ವೈಶಿಷ್ಟ್ಯಗಳೊಂದಿಗೆ ತಯಾರಾಗುತ್ತಿದೆ. ನ್ಯಾನೋದ ಎಲೆಕ್ಟ್ರಿಕ್ ಆವೃತ್ತಿಯು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಈಗಾಗಲೇ ನ್ಯಾನೋ ಇವಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಟಾಟಾದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರು ಎಂದು ಹೇಳಲಾಗಿದ್ದು, ಪೂರ್ಣ ಚಾರ್ಜ್‌ನಲ್ಲಿ ಸುಮಾರು 200 ಕಿ.ಮೀ ಮೈಲೇಜ್​ ಕೊಡಲಿದೆ ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ:  VIDEO | ಬೆಂಗಳೂರು ಕಂಬಳ ಕಣ್ತುಂಬಿಕೊಂಡ ಜಪಾನ್​ ಪ್ರಜೆ; ಸಂತಸದಿಂದ ಹಂಚಿಕೊಂಡ ವಿಷಯಗಳಿವು

    ಮಾಹಿತಿಯ ಪ್ರಕಾರ, ಟಾಟಾ ಮೋಟಾರ್ಸ್ 2025ರ ವೇಳೆಗೆ 10 ಟಾಟಾ ನ್ಯಾನೋಗಳನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದು, ಇವಿ ಕಾರಿನ ಬೆಲೆ 5 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ,(ಏಜೆನ್ಸೀಸ್).

    ಹೃದಯವಿದ್ರಾವಕ ಘಟನೆ: ಕನ್ಸರ್ಟ್​ನಲ್ಲಿ ಕಾಲ್ತುಳಿತ! ನಾಲ್ವರು ವಿದ್ಯಾರ್ಥಿಗಳು ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts