More

    ತಾತಯ್ಯನ ಕಾಲಜ್ಞಾನ ಸರ್ವಕಾಲಕ್ಕೂ ಪ್ರಸ್ತುತ

    ಕೊರಟಗೆರೆ: ಕೈವಾರ ತಾತಯ್ಯ ಎಂದೇ ಪ್ರಸಿದ್ಧಿಯಾಗಿರುವ ಶ್ರೀಯೋಗಿ ನಾರೇಯಣ ಯತ್ರೀಂದ್ರರು ಒಂದು ಜಾತಿಗೆ ಸೀಮಿತವಲ್ಲ, ಅವರ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಆಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಉನ್ನತಿ ಸಾಧಿಸಬೇಕೆಂದು ತಹಸೀಲ್ದಾರ್ ಮುನಿಶಾಮಿರೆಡ್ಡಿ ತಿಳಿಸಿದರು.

    ತಾಲೂಕು ಆಡಳಿತ ಹಾಗೂ ತಾಲೂಕು ಬಲಿಜ ಸಂಘ ಸಂಯುಕ್ತಾಶ್ರಯದಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸದ್ಗುರು ಶ್ರೀ ಯೋಗಿ ನಾರೇಯಣ ಯತ್ರೀಂದ್ರರ 297ನೇ ಜಯಂತ್ಯುತ್ಸವದಲ್ಲಿ ತಾತಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

    ಸಿದ್ಧಿ ಪಡೆದ ಸಾಧಕ ಯೋಗಿ ಮಾತ್ರವಲ್ಲ ಸಮಾಜ ಸುಧಾರಕರಾಗಿ ವೇದಾಂತ ಸಾರಾವಳಿ ತತ್ವ ಕೀರ್ತನೆಗಳು ಸೇರಿ ಹಲವಾರು ಪ್ರಕಾರಗಳ ಆಧ್ಯಾತ್ಮಿಕ ಗ್ರಂಥಗಳೊಂದಿಗೆ ತಪಸ್ಸಿದ್ದಿಯಿಂದ ಮನುಕುಲಕ್ಕೆ ಕಾಲಜ್ಞಾನ ಬರೆದು ಸಮಾಜದಲ್ಲಿ ಮುಂದೆ ನಡೆಯುವ ಭವಿಷ್ಯವಾಣಿ ತಿಳಿಸಿದ ಮಹಾಪುರುಷರು ಎಂದರು.

    ಕೊರಟಗೆರೆ ತಾಲೂಕು ಬಲಿಜ ಸಂಘದ ಮನವಿ ಮೇರೆಗೆ ಪಟ್ಟಣದಲ್ಲಿ ತಾತಯ್ಯನವರ ದೇವಾಲಯ ಹಾಗೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿನಿಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.

    ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್.ಪದ್ಮನಾಭ್ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಕೈವಾರ ತಾತಯ್ಯನವರು ಮಾಡಿದ ಕಾರ್ಯಗಳು ಅಮೋಘ. ಅವರು ರಚಿಸಿರುವ ಕಾಲಜ್ಞಾನ ಸೂಕ್ತ ರೀತಿಯಲ್ಲಿ ಅಧ್ಯಯನ ನಡೆಸಿದರೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ, ಜಗತ್ತಿನ ಎಲ್ಲ ಆಗುಹೋಗುಗಳನ್ನೂ ಬಲ್ಲವರಾಗಿದ್ದರು, ಭವಿಷ್ಯದಲ್ಲಿ ಘಟಿಸಲಿರುವ ಅನಹುತ, ಆಗುಹೋಗುಗಳ ಬಗ್ಗೆ ಕಾಲಜ್ಞಾನ ಮೂಲಕ ಎಚ್ಚರಿಸಿದ್ದಾರೆ, ನಮಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರ ಕಾಲಜ್ಞಾನ ಸೂಕ್ತ ಅಧ್ಯಯನವಾಗಬೇಕು ಎಂದು ತಿಳಿಸಿದರು.

    ತಾಲೂಕು ಬಲಿಜ ಸಂಘದ ಗೌರವಾದ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಗೌರಗಾನಹಳ್ಳಿ ತಿರುಮಲೇಶ್, ಉಪಾಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ನವೀನ್‌ಕುಮಾರ್, ಖಜಾಂಚಿ ಕೊಡ್ಲಹಳ್ಳಿ ವೆಂಕಟೇಶ್, ಜಿಲ್ಲಾ ಪ್ರತಿನಿಧಿ ಕೆ.ಎಲ್.ಆನಂದ್, ಯುವ ಅಧ್ಯಕ್ಷ ಸಂಜಯ್, ಮಹಿಳಾ ಸಂಘದ ಅಧ್ಯಕ್ಷ ಗಿರೀಜಮ್ಮಕೃಷ್ಣಪ್ಪ ಇದ್ದರು

    ಉದ್ಯೋಗದಲ್ಲೂ ಮೀಸಲಾತಿ ನೀಡಿ: ರಾಜ್ಯದಲ್ಲಿ ಬಲಿಜ ಸಮುದಾಯಕ್ಕೆ 1094ರಿಂದ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಅಂದಿನಿಂದಲೂ ಸಮುದಾಯ ಯಾವುದೇ ಸರ್ಕಾರಿ ಸೌಲಭ್ಯವಿಲ್ಲದೆ ಹಾಗೂ ವಿದ್ಯಾಭ್ಯಾಸವಿಲ್ಲದೆ ಮೂಲೆ ಗುಂಪಾಗಿದೆ. ಸಮುದಾಯದ ಪ್ರಮುಖ ಬೇಡಿಕೆಯಾದ 2ಎ ಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ನೀಡಿಲ್ಲ, ಶಿಕ್ಷಣಕ್ಕೆ ಅನ್ವಯವಾಗುವಂತೆ ಸರ್ಕಾರ ಮೀಸಲಾತಿ ನೀಡಿದೆ. ಸಮುದಾಯಕ್ಕೆ ಉದ್ಯೋಗ ರಾಜಕೀಯ ಮೀಸಲಾತಿಯೂ ಬೇಕು ಎಂದು ಸಮುದಾಯದ ಮುಖಂಡ ಕೆ.ವಿ.ಪುರುಷೋತ್ತಮ್ ಒತ್ತಾಯಿಸಿದರು.

    ಬೃಹತ್ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಬಲಿಜ ಸಮುದಾಯದ ನೂರಾರು ಮಂದಿ ಬೆಳಗ್ಗೆ 11ಗಂಟೆಗೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಶ್ರೀ ಯೋಗಿನಾರೇಯಣ ಯತೀಂದ್ರರ ಭಾವಚಿತ್ರ ಹಾಗೂ ಕೃಷ್ಣದೇವರಾಯ, ಅಕ್ಷರಮಾತೆ ಸಾವಿತ್ರಿಬಾಪುಲೆ ಹಾಗೂ ಪರಿಯಾರ್ ಇ.ವಿ.ರಾಮಸ್ವಾಮಿ ಭಾವಚಿತ್ರಗಳೊಂದಿಗೆ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ಮೂಲಕ ತಾಲೂಕು ಪಂಚಾಯಿತಿಯ ವೇದಿಕೆ ತಲುಪಿಸಿದರು.
    ಕೋಟೆ-ಕೊತ್ತಲ ಕಟ್ಟಿಕೊಂಡವರು ಮಹನೀಯರ ಜಯಂತಿ ಆಚರಿಸಿಲ್ಲ

    ತಿಪಟೂರು: ರಾಷ್ಟ್ರವನ್ನಾಳಿ, ಕೋಟೆ-ಕೊತ್ತಲಗಳನ್ನು ಕಟ್ಟಿಕೊಂಡು ಮೆರೆದವರು ಮಹನೀಯರ ಜಯಂತಿಗಳನ್ನು ಆಚರಿಸಲಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

    ತಾಲೂಕು ಬಲಿಜ ಸೇವಾ ಸಮಿತಿಯಿಂದ ನಗರದ ವಿದ್ಯಾನಗರದ ಬಲಿಜ ಸಮುದಾಯ ಭವನದಲ್ಲಿ ಮಂಗಳವಾರ ಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಉದ್ಘಾಟಿಸಿ ಮಾತನಾಡಿದರು.

    ಸಾವಿರಾರು ವರ್ಷಗಳ ಆಕ್ರಮಣದ ನಂತರವೂ, ಭಾರತೀಯ ಸಮಾಜದ ಬಗ್ಗೆ ಇಂದಿಗೂ ಯಾವ ಪಠ್ಯ ಪುಸ್ತಕಗಳಲ್ಲೂ ಹಿಂದು ಜೀವನ ಪದ್ಧತಿ ಬಗ್ಗೆ ಹೇಳದಿದ್ದರೂ, ಹಿಂದೂ ಸಮಾಜದಲ್ಲಿನ ಶ್ರೇಷ್ಠತೆಗಳು ಇಂದಿಗೂ ಅಬಾಧಿತವಾಗಿ ಮುಂದುವರಿದಿರುವದಕ್ಕೆ ಹಿರಿಯರು ಸಮಾಜಕ್ಕಾಗಿ ಜೀವನ ಅರ್ಪಿಸಿದ್ದು ಕಾರಣ. ತಾಯಂದಿರು ಮನೆಯಲ್ಲಿ ಈ ವಿಚಾರಗಳಲ್ಲಿ ಯಾವುದೇ ಅಪವ್ಯಯ ಆಗದಂತೆ ನೋಡಿಕೊಂಡ ಪರಿಣಾಮ ಇಂದಿಗೂ ಹಿಂದೂ ಸಮಾಜದ ಶ್ರೇಷ್ಠತೆ ಮುಂದುವರಿದಿದೆ ಎಂದರು.

    ರಾಷ್ಟವನ್ನಾಳಿ. ಕೋಟೆ-ಕೊತ್ತಲ ಕಟ್ಟಿಕೊಂಡು ಮೆರೆದವರು ಯಾವ ಮಹನೀಯರ ಜಯಂತಿಗಳನ್ನೂ ಮಾಡಲಿಲ್ಲ. ನೊಂದ ಮನಸ್ಸಿಗೆ ಸಮಾಧಾನ ಹೇಳಿ, ಬದುಕುವ ಮಾರ್ಗ ತೋರಿಸಿಕೊಟ್ಟ ಮಹನೀಯರು ಈ ನಿಟ್ಟಿನಲ್ಲಿ ತಮ್ಮ ಸರ್ವಸ್ವವನ್ನೂ ಸಮಾಜಕ್ಕೆ ಸಮರ್ಪಿಸಿದರು. ರಾಮ ಕೇವಲ ಮಹಾರಾಜನಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಮೇಲ್ಪಂಕ್ತಿಯಲ್ಲಿ ಬಾಳುವುದನ್ನು ಕಲಿಸಿಕೊಟ್ಟ ಮರ್ಯಾದಾ ಪುರುಷೋತ್ತಮ ಎಂದು ಬಣ್ಣಿಸಿದರು.

    ಬಲಿಜ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸ್ನೇಹ, ದಿವ್ಯಾ, ವಿದ್ಯಾ ಮುಂತಾದವರನ್ನು ಸನ್ಮಾನಿಸಲಾಯಿತು.

    ಇದಕ್ಕೂ ಮುಂಚೆ ನಗರದ ಗ್ರಾಮದೇವತೆ ಕೆಂಪಮ್ಮ ದೇಗುಲದಿಂದ ವೇದಿಕೆವರೆಗೂ ಕೈವಾರ ತಾತಯ್ಯ ಅವರ ಭಾವಚಿತ್ರವನ್ನು ಜಾನಪದ ಕಲಾತಂಡಗಳ ಮೆರವಣಿಗೆ ಮಾಡಲಾಯಿತು.

    ಮಾವಿನತೋಪು ಬಡಾವಣೆಯ ಮುಖಂಡ ಟೀ.ಸೀನಪ್ಪ, ಶ್ರೀನಿವಾಸ್, ಸುಣ್ಣ ಸೀನಪ್ಪ, ಮಾವಿನತೋಪು ಮಂಜುನಾಥ್, ಕಡ್ಡಿ ನಾಗಣ್ಣ ಇದ್ದರು.

    ತಾತಯ್ಯನ ಕಾಲಜ್ಞಾನ ಸರ್ವಕಾಲಕ್ಕೂ ಪ್ರಸ್ತುತ
    ತಿಪಟೂರು ವಿದ್ಯಾನಗರದ ಬಲಿಜ ಸಮುದಾಯ ಭವನದಲ್ಲಿ ಕೈವಾರ ತಾತಯ್ಯ ಜಯಂತಿಯನ್ನು ಸಚಿವ ಬಿ.ಸಿ.ನಾಗೇಶ್ ಉದ್ಘಾಟಿಸಿದರು. ಡಾ.ಜಿ.ಎಸ್.ಶ್ರೀಧರ್, ಮುಖಂಡ ಲಕ್ಷ್ಮೀನಾರಾಯಣ್, ಹೊನ್ನವಳ್ಳಿ ಗ್ರಾಪಂ ಅಧ್ಯಕ್ಷ ಪ್ರಸಾದ್, ಗೋಪಾಲಕೃಷ್ಣ, ಟಿ.ಆರ್.ಮಂಜುನಾಥ್, ರಮಾನಂದ್, ಪದ್ಮನಾಭ ಕುಮಾರ್ ಇದ್ದರು.

    ತಾತಯ್ಯನ ಕಾಲಜ್ಞಾನ ಸರ್ವಕಾಲಕ್ಕೂ ಪ್ರಸ್ತುತ
    ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ ಗಾಂಧಿ ಪೇಟೆಯಲ್ಲಿರುವ ಬಲಿಜ ಸಮುದಾಯ ಭವನದಲ್ಲಿ ಹುಳಿಯಾರು ಬಲಿಜ ಸಂಘ ಹಾಗೂ ಶ್ರೀ ಯೋಗಿ ನಾರೇಯಣ ಬಲಿಜ ಸಂಘಗಳಿಂದ ಸೋಮವಾರ ಆಯೋಜಿಸಿದ್ದ ಜಯಂತಿತಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಹೂವಿನ ಬಸವರಾಜು, ಏಜೆಂಟ್ ಕುಮಾರ್, ವಿವೇಕಾನಂದ, ರಂಗಸ್ವಾಮಿ, ಸತೀಶ್ ಇದ್ದರು.

    ತುರುವೇಕೆರೆಯ ಪಾಂಡುರಂಗ ದೇವಾಲಯದಲ್ಲಿ ತಾಲೂಕು ಬಲಿಜ ಸಮಾಜದಿಂದ ಮಂಗಳವಾರ ಕೈವಾರ ತಾತಯ್ಯ ಜಯಂತಿ ಆಚರಿಸಲಾಯಿತು. ತಾಲೂಕು ಅಧ್ಯಕ್ಷ ನಂಜುಂಡಪ್ಪ, ಗೌರಾವಾದ್ಯಕ್ಷ ಮೂಡ್ಲಪ್ಪ, ಉಪಾಧ್ಯಕ್ಷ ವೆಂಕಟೇಶ್ ಶೆಟ್ಟರ್, ಸಂಪಿಗೆ ಯೋಗೀಶ್, ಕಾರ್ಯದರ್ಶಿ ರಮೇಶ್ ಇದ್ದರು.

    ಬದಲಾವಣೆ ಮೊದಲು ನಮ್ಮಲ್ಲಾಗಬೇಕು

    ಶಿರಾ: ಬದಲಾವಣೆ ಮೊದಲು ನಮ್ಮಲ್ಲಾಗಬೇಕು. ಬಳಿಕ ಸಮಾಜದ ಬದಲಾವಣೆ ಮಾಡಬೇಕು ಎಂಬುದು ಕಾಲಜ್ಞಾನಿ ಕೈವಾರ ತಾತಯ್ಯನವರ ಚಿಂತನೆಯಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹೇಳಿದರು.

    ತಾಲೂಕು ಕಚೇರಿಯಲ್ಲಿ ಮಂಗಳವಾರ ಯೋಗಿ ನಾರೇಯಣರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

    ಕಾಲಜ್ಞಾನ ಬಹಳ ಕಠಿಣ ಶಾಸ್ತ್ರವಾಗಿದ್ದು, ನಮ್ಮ ಭವಿಷ್ಯ ಆಗಲೇ ಉಲ್ಲೇಖವಾಗಿದೆ. ಘಟನೆಗಳ ಅನಾವರಣ ನಾವು ನೋಡುತ್ತಿದ್ದೇವೆ ಎಂದರು.
    ಆಧ್ಯಾತ್ಮ ಜ್ಞಾನವಿದ್ದರೆ ಎಂತಹ ಕಷ್ಟದಲ್ಲೂ ಕೆಟ್ಟದ್ದನ್ನು ಬಯಸುವುದಿಲ್ಲ. ಅಂತಹ ಆಧ್ಯಾತ್ಮದ ಕಡೆಗೆ ಭಜನಾ ಮಂಡಳಿಯವರು ಭಜನೆ, ಕೀರ್ತನೆಗಳಿಂದ ಕೊಂಡೊಯ್ಯುತ್ತಿರುವುದು ಮಾದರಿ ಎಂದರು.

    ತಾಲೂಕು ಯೋಗಿನಾರೇಯಣ ಸಂಘದ ತಾಲೂಕ ಅಧ್ಯಕ್ಷ ಬಿ .ಗೋವಿಂದಪ್ಪ ಮಾತನಾಡಿ, 2 ವರ್ಷಗಳಿಂದ ಸರ್ಕಾರ ತಾತಯ್ಯನವರ ಜಯಂತಿ ಆಚರಿಸುತ್ತಿರುವುದರಿಂದ ನಾವು ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಅನುಕೂಲವಾಗುತ್ತಿದೆ. ಕಾಲಜ್ಞಾನಿ ಶ್ರೀ ಕೈವಾರ ತಾತಯ್ಯನವರ ಭವಿಷ್ಯ ಇಂದಿಗೂ ನಿಜವಾಗುತ್ತಿದೆ ಎಂದರು.

    ಶಿರಾ ತಾಲೂಕು ಯೋಗಿ ನಾರೇಯಣ ಬಲಿಜ ಸಂಘದ ಯುವ ಘಟಕದ ಅಧ್ಯಕ್ಷ ಸಿಂಚು ನಾರಾಯಣ್, ನಿವೃತ್ತ ಪ್ರಾಶುಂಪಾಲ ಅಶೋಕ್ ಕುಮಾರ್, ಬಲಿಜ ಮುಖಂಡರಾದ ಎಂ.ಎನ್.ರಾಜು, ವಿಜಯಕುಮಾರ್, ವಿರೂಪಾಕ್ಷ, ಗಿರಿಧರ, ತುಳಸಿರಾಮ್, ಕೃಷ್ಣಮೂರ್ತಿ, ನಾರಾಯಣ್, ಮೊದಲೂರು ತಾಪಂ ಅಧ್ಯಕ್ಷೆ ಸುಮಿತ್ರಾ ರಾಮಚಂದ್ರಪ್ಪ ಇತರರಿದ್ದರು.

    ತಾತಯ್ಯನ ಕಾಲಜ್ಞಾನ ಸರ್ವಕಾಲಕ್ಕೂ ಪ್ರಸ್ತುತ
    ಶಿರಾ ತಾಲೂಕು ಕಚೇರಿಯಲ್ಲಿ ಯೋಗಿ ನಾರೇಯಣ ಜಯಂತ್ಯುತ್ಸವ ಆಚರಿಸಲಾಯಿತು. ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಾರುತೇಶ್, ಉಪ ತಹಸೀಲ್ದಾರ್ ನರಸಿಂಹಯ್ಯ, ತಾಲೂಕು ಬಲಿಜ ಸಂಘದ ಅಧ್ಯಕ್ಷ ಶ್ರೀರಂಗಪ್ಪ, ಮಹಿಳಾ ಅಧ್ಯಕ್ಷೆ ಉಮಾದೇವಿ ಇತರರಿದ್ದರು.

    ಕುಲಗುರು ಯೋಗಿನಾರೇಯಣರ ಆರಾಧನೆ ಪುಣ್ಯ

     ಚಿಕ್ಕನಾಯಕನಹಳ್ಳಿ: ಕುಲಗುರು ಶ್ರೀ ಯೋಗಿನಾರೇಯಣರನ್ನು ಆರಾಧಿಸುವುದು ನಮ್ಮ ಪುಣ್ಯ ಎಂದು ನಿವೃತ್ತ ಸೈನಿಕ ಜಗದೀಶ್ ಹೇಳಿದರು.

    ಪಟ್ಟಣದ ಧರ್ಮವರ ಬೀದಿಯ ಶ್ರೀ ರಾಮಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಭವಿಷ್ಯದಲ್ಲಿ ನಮ್ಮ ಮಕ್ಕಳನ್ನು ಉಳಿಸಲು ನಾವು ಹೋರಾಟ ಮಾಡಬೇಕಾಗಿದೆ. ಚೀನಾದ ಶಾಂಗೈ ಪಟ್ಟಣ ಬಿಟ್ಟರೆ ಹಂಪೆಯನ್ನಾಳಿದ ಶ್ರೀ ಕೃಷ್ಣದೇವರಾಯರ ಆಡಳಿತ ಇಂದಿಗೂ ಅಮರ. ಆದರೆ ದುರಾದುಷ್ಟವಶಾತ್ ನಮ್ಮ ಕುಲದವರಿಗೆ ಸರ್ಕಾರಗಳು ಯಾವುದೇ ಅವಕಾಶ ನೀಡದಿರುವುದು, ನಮಗಿದ್ದ 2ಎ ಮೀಸಲಾತಿ ತೆಗೆದುಹಾಕಿದ್ದು ಸರಿಯಲ್ಲ. ನಮ್ಮ ಹಕ್ಕು ಪಡೆಯಲು ನಮ್ಮ ಜನಾಂಗದವರು ಸಂಘಟಿತರಾಗಬೇಕಾಗಿದೆ ಎಂದರು.

    ಬಲಿಜ ಜನಾಂಗದ ಶೆಟ್ಟಿ ನರಸಿಂಹಯ್ಯ ಮಾತನಾಡಿ, ಮನುಜಕುಲದ ಉದ್ಧಾರಕ್ಕಾಗಿ ಅನೇಕ ಗ್ರಂಥಗಳನ್ನು ಬರೆದು, ಹಿತಯೋಕ್ತಿಗಳ ಮೂಲಕ ಜೀವನ ಹೇಗೆ ನಡೆಸಬೇಕು ಎಂದು ತಿಳಿಸಿದವರು ಯೋಗಿನಾರೇಯಣರು. ಅವರ ಕಾಲಜ್ಞಾನವು ಇಂದಿಗೂ ಸತ್ಯವಾಗಿದೆ ಎಂದರು.

    ಶ್ರೀ ರಾಮಮಂದಿರದಿಂದ ಬೆಳ್ಳಿರಥದಲ್ಲಿ ಯೋಗಿನಾರೇಯಣರ ವಿಗ್ರಹವನ್ನು ಪಟ್ಟಣದ ಪ್ರಮುಖ ಬೀದಿಗಳಾದ ಅರಳೇಪೆಟೆ, ಬಿ.ಹೆಚ್.ರಸ್ತೆ, ದೇವಾಂಗಬೀದಿ ಕಾಳಮ್ಮನಗುಡಿಬೀದಿ, ಶೆಟ್ಟರ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

    ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಮಹಿಳಾ ಸಂಘದ ಅಧ್ಯಕ್ಷೆ ವಿಜಯಕುಮಾರಿ, ಯೋಗಿನಾರೇಯಣ ಬ್ಯಾಂಕ್‌ನ ಉಪಾಧ್ಯಕ್ಷೆ ಆಂಜನಮ್ಮ, ಗೌರವಾಧ್ಯಕ್ಷ ಸಾಲ್ಕಟ್ಟೆ ಯೋಗಿಶ್, ಕಾರ್ಯದರ್ಶಿ ಮಲ್ಲೇಶ್, ಮುಖಂಡರಾದ ವೇಣುಗೋಪಾಲ್, ಉಪ್ಪಿನ ಗೋಪಾಲ್, ಸಿಎನ್ ವೆಂಕಟೇಶ್, ಬಿದಿಮನೆ ಆಶೋಕ್, ಬಾಬು, ಹರ್ಷ, ಸುರೇಶ್, ದಯಾನಂದ್, ಪಾಪಣ್ಣ, ನರೇಂದ್ರ ಇತರರು ಇದ್ದರು.

    ತಾತಯ್ಯನ ಕಾಲಜ್ಞಾನ ಸರ್ವಕಾಲಕ್ಕೂ ಪ್ರಸ್ತುತ7 ಸಿಎನ್ ಹಳ್ಳಿ 2ಚಿಕ್ಕನಾಯಕನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಯೋಗಿನಾರೇಯಣರ 297ನೇ ಜಯಂತೋತ್ಸವ ಪ್ರಯುಕ್ತ ಯೋಗಿನಾರೇಯಣ ಗುರುಗಳ ಪಲ್ಲಕ್ಕಿ ಮೆರವಣಿಗೆಯಲ್ಲಿ ಬಲಿಜ ಜನಾಂಗದ ಮುಖಂಡರಾದ ಜಯಂತೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್,ಉಪಾದ್ಯಕ್ಷ ನಾರಾಯಣಪ್ಪ, ಜನಾಂಗದ ಯಜಮಾನ ಪಾಪಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts