More

    ತರೀಕೆರೆ ಗರ್ಭಿಣಿ ವರದಿ ಇಂದು?, ಲ್ಯಾಬ್ ವರದಿಯತ್ತ ಜನರ ಚಿತ್ತ

    ಚಿಕ್ಕಮಗಳೂರು: ಮೂಡಿಗೆರೆಯ ವೈದ್ಯರಿಗೆ ಕರೊನಾ ಸೋಂಕಿಲ್ಲ ಎಂದು ದೃಢಪಟ್ಟ ಬೆನ್ನಲ್ಲೇ ತರೀಕೆರೆಯ ಕೋಡಿಕ್ಯಾಂಪ್​ನ ಗರ್ಭಿಣಿಯಿಂದ ಮೊದಲು ಸಂಗ್ರಹಿಸಿದ್ದ ಗಂಟಲು ದ್ರವದ ಮಾದರಿಯನ್ನೇ ಬೆಂಗಳೂರಿನ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳಿಸಲಾಗಿತ್ತು. ಇದೀಗ ಈ ವರದಿಯೂ ನೆಗೆಟಿವ್ ಬರುತ್ತಾ ಎಂಬ ಕುತೂಲದ ಚರ್ಚೆ ಜಿಲ್ಲೆಯಲ್ಲಿ ಜೋರಾಗಿದೆ.

    ಕಾಫಿ ನಾಡನ್ನು ಬೆಚ್ಚಿ ಬೀಳಿಸಿದ್ದು ಮೇ 19. ಮೂಡಿಗೆರೆಯ ವೈದ್ಯ ಹಾಗೂ ತರೀಕೆರೆಯ ಗರ್ಭಿಣಿ ಮಹಿಳೆ ಹಾಗೂ ಮುಂಬಯಿನಿಂದ ಆಗಮಿಸಿದ ಎನ್.ಆರ್.ಪುರ ಮೂಲದ ಮೂವರಲ್ಲಿ ಸೋಂಕು ಪತ್ತೆಯಾಗಿದೆ ಎನ್ನುವ ಆತಂಕಕಾರಿ ಮಾಹಿತಿ. ಅದುವರೆಗೂ ಹಸಿರು ವಲಯದಲ್ಲೇ ಗುರುತಿಸಿಕೊಂಡಿದ್ದ ಇಡೀ ಕಾಫಿ ನಾಡನ್ನೇ ಅದು ಬೆಚ್ಚಿಬೀಳಿಸಿತ್ತು.

    ಎನ್.ಆರ್.ಪುರದ ಮೂವರಿಗೆ ಮುಂಬಯಿಯೇ ಸೋಂಕು ಮೂಲವೆನ್ನುವುದು ಗೊತ್ತಾಗಿದ್ದರೂ ಮೂಡಿಗೆರೆ ವೈದ್ಯರು ಹಾಗೂ ತರೀಕೆರೆ ಮಹಿಳೆಯ ಸೋಂಕಿನ ಮೂಲ ಪತ್ತೆಹಚ್ಚುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು.

    153ರಲ್ಲಿ 2 ಮಾತ್ರ ಪಾಸಿಟಿವ್: ಸರ್ಕಾರದ ಆದೇಶದಂತೆ ವೈದ್ಯಕೀಯ ತಂಡ ಹಾಗೂ ಗರ್ಭಿಣಿ ಮಹಿಳೆಯರ ರ್ಯಾಂಡಮ್ ಟೆಸ್ಟ್ ನಡೆಸುವ ಸಲುವಾಗಿ ಸಂಗ್ರಹಿಸಿದ ಸ್ಯಾಂಪಲ್​ನಲ್ಲಿ ವೈದ್ಯರು ಹಾಗೂ ಗರ್ಭಿಣಿಯ ಮಾದರಿ ಇದ್ದು, ಕರೊನಾ ಗುಣ ಲಕ್ಷಣವಿರುವವರು ಸೇರಿ ಒಟ್ಟು 153 ವರದಿಯನ್ನು ನಿಮ್ಹಾನ್ಸ್​ನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅದರಲ್ಲಿ ಇಬ್ಬರಿಗೆ ಕರೊನಾ ಸೋಂಕು ತಗುಲಿದೆ ಎಂದು ಮೇ 19ರ ಬೆಳಗ್ಗೆ ಸರ್ಕಾರ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಹೇಳಿತ್ತು. ನಂತರದಲ್ಲಿ ಯಾಂತ್ರಿಕ ದೋಷದಿಂದ ವೈದ್ಯರ ವರದಿ ಫಾಲ್ಸ್ ಪಾಸಿಟಿವ್ ಎನ್ನುವುದು ದೃಢಪಟ್ಟು ವೈದ್ಯರು ಕರೊನಾ ಆಸ್ಪತ್ರೆಯಿಂದ ಬಿಡುಗಡೆಯೂ ಆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts