ತಾಪ್ಸಿ ಪನ್ನು ಶಾಕ್ ಆಗಿದ್ದಾರೆ. ಕಳೆದ ಮೂರು ತಿಂಗಳುಗಳಲ್ಲಿ ಬಾಲಿವುಡ್ನಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಈ ಬಗ್ಗೆ ಹೆಚ್ಚು ಮಾತನಾಡದೆ ದೂರ ಉಳಿದಿದ್ದ ತಾಪ್ಸಿ, ಇದೀಗ ಬಹಳ ದಿನಗಳ ನಂತರ ಶಾಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟಕ್ಕೂ ಅವರು ಶಾಕ್ ಆಗುವುದಕ್ಕೆ ಕಾರಣವೇನು ಗೊತ್ತಾ? ಕಳೆದ ತಿಂಗಳ ಕರೆಂಟ್ ಬಿಲ್.
ಇದನ್ನೂ ಓದಿ: ಓಟಿಟಿಗೆ ಬರಲು ಬಾಲಿವುಡ್ ‘ಅಧಿರ’ ಅಲಿಯಾಸ್ ಸಂಜಯ್ ದತ್ ರೆಡಿ …
ತಾಪ್ಸಿ ಪನ್ನು ಮನೆಗೆ ಕಳೆದ ತಿಂಗಳ ಕರೆಂಟ್ ಬಿಲ್ ಬಂದಿದೆ. ಅದನ್ನು ನೋಡಿ ಅವರು ದಿಗ್ಭ್ರಾಂತರಾಗಿದ್ದಾರೆ. ಅದಕ್ಕೆ ಕಾರಣ, ಅವರಿಗೆ 36 ಸಾವಿರದ ಬಿಲ್ ಬಂದಿರುವುದು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಏಪ್ರಿಲ್ ತಿಂಗಳಿಗೆ 4390 ಬಿಲ್ ಬಂದಿತ್ತು. ಮೇ ತಿಂಗಳಲ್ಲಿ 3850 ರೂಪಾಯಿಗಳ ಬಿಲ್ ಬಂದಿತ್ತು. ಜೂನ್ ತಿಂಗಳು ನೋಡಿದರೆ 36 ಸಾವಿರದ ಬಿಲ್ ಬಂದಿದೆ ಎಂದು ಗಾಬರಿ ವ್ಯಕ್ತಪಡಿಸಿದ್ದಾರೆ.
ಮೂರು ತಿಂಗಳ ಲಾಕ್ಡೌನ್ನಲ್ಲಿ ನಾನು ಮನೆ ಬಿಟ್ಟು ಎಲ್ಲೂ ಹೋಗಿಲ್ಲ. ಹಾಗಂತ ಹೆಚ್ಚು ವಿದ್ಯುತ್ ಸಹ ಬಳಸಿಲ್ಲ. ಆದರೂ ಇಷ್ಟೊಂದು ಏರಿಕೆ ಆಗಿರುವುದಕ್ಕ ಹೇಗೆ ಸಾಧ್ಯ? ಇದು ಈಗಿರುವ ಬಿಲ್ನ ಕಥೆಯಾದರೆ, ನನ್ನ ಇನ್ನೊಂದು ಮನೆಯಲ್ಲಿ ಯಾರೂ ವಾಸವಿಲ್ಲ. ವಾರಕ್ಕೊಂದು ದಿವಸ ಅಲ್ಲಿಗೆ ಹೋಗಿ ಕ್ಲೀನ್ ಮಾಡಿ ಬರುವುದು ಬಿಟ್ಟರೆ, ಮಿಕ್ಕಂತೆ ಅಲ್ಲಿ ಯಾರೂ ವಾಸವಿಲ್ಲ. ಆದರೂ ಆ ಮನೆಯದ್ದೂ ದೊಡ್ಡ ಬಿಲ್ ಬಂದಿದೆ. ಇಷ್ಟು ದೊಡ್ಡ ಬಿಲ್ ನೋಡಿ, ನಮಗೆ ಗೊತ್ತಿಲ್ಲದೆಯೇ ಅಲ್ಲಿ ಯಾರಾದರೂ ವಾಸ ಮಾಡುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಅವರು ಜೋಕ್ ಮಾಡಿದ್ದಾರೆ.
ಇದನ್ನೂ ಓದಿ: ಫ್ಯಾಮಿಲಿ ಮಾತು ಹೊಸ ಚಿತ್ರದ ಬಗ್ಗೆ ಅಮೃತ ಮಂಥನ
ಬರೀ ತಾಪ್ಸಿ ಪನ್ನು ಮಾತ್ರವಲ್ಲ, ಹಲವು ಬಾಲಿವುಡ್ ಸೆಲೆಬ್ರಿಟಿಗಳಿಗೆ ಇದೇ ರೀತಿಯ ಅನುಭವವಾಗಿದೆ. ಪ್ರಮುಖವಾಗಿ ಡಿನೋ ಮೊರಿಯಾ, ಅಲಿ ಫಜಲ್, ವೀರ್ ದಾಸ್ ಮುಂತಾದವರಿಗೆ ಒಂದು ತಿಂಗಳಿಗೆ 30, 40 ಸಾವಿರ ರೂಪಾಯಿಗಳ ಬಿಲ್ ಬಂದಿದೆ. ಅದನ್ನು ನೋಡಿ ಶಾಕ್ ಆಗಿರುವ ಅವರು, ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಬರೆದುಕೊಂಡಿದ್ದಾರೆ.