More

    ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ತಮಿಳುನಾಡು ಒಪ್ಪಿಗೆ ಇದೆ: ಜಲತಜ್ಞ ಕ್ಯಾಪ್ಟನ್ ರಾಜಾರಾವ್ ಹೇಳಿಕೆ

    ಬೆಂಗಳೂರು: ವಿದ್ಯುತ್ ಉತ್ಪಾದನೆಗಾಗಿ ಮೇಕೆದಾಟು ಡ್ಯಾಂ ನಿರ್ಮಾಣ ಮಾಡಬಹುದುದೆಂದು 1924ರಲ್ಲಿ ಅಂದಿನ ಮದ್ರಾಸ್ ಸರ್ಕಾರವೇ ಹೇಳಿದೆ ಎಂದು ಜಲತಜ್ಞ ಕ್ಯಾಪ್ಟನ್ ಎಸ್ .ರಾಜಾರಾವ್ ಹೇಳಿದ್ದಾರೆ.

    ದಿ ಇನ್ ಸ್ಟಿಟ್ಯೂಷನ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ಕರ್ನಾಟಕ ರಾಜ್ಯ ಘಟಕ ಮೇಕೆದಾಟು ಯೋಜನೆಯ ಸಾಧಕ-ಬಾಧಕ ಬಗ್ಗೆ ಚಿರ್ಚಿಸಲು ಶುಕ್ರವಾರ ಎಫ್ ಕೆಸಿಸಿಐನಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದರು.

    ಇದರ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಹಾಗಾಗಿ, ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಇರುವ ಸಣ್ಣಪುಟ್ಟ ತೊಂದರೆಗಳನ್ನು ನಿವಾರಿಸಿಕೊಂಡು ತಕ್ಷಣ ಡ್ಯಾಂ ಕಟ್ಟಲು ಸರ್ಕಾರ ಮುಂದಾಗಬೇಕು. ಯೋಜನೆ ಸಂಬಂಧ ‘ಟರ್ಮ್ಸ್ ಆಫ್ ರೆಫರೆನ್ಸ್’ ತೆರವುಗಳಿಸಲು ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು. 90 ದಿನದೊಳಗೆ ಪರಿಸರ ಅನುಮೋದನೆ ದೊರೆಯದಿದ್ದರೆ ಅನುಮೋದನೆಗಾಗಿ ಕಾಯಬೇಕಿಲ್ಲ. ತಕ್ಷಣ ಕಾಮಗಾರಿ ಆರಂಭಿಸಬಹುದು ಎಂದು ಕಾನೂನಿನಲ್ಲಿ ಉಲ್ಲೇಖವಿದೆ. ಹಾಗಾಗಿ, ಈ ಯೋಜನೆ ಆರಂಭಿಸಲು ಸರ್ಕಾರ ವಿಳಂಬ ಮಾಡಕೂಡದು. ನ್ಯಾಯಮಂಡಳಿಯಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. 45 ವರ್ಷದ ಪೈಕಿ 35 ವರ್ಷದಲ್ಲಿ ತಮಿಳುನಾಡಿಗೆ ಹೆಚ್ಚು ನೀರು ಹರಿದು ಹೋಗಿದೆ. ನೀರಾವರಿಗಾಗಿ ಡ್ಯಾಂ ನಿರ್ಮಾಣ ಮಾಡುತ್ತಿಲ್ಲ. ಕುಡಿಯುವ ನೀರಿಗಾಗಿ ಮಾಡುತ್ತಿದ್ದೇವೆ. ಆನೆ ಕಾರಿಡಾರ್ ಮತ್ತು ವನ್ಯಜೀವಿಗಳಿಗೆ ಧಕ್ಕೆಯಾಗದಂತೆ ಕ್ರಮವಹಿಸಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.

    ನೀರಾವರಿ ತಜ್ಞ ಡಾ.ಗಲಗಲಿ ಮಾತನಾಡಿ, ಮೇಕೆದಾಟು ಯೋಜನೆಗೆ ಎದುರಾದ ತಾಂತ್ರಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಮ್ಮಲ್ಲಿ ಅವಕಾಶವಿದೆ. ಯೋಜನೆ ಆರಂಭಿಸಲು ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೂ ಕಳುಹಿಸಲಾಗಿದೆ. ತಾಂತ್ರಿಕವಾಗಿ ನಾವು ಸಮರ್ಥರಿದ್ದೇವೆ. ನ್ಯಾಯಮಂಡಳಿಯಿಂದ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ನೀರಿನ ಬಳಕೆ ಮತ್ತು ವಿದ್ಯುತ್ ಉತ್ಪಾದನೆಗಾಗಿ ಆಯಾ ರಾಜ್ಯಗಳು ತಮ್ಮ ಹಕ್ಕಿನ ನೀರನ್ನು ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲು ವಕೀಲರು ವಿಫಲರಾಗಿದ್ದಾರೆ. ಜತೆಗೆ, ರಾಜಕೀಯ ನಾಯಕರಗಳ ಇಚ್ಛಾಶಕ್ತಿ ಕೊರತೆಯಿಂದ ಈ ಕಾರ್ಯವಾಗುತ್ತಿಲ್ಲ ಎಂದರು.

    ಕರ್ನಾಟಕ ರಾಜ್ಯ ಘಟಕ ಅಧ್ಯಕ್ಷ ಲಕ್ಷ್ಮಣ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಸೇರಿ ವಿವಿಧ ನೀರಾವರಿ ತಜ್ಞರು ಯೋಜನೆ ಬಗ್ಗೆ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts